ಡಾ| ಅಶ್ರಫ್ ಕಮ್ಮಾಡಿ ನೇತೃತ್ವದಲ್ಲಿ ಬಹರೈನ್‌ನಲ್ಲಿ ಆಶ್ಕೋ ಕನ್‌ಸ್ಟ್ರಕ್ಷನ್ಸ್ ಕಂಪೆನಿ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

kammady

ಪುತ್ತೂರು: ಅನಿವಾಸಿ ಉದ್ಯಮಿ ಡಾ| ಅಶ್ರಫ್ ಎಸ್. ಕಮ್ಮಾಡಿರವರ ನಿರ್ದೇಶನದಲ್ಲಿ ಕಿಂಗ್‌ಡಮ್ ಆಫ್ ಬಹರೈನ್‌ನಲ್ಲಿ ಈಗಾಗಲೇ ಆರಂಭಿಸಲಾಗಿರುವ ಆಶ್ಕೋ ಬಿಸಿನೆಸ್ ಗ್ರೂಪ್‌ಗೆ ಆಶ್ಕೋ ಕನ್‌ಸ್ಟ್ರಕ್ಷನ್ಸ್ ಕಂಪೆನಿ ಎಂಬ ಹೆಸರಿನಲ್ಲಿ ಹೊಸ ಉದ್ಯಮವನ್ನು ಸಂಸ್ಥೆಯಲ್ಲಿ ಪರಿಚಯಿಸಲಾಗಿದ್ದು ಈ ಸಂಸ್ಥೆಯು ಅ.14ರಂದು ಉದ್ಘಾಟನೆಗೊಂಡಿತು.

ಕಿಂಗ್‌ಡಮ್ ಆಫ್ ಬಹರೈನ್‌ನ ಅಮೀರಿ ಕೋರ್ಟ್‌ನ ಡೈರೆಕ್ಟರ್ ಅಬ್ದುಲ್ಲ ನೈಮಿರವರು ಸಂಸ್ಥೆಯನ್ನು ಉದ್ಘಾಟಿಸಿ ಶುಭಹಾರೈಸಿದರು. ಬಹರೈನ್‌ನ ಧವನ್ ಗ್ರೂಪ್ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ಅಬ್ದುಲ್ ಜಲೀಲ್ ಧವನ್‌ರವರು ಆಗಮಿಸಿ ಶುಭಹಾರೈಸಿದರು. ಆಶ್ಕೋ ಗ್ರೂಪ್‌ನ ಚೇರ್‌ಮ್ಯಾನ್ ಡಾ| ಅಶ್ರಫ್ ಎಸ್ ಕಮ್ಮಾಡಿರವರು ಸ್ವಾಗತಿಸಿ, ಕಳೆದ ಮೂರು ವರ್ಷಗಳಿಂದ ಎಂಬ ಹೆಸರಿನಲ್ಲಿ ಮಾಹಿತಿ ತಂತ್ರಜ್ಞಾನ, ರಿಯಲ್ ಎಸ್ಟೇಟ್ ಹಾಗೂ ಟ್ರೇಡಿಂಗ್ ಉದ್ಯಮವನ್ನು ಆರಂಭಿಸಿ ಬಹರೈನ್‌ನಲ್ಲಿ ಬಹಳ ಜನಪ್ರಿಯ ಹಾಗೂ ಲೀಡಿಂಗ್ ಎನಿಸಿಕೊಂಡಿರುವ ಆಶ್ಕೋ ಬಿಸಿನೆಸ್ ಗ್ರೂಪ್‌ಗೆ ಇದೀಗ ಹೊಸ ಉದ್ಯಮವಾದ ಆಶ್ಕೋ ಕನ್‌ಸ್ಟ್ರಕ್ಷನ್ಸ್ ಕಂಪೆನಿಯನ್ನು ಪರಿಚಯಿಸುತ್ತಿzವೆ ಎಂದು ಹೇಳಿದರು. ಆಶ್ಕೋ ಬಿಸಿನೆಸ್ ಗ್ರೂಪ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಅಶ್ರಫ್ ಅಡ್ಕರ್‌ರವರು ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.