ಸರ್ವೆ:ಬ್ರಹ್ಮಶ್ರೀ ಸ್ವಸಹಾಯ ಸಂಘ ರಚನೆ

Puttur_Advt_NewsUnder_1
Puttur_Advt_NewsUnder_1

sarve-1ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬ್ರಹ್ಮಶ್ರೀ ಸ್ವಸಹಾಯ ಸಂಘವನ್ನು ಇತ್ತೀಚೆಗೆ ಚಂದ್ರಶೇಖರ ಅಲೇಕಿ ಅವರ ಮನೆಯಲ್ಲಿ ಉದ್ಘಾಟಿಸಲಾಯಿತು. ಯೋಜನೆಯ ಸರ್ವೆ ಬಿ ಒಕ್ಕೂಟದ ಅಧ್ಯಕ್ಷ ಶಶಿಧರ್ ಸರ್ವೆದೋಳ ಅಧ್ಯಕ್ಷತೆ ವಹಿಸಿದ್ದರು. ಸವಣೂರು ವಲಯ ಮೇಲ್ವಿಚಾರಕಿ ಕಿಶೋರಿ ರೈ ಯೋಜನೆಯ ಮಾಹಿತಿ ನೀಡಿದರು. ಬಳಿಕ 9 ಜನರ ಸಂಘವನ್ನು ರಚಿಸಲಾಯಿತು. ಪ್ರಬಂಧಕರಾಗಿ ರಜನಿ, ಸಂಯೋಜಕರಾಗಿ ಕವಿತ, ಕೋಶಾಧಿಕಾರಿಯಾಗಿ ಸುಶೀಲರವರನ್ನು ಆಯ್ಕೆ ಮಾಡಲಾಯಿತು. ಸದಸ್ಯರಾದ ಬೇಬಿ, ವಸಂತಿ, ಕಮಲ, ಜಲಜಾಕ್ಷಿ, ರೇಶ್ಮ, ಸುನೀತ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ವಿನುತ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.