ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದ ಪೂರ್ವಭಾವಿ ಸಭೆ

Puttur_Advt_NewsUnder_1
Puttur_Advt_NewsUnder_1

kabaddiಉಪ್ಪಿನಂಗಡಿ: ದೈಹಿಹಕ ಶಿಕ್ಷಣ ಶಿಕ್ಷಕರಾಗಿದ್ದ ದಿ. ವೆಂಕಟರಮಣ ಕಾರಂತರ ಸ್ಮರಣಾರ್ಥ ಕಳೆದ ನಾಲ್ಕು ವರ್ಷಗಳಿಂದ ಶ್ರೀ ದುರ್ಗಾ ಮಿತ್ರವೃಂದದ ವತಿಯಿಂದ ಪೆರಿಯಡ್ಕದ ಹೊಸಗದ್ದೆಯಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ ಈ ಬಾರಿ ಡಿ.3ರಂದು ನಡೆಯಲಿದ್ದು, ಇದರ ಪೂರ್ವಾಭಾವಿ ಸಭೆ ಪೆರಿಯಡ್ಕದ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ನಡೆಯಿತು.
ಪಂದ್ಯಾಟವನ್ನು ಕೂಡಾ ಅದ್ದೂರಿಯಾಗಿ ಹೊಸಗದ್ದೆ ಶಾಲಾ ವಠಾರದಲ್ಲಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಜಿಲ್ಲೆಯ ಕಬಡ್ಡಿ ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಆಮಂತ್ರಣ ನೀಡಲು ಹಾಗೂ ರಾತ್ರಿ ಏಳು ಗಂಟೆಗೆ ಉದ್ಘಾಟನಾ ಸಮಾರಂಭ ನಡೆಸಿ, ಸ್ಪರ್ಧೆಗೆ ಚಾಲನೆ ನೀಡಲು ತೀರ್ಮಾನಿಸಲಾಯಿತು. ಪ್ರಥಮ ಬಹುಮಾನವಾಗಿ 11,111 ರೂಪಾಯಿ ನಗದು ಹಾಗೂ ಟ್ರೋಫಿ, ದ್ವಿತೀಯ 8,111 ರೂ. ಹಾಗೂ ಟ್ರೋಫಿ, ತೃತೀಯ 6,111 ರೂ. ಹಾಗೂ ಟ್ರೋಫಿ ಮತ್ತು ಚತುರ್ಥ ಬಹುಮಾನವಾಗಿ 4,111 ರೂ. ಮತ್ತು ಟ್ರೋಫಿ ನೀಡಲು ನಿರ್ಧರಿಸಲಾಯಿತು. ಅಲ್ಲದೇ, ಅತ್ಯುತ್ತಮ ದಾಳಿಗಾರ, ಹಿಡಿತಗಾರ, ಮತ್ತು ಅಲ್‌ರೌಂಡರ್‌ಗೆ ವಿಶೇಷ ಬಹುಮಾನ ನೀಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಶ್ರೀ ದುರ್ಗಾ ಮಿತ್ರವೃಂದದ ಪದಾಧಿಕಾರಿಗಳಾದ ಸಂತೋಷ್ ಕುಮಾರ್ ಪಂರ್ದಾಜೆ, ಸುರೇಶ್ ಅತ್ರಮಜಲು, ಗಣೇಶ್ ಕಿಂಡೋವು, ಹರೀಶ್ ಪಟ್ಲ, ಗುರುನಾಥ್, ರಾಜೇಶ್ ನೆಕ್ಕರೆ, ಉಪೇಂದ್ರ, ಬಾಲಕೃಷ್ಣ ಶರಣ್ಯ, ದಿನೇಶ್ ಕಣಿಯ, ರಮೇಶ್ ನೆಕ್ಕರೆ, ಸತೀಶ ನೆಡ್ಚಿಲ್, ಸುಧಾಕರ ಕಣಿಯ, ಧರ್ನಪ್ಪ ಕಣಿಯ, ಮುರಳಿ, ಉಮೇಶ್ ಕೋಡಿಜಾಲ್ ಮತ್ತಿತರರು ಉಪಸ್ಥಿತರಿದ್ದರು.

ದಿ| ವೆಂಕಟ್ರಮಣ ಕಾರಂತರ ಸ್ಮರಣಾರ್ಥ

  • ಡಿ. 3ರಂದು ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ ನಡೆಸಲು ತೀರ್ಮಾನ
  • ಹೊಸಗದ್ದೆ ಶಾಲಾ ವಠಾರದಲ್ಲಿ ಪಂದ್ಯಾಟ
  • ಪ್ರಥಮ ಬಹುಮಾನ ರೂ.11,111, ದ್ವಿತೀಯ ರೂ.8,111, ತೃತೀಯ ರೂ.6,111, ಚತುರ್ಥ ರೂ.4,111 ಮತ್ತು ಟ್ರೋಫಿ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.