ತಿಂಗಳಾಡಿ ಗಾಂಧಿನಗರ ಕಾಲನಿ ಸದಸ್ಯರಿಂದ ರಸ್ತೆ ನಿರ್ಮಾಣಕ್ಕೆ ಶ್ರಮದಾನ

Puttur_Advt_NewsUnder_1
Puttur_Advt_NewsUnder_1

thingaladyಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತು ವ್ಯಾಪ್ತಿಯ ತಿಂಗಳಾಡಿ ಆದಿದ್ರಾವಿಡ ಜನಾಂಗದ ಗಾಂಧಿನಗರ ಕಾಲನಿಗೆ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಸುಮಾರು 10 ಲಕ್ಷ ರೂಪಾಯಿಗಳನ್ನು ರಸ್ತೆ ನಿರ್ಮಾಣ ಮತ್ತು ರಸ್ತೆ ಕಾಂಕ್ರಿಟೀಕರಣಕ್ಕೆ ಇಡಲಾಗಿದ್ದು, ಈಗಾಗಲೇ ಶಾಸಕಿ ಶಕುಂತಳಾ ಟಿ. ಶೆಟ್ಟಿಯವರಿಂದ ಗುದ್ದಲಿಪೂಜೆ ಕೂಡ ನಡೆದಿದೆ. ಕಾಮಗಾರಿಯ ಪೂರ್ವಭಾವಿಯಾಗಿ ಕಾಲನಿ ಸದಸ್ಯರು ಅ.12 ರಂದು ಶ್ರಮದಾನದ ಮೂಲಕ ರಸ್ತೆ ಕೆಲಸ ಮಾಡಿದರು. ರಸ್ತೆ ಹಾದುಹೋಗುವ ಜಾಗದಲ್ಲಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ, ರಸ್ತೆ ನಿರ್ಮಾನ ಮಾಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯೆ ಲಲಿತಾ ರಾಮನಗರ, ಕಾಲನಿ ನಿವಾಸಿಗಳಾದ ಅಣ್ಣು ತಿಂಗಳಾಡಿ, ನಾರಾಯಣ ಎ.ಟಿ, ರವಿ, ಮೋಹನ, ಚಿದಾನಂದ, ಕೃಷ್ಣಪ್ಪ, ರಾಜೇಶ್, ಬಿ.ರಾಜು, ಟಿ.ಸಿ ನಾರಾಯಣ,ಕುಶಲ, ವರುಣ್, ರಂಜಿತ್, ಹರೀಶ, ಆನಂದ, ರಾಜೇಶ ಕೆ, ರವಿ.ಟಿ.ಎಸ್, ಸುರೇಶ ಜೆ, ಗೀತಾ, ಸುಶೀಲಾ, ಮಿನ್ಕ, ಬೇಬಿ, ನಾಗಮ್ಮ, ಸುಶೀಲ, ಭಾಗಿ, ವಾರಿಜ, ಸುಂದರಿ, ಸುಶೀಲಾ, ಮಮತಾ, ರಾಧಾ, ವಸಂತ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು. ಕಾಲನಿಗೆ ರಸ್ತೆ ನಿರ್ಮಾಣವಾಗಬೇಕೆಂಬುದು ಇವರ ಹಲವು ವರ್ಷಗಳ ಬೇಡಿಕೆಯಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.