ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ; ಚಿಕಿತ್ಸೆಗೆಂದು ಬಂದ ವಿಕಲಚೇತನರು ವೈದ್ಯರಿಲ್ಲದೆ ವಾಪಾಸ್ ಹೋದರು

Puttur_Advt_NewsUnder_1
Puttur_Advt_NewsUnder_1

govt govt1ಪುತ್ತೂರು: ಜಿಲ್ಲೆಯ ಅತೀ ದೊಡ್ಡ ಆಸ್ಪತ್ರೆಯಾದ ವೆನ್ಲಾಕ್ ಹೊರತುಪಡಿಸಿದರೆ ಪುತ್ತೂರಿನ ಸರಕಾರಿ ಆಸ್ಪತ್ರೆಯು ಎರಡನೇ ದೊಡ್ಡ ಆಸ್ಪತ್ರೆಯಾಗಿದ್ದು, ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯದ ಗ್ರಾಮೀಣ ಭಾಗದ ಜನತೆಯು ಹೆಚ್ಚಿನ ಚಿಕಿತ್ಸೆಗಾಗಿ ಇದೇ ಆಸ್ಪತ್ರೆಯನ್ನು ಅವಲಂಬಿಸಿಕೊಂಡು ಬರುತ್ತಿದ್ದಾರೆ. ಆದರೆ ದಿನೇ ದಿನೇ ಆಸ್ಪತ್ರೆಯಲ್ಲಿ ಅಗತ್ಯವಾದ ವೈದ್ಯರ ಕೊರತೆ ಕಾಡುತ್ತಿದ್ದು, ೧೫ ವೈದ್ಯರ ನೇಮಕಾತಿ ಹೊಂದಿರುವ ಈ ಆಸ್ಪತ್ರೆಯಲ್ಲಿ ಇದೀಗ ಇರುವುದು ಕೇವಲ ೯ ವೈದ್ಯರು ಮಾತ್ರ. ಗರ್ಭಿಣಿಯರಿಗಾಗಿ ಅತೀ ಪ್ರಾಮುಖ್ಯವಾಗಿ ಬೇಕಾದ ಪ್ರಸೂತಿ ತಜ್ಞೆ ಡಾ. ಜಯಶ್ರೀ ಯವರು ಇತ್ತೀಚೆಗೆ ಹೊಸದಾಗಿ ನೇಮಕಾತಿ ಹೊಂದಿದ್ದರೂ  ಅವರು ರಜೆಯ ನಿಮಿತ್ತ ತೆರಳಿ ತಿಂಗಳು ಕಳೆದರೂ ಇನ್ನೂ ಆಸ್ಪತ್ರೆಗೆ ಬಂದಿಲ್ಲ. ಬದಲಿ ವ್ಯವಸ್ಥೆಯೂ ಆಗದಿರುವುದರಿಂದ ಬಡ ಗರ್ಭಿಣಿ ಮಹಿಳೆಯರು ಇದೀಗ ದೂರದ ಮಂಗಳೂರಿನ ಆಸ್ಪತ್ರೆಯನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಬಂದಿದೆ. ಎನ್ನುವ ದೂರು ವ್ಯಕ್ತವಾಗಿದೆ.

ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿ ಡಾ. ಪ್ರದೀಪ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಸರ್ಜನ್ ಆಗಿದ್ದಾರೆ. ಆದರೂ ಆಸ್ಪತ್ರೆಗೆ ಮುಖ್ಯ ಸರ್ಜನ್ ಎಂಬ ನೇಮಕಾತಿ ಇರುತ್ತದೆ. ಆ ಹುದ್ದೆ ಇಲ್ಲಿ ಖಾಲಿ ಇದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿ ಡಾ. ಅರ್ಚನಾ, ಕಣ್ಣಿನ ತಜ್ಞರಾಗಿ ಡಾ. ಆಶಾ ಪುತ್ತೂರಾಯ, ಕಿವಿ ಗಂಟಲು ಮೂಗಿನ ತಜ್ಞರಾಗಿ ಡಾ. ವೀಣಾ, ಅರಿವಳಿಕೆ ತಜ್ಞರಾಗಿ ಡಾ. ಜಯಕುಮಾರಿ, ಮೈಕ್ರೋಪಾಲಿಜಿಸ್ಟ್ ಆಗಿ ಡಾ. ಜಗದೀಶ್, ದಂತ ಚಿಕಿತ್ಸಾ ತಜ್ಞರಾಗಿ ಡಾ. ಜಯದೀಪ್, ಎಲುಬು ಮತ್ತು ಕೀಲು ತಜ್ಞರಾಗಿ ಡಾ. ಅಜಯ್, ಆಯುರ್ವೇದಿಕ್ ತಜ್ಞರಾಗಿ  ಡಾ. ಸ್ಮಿತಾ ರವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಲುಬು ಮತ್ತು ಕೀಲು ತಜ್ಞ ಡಾ. ಅಜಯ್‌ರವರು ಕಳೆದ ಮೂರು ದಿನಗಳಿಂದ ರಜೆಯಲ್ಲಿದ್ದಾರೆ. ಪ್ರತಿ ತಿಂಗಳ ೨ನೆ ಶುಕ್ರವಾರ ನಡೆಯುವ ವಿಕಲಚೇತನರ ಚಿಕಿತ್ಸಾ ಶಿಬಿರಕ್ಕೆ ಬಂದ ವಿಕಲಚೇತನರು ಅ.೧೪ಕ್ಕೆ ಬಂದು ವೈದ್ಯರಿಲ್ಲದೆ ವಾಪಾಸಾದ ಘಟನೆಯೂ ನಡೆದಿದೆ. ಪ್ರಸ್ತುತ ಎಲ್ಲಾ ತರಹದ ರೋಗಿಗಳನ್ನೂ ಸದ್ಯ ಇರುವ ವೈದ್ಯರೇ ನಿಭಾಯಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಪುತ್ತೂರು , ಸುಳ್ಯ ಹಾಗೂ ಬೆಳ್ತಂಗಡಿ ಪ್ರದೇಶದ ಬಡ ಕುಟುಂಬಗಳು ಹೆಚ್ಚಿನ ಚಿಕಿತ್ಸೆಗಾಗಿ ಇದೇ ಆಸ್ಪತ್ರೆಯನ್ನು ಅವಲಂಭಿಸಿದ್ದು, ಚಿಕಿತ್ಸೆಗಾಗಿ ಬರುವ ರೋಗಿಗಳು ಇಲ್ಲಿ ಚಿಕಿತ್ಸೆ ದೊರೆಯದೆ ಇತರ ಆಸ್ಪತ್ರೆಗಳಿಗೆ ದಾಖಲಾಗಬೇಕಾದ ಸ್ಥಿತಿ ಉಂಟಾಗಿದೆ.  ಮಹಿಳೆಯರಿಗೆ ಅತೀ ಅಗತ್ಯವಾಗಿ ಬೇಕಾದಂತಹ ಸ್ತ್ರೀರೋಗ ತಜ್ಞ ಮತ್ತು ಪ್ರಸೂತಿ ತಜ್ಞರ ಕೊರತೆಯನ್ನು ಈ ಆಸ್ಪತ್ರೆ ಎದುರಿಸುತ್ತಿದ್ದು, ಬಡ ಕುಟುಂಬಗಳು ಇದೀಗ ಹೆರಿಗೆಗಾಗಿ ಧರ್ಮದ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ.

ವೈದ್ಯರನ್ನು ತರಿಸುವ ಪ್ರಯತ್ನ ಮಾಡಿಯೇ ಸಿದ್ಧ..

ನಿಮ್ಮಲ್ಲಿ ವೈದ್ಯರು ಇದ್ದರೆ ಕೂಡಲೇ ಅಪಾಯಿಂಟ್‌ಮೆಂಟ್ ಮಾಡುವ. ರೂ. 1ಲಕ್ಷ ವೇತನ ಕೊಡಲಾಗುವುದು ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ತಿಳಿಸಿದ್ದಾರೆ. ಆದರೆ ಹೆಚ್ಚಿನ ವೈದ್ಯರು ಸರಕಾರಿ ಕೆಲಸಕ್ಕೆ ಬಾರದೆ ಖಾಸಗಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದು ಸಮಸ್ಯೆ. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಅಲ್ಲಿನ ಆಡಳಿತ ವೈದ್ಯಾಧಿಕಾರಿ ಡಾ. ಪ್ರದೀಪ್ ನಾರ್ಮಲ್ ಡೆಲಿವರಿ ಮಾಡಿಸುತ್ತಾರೆ.  ಕ್ರಿಟಿಕಲ್ ಕಂಡಿಷನ್ ಇದ್ದರೆ ಮಾತ್ರ ಮಂಗಳೂರಿಗೆ ಕಳುಹಿಸಲಾಗುತ್ತಿದೆ. ಆದರೂ ಪುತ್ತೂರು ಸರಕಾರಿ ಆಸ್ಪತ್ರೆಗೆ ಖಂಡಿತಾ ಸ್ತ್ರೀರೋಗ, ಪ್ರಸೂತಿ ತಜ್ಞರನ್ನು ಕೊಡುವ ಪ್ರಯತ್ನ ಮಾಡಿಯೇ ಮಾಡುತ್ತೇನೆ.

ಶಕುಂತಳಾ ಶೆಟ್ಟಿ, ರಾಜ್ಯ ಸಂಸದೀಯ ಕಾರ‍್ಯದರ್ಶಿ, ಶಾಸಕರು ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.