Breaking News

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಬಾಲಕೃಷ್ಣ ಬಳ್ಳೇರಿ ಸಹಿತ 9 ಸದಸ್ಯರ ನೇಮಕ

Puttur_Advt_NewsUnder_1
Puttur_Advt_NewsUnder_1

kukkeಕಡಬ: ಪ್ರಖ್ಯಾತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಕಡಬದ ಕಾಂಗ್ರೆಸ್ ಮುಖಂಡ, ನೂಜಿಬಾಳ್ತಿಲ ಗ್ರಾಮದ ಬಳ್ಳೇರಿ ನಿವಾಸಿ ಬಾಲಕೃಷ್ಣ ಗೌಡ ಸಹಿತ 9 ಮಂದಿಯನ್ನು ಸದಸ್ಯರನ್ನಾಗಿ ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಜಿಲ್ಲಾ ಕಾಂಗ್ರೆಸ್ ಸದಸ್ಯರಾಗಿರುವ ಬಾಲಕೃಷ್ಣ ಬಳ್ಳೇರಿಯವರು ಕಡಬ ಮಂಡಲ ಪಂಚಾಯತ್ ಸದಸ್ಯರಾಗಿ, ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಕಡಬ ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷರಾಗಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ‍್ಯದರ್ಶಿಯಾಗಿ, ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷರಾಗಿ, ಒರುಂಬಾಲು ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ, ಕುರಿಯಾಳಕೊಪ್ಪ ಶ್ರೀ ಲಕ್ಷ್ಮೀ ಜನಾದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ರಾಜಕೀಯ, ಧಾರ್ಮಿಕ ಕ್ಷೇತ್ರಗಳಲ್ಲಿ ದುಡಿದಿರುವ ಇವರು ನೂಜಿಬಾಳ್ತಿಲ ಗ್ರಾಮದ ಬಳ್ಳೇರಿ ಕಾಳಪ್ಪ ಗೌಡರವರ ಪುತ್ರ.

ವ್ಯವಸ್ಥಾಪನಾ ಸಮಿತಿಯ ಇತರ ಸದಸ್ಯರು

*ನಿತ್ಯಾನಂದ ಮುಂಡೋಡಿ

*ಮಾಧವ ಡಿ.ದೇವರಗದ್ದೆ

*ಶ್ರೀಮತಿ ರಾಜೀವಿ ಆರ್.ರೈ ಬೆಳ್ಳಾರೆ

*ಶ್ರೀಮತಿ ದಮಯಂತಿ ಕೂಜುಗೋಡು ಕೆ.ಎಸ್

*ಕೆ.ಕೃಷ್ಣ ಮೂರ್ತಿ ಭಟ್ ಅಗ್ರಹಾರ

*ರವೀಂದ್ರನಾಥ ಶೆಟ್ಟಿ ಕೇನ್ಯ

*ಮಹೇಶ್ ಕುಮಾರ್ ಕೆ.ಎಸ್. ಕರಿಕ್ಕಳ ಮತ್ತು

*ಪ್ರಧಾನ ಅರ್ಚಕರು/ಅರ್ಚಕರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.