ಪುತ್ತೂರಿನ ಡಾ.ಶೈಲಾ ಪೈಗೆ ಪಿ.ಎಚ್.ಡಿ ಪದವಿ

Puttur_Advt_NewsUnder_1
Puttur_Advt_NewsUnder_1

shailaಪುತ್ತೂರು: ಪುತ್ತೂರು ಕೊಂಬೆಟ್ಟು ನಿವಾಸಿ ಕೆ.ವಿ.ಜಿ. ಡೆಂಟಲ್ ಕಾಲೇಜಿನ ದಂತ ವೈದ್ಯ ಪ್ರೊ| ಡಾ. ಪ್ರಕಾಶ್ ಪೈಯವರ ಪತ್ನಿ ಕೆವಿಜಿ ಡೆಂಟಲ್ ಕಾಲೇಜಿನ ಓರಲ್ ಕ್ಷಿಥೋಲಜಿ ವಿಭಾಗದ ಪ್ರೊ. ಡಾ. ಶೈಲಾ ಎಮ್.ರವರು ಪಿಎಚ್‌ಡಿ ಪದವಿ ಪಡೆದುಕೊಂಡಿದ್ದಾರೆ.

ನಿಟ್ಟೆ ವಿಶ್ವವಿದ್ಯಾನಿಲಯದಿಂದ ರಿಲಾಯಬಿಲಿಟಿ ಆಫ್ ಎಪಿಥೀಲಿಯಲ್ ಸೆಲ್ಸ್ ಒಬ್‌ಟೇನ್ಡ್ ಫ್ರೊಮ್ ಓರಲ್ ರಿನ್ಸ್ ಟು ಡಿಟೆಕ್ಟ್ ಮೆಲಿಗ್ನೆನ್ಸಿ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಇವರು ಮಂಗಳೂರಿನ ಎ.ಬಿ.ಶೆಟ್ಟಿ ಸ್ಮಾರಕ ಡೆಂಟಲ್ ಕಾಲೇಜಿನ ಓರಲ್ ಪೆಥಾಲಜಿ ವಿಭಾಗದ ಮುಖ್ಯಸ್ಥ ಪ್ರೊ. ಡಾ. ಪುಷ್ಪರಾಜ್ ಶೆಟ್ಟಿಯವರ ಮಾರ್ಗದರ್ಶನದಂತೆ ಪ್ರಬಂಧ ಮಂಡನೆ ಮಾಡಿದ್ದರು. ಇವರು ಕೊಂಬೆಟ್ಟು ನಿವಾಸಿ ಪುಂಡಲೀಕ ಮುಕ್ತಾ ದಂಪತಿ ಪುತ್ರ, ಪುತ್ತೂರು ದೇವಣ್ಣ ಕಿಣಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ದಂತ ವೈದ್ಯ ಡಾ. ಪ್ರಕಾಶ್ ಪೈಯವರ ಪತ್ನಿ ಹಾಗೂ ಮಂಗಳೂರು ಎಂ.ಕೇಶವ ಭಟ್ ಮತ್ತು ವಸಂತಿ ಭಟ್‌ರವರ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.