Breaking News

ಮಲಾಮೆ ಮಾಪಿಲ ಕಲಾ ಅಕಾಡೆಮಿ ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆಯಲಿದೆ  ಕಾರ್ಯಕಾರಿ ಸಭೆಯಲ್ಲಿ ಅಧ್ಯಕ್ಷ ಇಸ್ಮಾಯಿಲ್ ಆರ‍್ಲಪದವು ಹೇಳಿಕೆ

Puttur_Advt_NewsUnder_1
Puttur_Advt_NewsUnder_1

malameಪುತ್ತೂರು: ಕರ್ನಾಟಕ ರಾಜ್ಯ ಮಲಾಮೆ ಮಾಪಿಲ ಕಲಾ ಅಕಾಡೆಮಿಯು ಕರ್ನಾಟಕದಲ್ಲಿ ಹೆಮ್ಮರವಾಗಿ ಬೆಳೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷರಾದ ಪಿ.ಕೆ. ಇಸ್ಮಾಯಿಲ್ ಆರ‍್ಲಪದವುರವರು ಹೇಳಿದರು. ಅವರು ಅ.13ರಂದು ಬನ್ನೂರು ಸ್ಟಾರ್ ಸ್ಟುಡಿಯೋದಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ಮಾತನಾಡಿದರು.
ಉಪಾಧ್ಯಕ್ಷರಾದ ಹಮೀದ್ ಸವಣೂರು, ಅಹ್ಮದ್ ಕುಂಞಿ ಬೊಳ್ವಾರು, ಕಾರ್ಯದರ್ಶಿ ಅಶ್ರಫ್ ಸವಣೂರು, ಸಂಘಟನಾ ಕಾರ್ಯದರ್ಶಿ ಲತೀಫ್ ಕುಂಬ್ರ, ಪತ್ರಿಕಾ ಕಾರ್ಯದರ್ಶಿ ಮುಸ್ತಫಾ ಸುಳ್ಯ, ಕೋಶಾಧಿಕಾರಿ ದಾವೂದ್ ಸಂಪ್ಯ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಸಾಬಿಕ್ ಪುತ್ತೂರು, ಜಾಬಿರ್ ದರ್ಬೆ ಹಾಗೂ ಸದಸ್ಯರಾದ ಶಬೀರ್ ರೆಂಜ ಇವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ನಿಜಾಂ ಕೊಳಂಬೆ ಸ್ವಾಗತಿಸಿ, ಕಾರ್ಯದರ್ಶಿ ಅಶ್ರಫ್ ಸವಣೂರು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.