ರಾಮಕುಂಜ: 13ನೇ ವರ್ಷದ ಶಾರದೋತ್ಸವ

Puttur_Advt_NewsUnder_1
Puttur_Advt_NewsUnder_1

ramakunja ramakunja1ಆಲಂಕಾರು: ರಾಮಕುಂಜ ಶಾರದಾನಗರ ಶ್ರೀ ಶಾರದೋತ್ಸವ ಸಮಿತಿಯ ಆಶ್ರಯದಲ್ಲಿ ಶಾರದಾನಗರದ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಅ.9ರಿಂದ ಅ.11ರವರೆಗೆ 13ನೇ ವರ್ಷದ ಶ್ರೀ ಶಾರದೋತ್ಸವ ನಡೆಯಿತು.
ಅ.೯ರಂದು ಸಂಜೆ ಶ್ರೀ ಶಾರದಾಂಬೆಯ ಪ್ರತಿಷ್ಠೆ ನಡೆಯಿತು. ಬಳಿಕ ಮನವಳಿಕೆ ಶ್ರೀ ಪಾಂಡುರಂಗ ಭಜನಾ ಮಂಡಳಿ, ಹಳೆನೇರೆಂಕಿ ಎರಟಾಡಿ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ನೆಟ್ಟಣ ವಿಘ್ನೇಶ್ವರ ಭಜನಾ ಮಂಡಳಿ, ಶಾರದಾನಗರ ಶ್ರೀ ಶಾರದಾಂಬಾ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ‍್ಯಕ್ರಮ ನಡೆಯಿತು. ನಂತರ ಶ್ರೀ ಶಾರದಾಂಬೆಗೆ ಮಹಾಪೂಜೆ ನಡೆದು, ಅನ್ನಸಂತರ್ಪಣೆ ನಡೆಯಿತು. ಬಳಿಕ ಸುಳ್ಯ ವಾಸವಿ ಸಾಹಿತ್ಯ ಕಲಾವೇದಿಕೆಯವರಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ಬಯಲಾಟ ನಡೆಯಿತು.
ಅ.೧೦ರಂದು ಬೆಳಿಗ್ಗೆ ಮಾರಿಚಾಮುಂಡಿ ಗುಳಿಗ ದೈವಗಳಿಗೆ ತಂಬಿಲ ಸೇವೆ, ವಾಹನ ಪೂಜೆ ನಡೆಯಿತು. ಬಳಿಕ ಪುರುಷರ ವಾಲಿಬಾಲ್ ಪಂದ್ಯಾಟ ನಡೆಯಿತು. ರಾತ್ರಿ ಸಾಮೂಹಿಕ ದುರ್ಗಾ ಪೂಜೆ, ನಂತರ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಮಂಜೇಶ್ವರ ವೈಷ್ಣವಿ ಕಲಾವಿದರಿಂದ ಬಂಗಾರ್ ಕಂಡನಿ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ಅ.೧೧ರಂದು ಬೆಳಿಗ್ಗೆ ಸರಸ್ವತಿ ಪೂಜೆ,ವಿದ್ಯಾರಂಭ ನಡೆಯಿತು. ನಂತರ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳು ನಡೆಯಿತು.
ಧಾರ್ಮಿಕ ಸಭೆ: ಅ.೧೧ರಂದು ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಎಸ್.ಎಸ್. ಪ.ಪೂ.ಕಾಲೇಜಿನ ಪ್ರೌಢ ಶಾಲಾ ಮುಖ್ಯ ಗುರು ಯಶವಂತ ರೈಯವರು ಧಾರ್ಮಿಕ ಉಪಾನ್ಯಾಸ ನೀಡಿ, ವಿಜ್ಞಾನವು ಆಧ್ಯಾತ್ಮಕ್ಕೆ ಪೂರಕವಾಗಿದೆ. ಮನೆಯಲ್ಲಿ ನಿತ್ಯ ಭಜನೆಗಳು ನಡೆದಲ್ಲಿ ಮನೆ ವಿಭಜನೆಯಾಗುವುದಿಲ್ಲ ಎಂದರು. ಕೊಲ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ ಸಬಳೂರು ಶುಭಹಾರೈಸಿದರು. ತಾ.ಪಂ. ಸದಸ್ಯೆ ತೇಜಸ್ಸಿನಿ ಕಟ್ಟಪುಣಿ ಅಧ್ಯಕ್ಷತೆ ವಹಿಸಿದ್ದರು. ವಲಯ ಮಟ್ಟದಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕ್ರೀಡೆ ಮತ್ತು ಸಾಂಸ್ಕೃತಿಕ ಸ್ವರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಾರದೋತ್ಸವ ಸಮಿತಿ ಅಧ್ಯಕ್ಷ ಸುರೇಶ ಇರ್ಕಿ, ಗೌರವಾಧ್ಯಕ್ಷ ವಿಶ್ವನಾಥ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರವಿ, ಗೌರವ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಯಲ್ಲಪ್ಪ, ವಾಸುದೇವ ಅತಿಥಿಗಳಿಗೆ ಹೂ ನೀಡಿ ಸ್ವಾಗತಿದರು. ವೆಂಕಟೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಕಾರ‍್ಯದರ್ಶಿ ಗಣೇಶ್ ಸ್ವಾಗತಿಸಿ, ನಿಶ್ಚಿತ್ ಶಾರದಾನಗರ ವಂದಿಸಿದರು. ಸುಮಿತ್ ಮತ್ತು ಅಕ್ಷತಾ ಕಾರ‍್ಯಕ್ರಮ ನಿರೂಪಿಸಿದರು. ಶ್ರೇಯಾ ಪ್ರಾರ್ಥಿಸಿದರು. ನಂತರ ಶ್ರೀ ಶಾರದಾಂಬೆಯ ಪಲ್ಲಕ್ಕಿ ಮೆರವಣಿಗೆ ಶಾರದಾನಗರದಿಂದ ಹೊರಟು ಗಣೇಶ್‌ನಗರದ ಮೂಲಕ ಆತೂರಿಗೆ ತೆರಳಿ ಅಲ್ಲಿಂದ ಹಿಂತಿರುಗಿ ಶಾರದಾನಗರಕ್ಕೆ ಆಗಮಿಸಿ ಮಹಾಪೂಜೆಯೊಂದಿಗೆ ಸಮಾಪ್ತಿಗೊಂಡಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.