ಪ್ರಿಯದರ್ಶಿನಿಯಲ್ಲಿ ಜಿಲ್ಲಾಮಟ್ಟದ ಸನಿವಾಸ ಶಿಬಿರಕ್ಕೆ ತೆರೆ

img_20161015_115116 img_20161015_115125

5 ದಿನಗಳಲ್ಲಿ ಕಂಡು ಬಂದ ವಿಶೇಷತೆಗಳು

  • 15 ತರಬೇತುದಾರರಿಂದ 15 ವಿಷಯಗಳ ಮೇಲೆ ತರಬೇತಿ, ಪ್ರಾತ್ಯಕ್ಷಿಕೆ, ಕಾರ‍್ಯಾಗಾರಗಳು
  • ಸಾಂಪ್ರದಾಯಿಕ ಹಾಗೂ ಜಾನಪದ ಶೈಲಿಯ ಆವರಣ, ವೇದಿಕೆ
  • ಆದರ್ಶ ಗೋಖಲೆಯವರಿಂದ ಮನಮುಟ್ಟಿದ ಮೌಲ್ಯ ಮುನ್ನುಡಿ ಭಾಷಣ
  • 23 ಗೃಹಿಣಿಯರಿಂದ ಮಾತೃಭೋಜನ
  • ಭಾರತ ಮಾತೆಯ ಮೆರವಣಿಗೆ
  • ಸವಿನೆನಪಿಗಾಗಿ ಶಿಬಿರಾರ್ಥಿಗಳಿಂದ ತೆಂಗಿನ ಸಸಿ ಹಸ್ತಾಂತರ

ಪುತ್ತೂರು: ಬೆಟ್ಟಂಪಾಡಿಯ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ೪ ದಿನಗಳ ಕಾಲ ನಡೆದ ಜಿಲ್ಲಾ ಮಟ್ಟದ ಮಕ್ಕಳ ಸನಿವಾಸ ಶಿಬಿರ ಅ. ೧೫ರಂದು ತೆರೆ ಕಂಡಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೃಷ್ಣ ಭಟ್ ಕೊಂಕೊಡಿ ಸಮಾರೋಪ ಭಾಷಣ ಮಾಡಿದರು. ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾದ ಪುತ್ತೂರು ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕ ಅಬ್ದುಲ್ ಖಾದರ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಸದಸ್ಯ ಗುಣಪಾಲ್ ಜೈನ್, ಮುಂಡೂರು ಸಿ.ಎ. ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾದಿಕಾರಿ ಜಯಪ್ರಕಾಶ್ ರೈ. ಆಡಳಿತ ಮಂಡಳಿ ಸದಸ್ಯ ಡಾ. ಸತೀಶ್ ರಾವ್, ಕರುಣಾಕರ ಶೆಟ್ಟಿ ಕೊಮ್ಮಂಡ, ಪ್ರಕಾಶ್ ರೈ ಬೈಲಾಡಿ, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕೃಪಾಶಂಕರ ಭಟ್. ಸಂಪನ್ಮೂಲ ವ್ಯಕ್ತಿ ರಮೇಶ್ ಉಳಯ ಉಪಸ್ಥಿತರಿದ್ದು, ಶಿಬಿರದ ಅಚ್ಚುಕಟ್ಟಿನ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಚಟುವಟಿಕೆಗಳ ಸಂಚಿಕೆ ’ಪ್ರಿಯಾಂತರ್ಯ’ ವನ್ನು ಗುಣಪಾಲ್ ಜೈನ್ ಬಿಡುಗಡೆಗೊಳಿಸಿದರು. ಶಾಲಾ ಸಂಚಾಲಕ ಶಶಿಕುಮಾರ್ ಬೈಲಾಡಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಶಿಬಿರದ ಸವಿನೆನಪಿಗಾಗಿ ಶಿಬಿರಾರ್ಥಿಗಳು ತೆಂಗಿನ ಸಸಿಯನ್ನು ಶಾಲಾ ಅಡುಗೆ ಸಿಬ್ಬಂದಿ, ವಾಹನ ಚಾಲಕ ಗಂಗಾಧರ ಗೌಡರಿಗೆ ಹಸ್ತಾಂತರಿಸಿದರು. ಶಿಬಿರಾಧಿಕಾರಿ ಸಹಶಿಕ್ಷಕ ಪ್ರಶಾಂತ್ ಶಿಬಿರದ ವರದಿ ಮಂಡಿಸಿದರು. ಮುಖ್ಯಗುರು ರಾಜೇಶ್ ನೆಲ್ಲಿತ್ತಡ್ಕ ವಂದಿಸಿದರು. ಶಿಕ್ಷಕರಾದ ರಮೇಶ್ ಬಳ್ಳ ಹಾಗೂ ಶ್ರೀಮತಿ ಕೃಷ್ಣವೇಣಿ ಕಾರ‍್ಯಕ್ರಮ ನಿರೂಪಿಸಿದರು. ಶಿಬಿರಾರ್ಥಿಗಳಾದ ಸಚಿತ್, ಭೂಮಿಕಾ ಶಿಬಿರದ ಅನುಭವ ಹಾಗೂ ಅನಿಸಿಕೆ ಹಂಚಿಕೊಂಡರು. ಶಿಕ್ಷಕಿಯರ ಪರವಾಗಿ ರಮ್ಯ ರೈ ಹಾಗೂ ಸೌಮ್ಯರವರು ಅನಿಸಿಕೆ ವ್ಯಕ್ತಪಡಿಸಿದರು.

ರಜಾ ಸಮಯ ಅಮೂಲ್ಯ ಕ್ಷಣಗಳಾಯಿತು
ಇಲ್ಲಿಯವರೆಗೆ ರಜಾ ಸಮಯಗಳನ್ನು ವ್ಯರ್ಥವಾಗಿ ಕಳೆಯುತ್ತಿದ್ದೆವು. ಆದರೆ ಈ ಬಾರಿ ಶಿಬಿರದಿಂದಾಗಿ ರಜಾ ಸಮಯ ಅಮೂಲ್ಯ ಕ್ಷಣಗಳಾಗಿ ಪರಿವರ್ತನೆಗೊಂಡವು.
– ಭೂಮಿಕಾ, ಶಿಬಿರಾರ್ಥಿ

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.