ಕೆದಂಬಾಡಿ ಗ್ರಾಮದೈವ ಶೀರಾಡಿ ದೈವಸ್ಥಾನ ಜೀರ್ಣೋದ್ಧಾರ ದಾರಂದ ಮುಹೂರ್ತ-ಕೊಡುಗೆ ಹಸ್ತಾಂತರ

Puttur_Advt_NewsUnder_1
Puttur_Advt_NewsUnder_1

kedambady

ಪುತ್ತೂರು: ಕೆದಂಬಾಡಿ ಗ್ರಾಮದೈವ ಶೀರಾಡಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ನಡೆಯುತ್ತಿದ್ದು, 2017ನೇ ಫೆ.9ರಂದು ಬ್ರಹ್ಮಕಲಶೋತ್ಸವ ಜರಗಲಿದ್ದು, ದೈವಸ್ಥಾನದಲ್ಲಿ ಅ.10ರಂದು ದಾರಂದ ಮುಹೂರ್ತ ಮತ್ತು ದೇಣಿಗೆಯನ್ನು ಸ್ವೀಕರಿಸಲಾಯಿತು. ಸುಮಾರು ರೂ. 75 ಸಾವಿರ ಮೌಲ್ಯದ ಕೆತ್ತನೆ ಕೆಲಸಗಳಿಂದ ಕೂಡಿದ ದಾರಂದವನ್ನು ಉಜಿರೆ ಉಮೇಶ ಶೆಟ್ಟಿಯವರು ದಾನವಾಗಿ ನೀಡಿದರು. ಜೀರ್ಣೋದ್ಧಾರ ಕಾರ್ಯಕ್ಕೆ ಮುಂಡಾಳಗುತ್ತು ಶೀಲಾವತಿ ರೈಯವರ ಪರವಾಗಿ ಡೆಕ್ಕಳ ರಾಮಯ್ಯ ರೈ ತಿಂಗಳಾಡಿಯವರು ಒಟ್ಟು 2 ಲಕ್ಷ, ಮುಂಡಾಳಗುತ್ತು ಡಾ. ತಿಮ್ಮಪ್ಪ ರೈ ಬೆಂಗಳೂರು ರೂ. 25 ಸಾವಿರ, ಕುದ್ಕಾಡಿ ಶೀನಪ್ಪ ರೈ ರೂ. 25 ಸಾವಿರ, ವಿಜಯ ಕುಮಾರ್ ರೈ ಕೋರಂಗ ರೂ. 5ಸಾವಿರ, ಪುರಂದರ ರೈ ಕೊರಿಕ್ಕಾರು, ನಿಶ್ಮಿತಾ ಕುಂಬ್ರ ರೂ. 5 ಸಾವಿರ, ಅರಿಯಡ್ಕ ಕರುಣಾಕರ ರೈ ರೂ. 10 ಸಾವಿರ, ಕುಯ್ಯಾರು ರವೀಂದ್ರನಾಥ ರೈ ರೂ. ಹನ್ನೊಂದು ಸಾವಿರದ ನೂರ ಹನ್ನೊಂದು ಧನಸಹಾಯ ನೀಡಿದರು. ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕಡಮಜಲು ಸುಭಾಶ್ ರೈಯವರು ವಿಷಯ ಪ್ರಸ್ತಾಪಿಸಿ, ಜೀರ್ಣೋದ್ಧಾರಕ್ಕೆ ಎಲ್ಲರ ಸಹಕಾರವನ್ನು ಯಾಚಿಸಿ ಗ್ರಾಮಸ್ಥರೆಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಮುಂಡಾಳಗುತ್ತು ಸುಧಾಕರ ರೈ, ಪ್ರಧಾನ ಕಾರ್ಯದರ್ಶಿ ಮುಂಡಾಳಗುತ್ತು ಮನೋಹರ ರೈ, ಕೋಶಾಧಿಕಾರಿ ಮುಂಡಾಳಗುತ್ತು ವಸಂತ ರೈ, ಉಪಾಧ್ಯಕ್ಷರುಗಳಾದ ಕೋರಂಗ ರಾಜೀವ ರೈ, ರಾಘವ ಗೌಡ ಕೆರೆಮೂಲೆ, ಡಿಂಬ್ರಿ ಗುತ್ತು ಚಂದ್ರಹಾಸ ರೈ ಕೊಡಂಕೀರಿ, ಇದ್ಯಪೆ ಶಿವರಾಮ ಗೌಡ ಹಾಗೂ ಆರ್ಥಿಕ ಸಮಿತಿ ಸಂಚಾಲಕ ವಿಜಯ ಕುಮಾರ್ ರೈ ಕೋರಂಗ, ಸಹ ಸಂಚಾಲಕ ಪುರಂದರ ರೈ ಕುರಿಕ್ಕಾರು, ಗೌರವ ಸಲಹೆಗಾರ ಡೆಕ್ಕಳ ರಾಮಯ್ಯ ರೈ, ಬೂಡಿಯಾರ್ ರಾಧಕೃಷ್ಣ ರೈ, ಕೆ. ಈಶ್ವರ ಆಳ್ವ ಮತ್ತು ಸುಮಾರು 150 ಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.