ವಿದ್ಯಾರಶ್ಮಿಯಲ್ಲಿ ರಾಜ್ಯಮಟ್ಟದ ಜಾನಪದ ಉತ್ಸವ `ಕಲಾ ರಶ್ಮಿ’-ಜಾನಪದ ವಿಚಾರಧಾರೆ, ಸಾಂಸ್ಕೃತಿಕ ವೈವಿಧ್ಯ

094325ef-9e57-4072-ad1c-c2e36536343c 17541a1a-da4d-4248-955a-bab99d843764 37bc8b94-f863-4753-a943-c1861bca2cef
572870a2-2142-4790-8b2c-85eac9447fd1 5d4449b6-9860-4693-91da-5066e6df3271 641a74e6-e2cd-4bee-84b4-277c613e4816 6b64e70b-7049-40b7-8367-259e2aab8ef6-1 6de6285d-66eb-4636-9254-6bf332318e43 8ec81543-fef6-4545-acc2-fb3c384b9203 9070cf2f-8b63-4c06-87d8-f0fd1f980676 99b4f6d2-0c93-4212-8aec-86e6a9d864dd 9fe129a3-c9ef-415b-a0d2-26e48ff6c9de b04eabf3-ff3b-4682-9d95-e8f85cdf2298 ba79af79-926b-4d75-a50a-86734b0ef303 bce12771-9bad-4a3b-a6db-c0db8ac6b122 cf16cde2-1fbe-4dd1-882e-2dd5af07fcaa e46e9063-357c-4d09-9b42-af0da9aaf15cಪುತ್ತೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಜಾನಪದ ಉತ್ಸವ ಕಲಾರಶ್ಮಿ-2016 ರಲ್ಲಿ ಎರಡನೇ ದಿನವಾದ ಅ.16ರಂದು ಬೆಳಿಗ್ಗೆ ಜಾನಪದ ವಿಚಾರಧಾರೆ ಮತ್ತು ವಿವಿಧ ಜನಪದ ಕಲಾ ತಂಡಗಳಿಂದ ಜನಪದ ವೈವಿಧ್ಯ ನಡೆಯಿತು.

ಬೆಳಿಗ್ಗೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಾಯೋಜಿತ ಕಲಾವೃಂದ ಮರಗೋಡು ಇವರಿಂದ ಅರೆಭಾಷೆ ಸಾಂಸ್ಕೃತಿಕ ಸೌರಭ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಪ್ರಾಯೋಜಿತ ನಲಿಪು ಜಾನಪದ ಕೂಟ, ಬಾಳೆಪುಣಿ ಇವರಿಂದ ದುಡಿ ಕುಣಿತ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರು ಪ್ರಾಯೋಜಿತ ಅಪ್ಪು ಗೌಡ ಮತ್ತು ತಂಡ ಎಡಪದವು ರವರಿಂದ ಗುಮ್ಟೆ ಕುಣಿತ, ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಪ್ರಾಯೋಜಿತ ಪಣಿಯಮ್ಮ ಹಾಗೂ ಸಂಗಡಿಗರು ಮೊಳಗು ಮಹಿಳಾ ಕಲಾ ತಂಡ ಹೆಗ್ಗೋಡೆ ಸಾಗರ ಇವರಿಂದ ಮಹಿಳಾ ಡೊಳ್ಳು ಕುಣಿತ, ಎಸ್.ಎನ್.ಆರ್ ರೂರಲ್ ಎಜ್ಯುಕೇಶನಲ್ ಟ್ರಸ್ಟ್ ಸವಣೂರು ಪ್ರಾಯೋಜಿತ ಶಂಕ್ರಣ್ಣ ಸಂಕಣ್ಣನವರ್ ಹಾಗೂ ಸಂಗಡಿಗರು ಅರುಣೋದಯ ಕಲಾತಂಡ ಗದಗ ಇವರಿಂದ ಜೋಗತಿ ಕುಣಿತ, ಶೀಂಟೂರು ನಾರಾಯಣ ರೈ ಶಿಕ್ಷಣ ಪ್ರತಿಷ್ಠಾನ ಪ್ರಾಯೋಜಿತ ರಮೇಶ್ ಮತ್ತು ಬಳಗ ವಿಟ್ಲ ಇವರಿಂದ ಕಂಸಾಳೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಪ್ರಾಯೋಜಿತ ಸುಧೀರ್ ಮತ್ತು ಬಳಗ ಬಾಳೆಪುಣಿರವರಿಂದ ಕರಂಗೋಲು, ಪುತ್ತೂರು ಯುವಜನ ಒಕ್ಕೂಟ ಪ್ರಾಯೋಜಿತ ಪ್ರಖ್ಯಾತಿ ಯುವತಿ ಮಂಡಲ ನರಿಮೊಗರು ಇವರಿಂದ ಕನ್ಯಾಪು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಂಗಳೂರು ಪ್ರಾಯೋಜಿತ ದಫ್ ನೃತ್ಯ ಮತ್ತು ಬ್ಯಾರಿ ಹಾಡುಗಳು, ಕಲಾರರ್ಶಮಿ ಸನ್ಮಾನಿತರಿಂದ ಜಾನಪದ ಕಾರ್ಯಕ್ರಮ ನೋಡುಗರ ಕಣ್ಮನ ಸೆಳೆಯಿತು.

ಬೆಳಿಗ್ಗೆ ಪೆರುವಾಜೆ ಡಾ. ಕೆ. ಶಿವರಾಮ ಕಾರಂತ ಸ.ಪ್ರ.ದ.ಕಾಲೇಜಿನ ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲರವರಿಂದ ಜಾನಪದ ಮತ್ತು ಕೃಷಿ ಸಂವೇದನೆ ವಿಷಯದ ಕುರಿತು ಜಾನಪದ ವಿಚಾರಧಾರೆ ನಡೆಯಿತು.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.