ತಾಯಿ ಭಾರತಿಯ ಪಾದಪೂಜೆಗೆ ಸಮರ್ಪಿಸುವ ಪುಷ್ಪಗಳಾಗೋಣ-ರವೀಂದ್ರ ಪಿ. ಪ್ರಿಯದರ್ಶಿನಿ ಮಕ್ಕಳ ಸನಿವಾಸ ಶಿಬಿರದ 3ನೇ ದಿನ

Puttur_Advt_NewsUnder_1
Puttur_Advt_NewsUnder_1

12ಪುತ್ತೂರು: ಸನಾತನ ಸಂಸ್ಕೃತಿಯ ಭಾರತದ ಸ್ವಾತಂತ್ರ್ಯ ಪೂರ್ವದ ಘಟನೆಗಳನ್ನು ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವೀರರಂತೆ ನಾವು ಸದಾ ತಾಯಿ ಭಾರತೀಯ ರಕ್ಷಣೆಗಾಗಿ ಪಣತೊಡುತ್ತಾ ಆಕೆಯ ಪಾದಪೂಜೆಯ ಪುಷ್ಪಗಳಾಗಿ ಬದುಕೋಣ ಎಂದು ವಿವೇಕಾನಂದ ಪಿಯು ಕಾಲೇಜಿನ ಅಧ್ಯಕ್ಷ ರವೀಂದ್ರ ಪಿ. ಹೇಳಿದರು. ಬೆಟ್ಟಂಪಾಡಿ ಪ್ರಿಯದರ್ಶಿನಿಯಲ್ಲಿ ನಡೆಯುತ್ತಿರುವ ‘ಅಲಂಕಾರ’ ಮಕ್ಕಳ ಸನಿವಾಸ ಶಿಬಿರದಲ್ಲಿ ಅ. 13ರಂದು ಅವರು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ದಿನದ ಎರಡನೇ ಅವಧಿಯಲ್ಲಿ ಸುಳ್ಯದ ಚಿತ್ರ ಕಲಾವಿದ ಎಲಿಮಲೆ ಜ್ಞಾನಗಂಗಾ ಪ್ರಸನ್ನ ಐವರ್ನಾಡು ಇವರು ಮುಖವಾಡಗಳ ತಯಾರಿಯ ಕ್ರಾಫ್ಟ್ ಕಲಿಸಿಕೊಟ್ಟರು. ಮೂರನೇಯ ಅವಧಿಯಲ್ಲಿ ‘ಅನ್ನದ ಬಟ್ಟಲಿನಲ್ಲಿ ವಿಷ’ ಎಂಬ ವಿಷಯದ ಬಗ್ಗೆ ವೀಡಿಯೋ ಕ್ಲಿಪ್ಪಿಂಗ್ಸ್‌ಗಳ ಮೂಲಕ ಮಕ್ಕಳಿಗೆ ಆಹಾರದಲ್ಲಿ ವಿಷಕಾರಿ ವಸ್ತುಗಳ ಬಳಕೆಯ ಬಗ್ಗೆ ಮಾಹಿತಿ ನೀಡಲಾಯಿತು. ಕಡಬ ಸರಸ್ವತೀ ವಿದ್ಯಾಲಯದ ಪ್ರಾಂಶುಪಾಲ ಮಹೇಶ್ ನಿತಿಲಾಪುರ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ದಿನದ 4ನೇ ಅವಧಿಯಲ್ಲಿ ನವೋದಯ ಪ್ರೌಢಶಾಲೆ ಬೆಟ್ಟಂಪಾಡಿಯ ನಿವೃತ್ತ ಮುಖ್ಯಗುರು ವೆಂಕಟ್ರಮಣ ಭಟ್ ಇತ್ತೀಚೆಗಷ್ಟೇ ಮುಗಿಸಿದ ತಮ್ಮ ಈಶಾನ್ಯ ರಾಜ್ಯಗಳ ಪ್ರವಾಸದ ಬಗ್ಗೆ ಅನುಭವಗಳನ್ನು ಹಂಚಿಕೊಂಡರು.

ಕೊನೆಯ ಅವಧಿಯಲ್ಲಿ ‘ಸಮಯಪಾಲನೆ’ ಬಗ್ಗೆ ಜೇಸಿ ರಾಷ್ಟ್ರೀಯ ತರಬೇತುದಾರ ಕೃಷ್ಣಮೋಹನ್ ತರಬೇತಿ ನಡೆಸಿಕೊಟ್ಟರು. ಆಡಳಿತ ಮಂಡಳಿಯ ಸದಸ್ಯ ಜಗನ್ನಾಥ ಶೆಟ್ಟಿ ಕೊಮ್ಮಂಡ ಉಪಸ್ಥಿತರಿದ್ದರು.

ಸಂಜೆ ಭಾರತಮಾತೆಯ ವಿದ್ಯುತ್ ದೀಪಗಳಿಂದ ಅಲಂಕೃತವಾದ ಸಾಂಕೇತಿಕ ರಥಯಾತ್ರೆ ಬೆಟ್ಟಂಪಾಡಿಯ ಪರಿಸರದಲ್ಲಿ ಸಂಚರಿಸುವ ಮೂಲಕ ಶಿಬಿರಾರ್ಥಿಗಳಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ತರಲಾಯಿತು. ರಾತ್ರಿ  `ಮಾತೃ ಭೋಜನ’ ನಡೆಯಿತು. 19ಮನೆಗಳಿಂದ ಗೃಹಿಣಿಯರು ಶಿಬಿರಾರ್ಥಿಗಳಿಗೆ ಮನೆಯೂಟದ ನೆನಪನ್ನು ಸವಿಯುವ ಅವಕಾಶ ಮಾಡಿಕೊಟ್ಟರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.