ವಿದ್ಯಾರಶ್ಮಿಯಲ್ಲಿ ಕಲಾರಶ್ಮಿಗೆ ತೆರೆ; ರಾಜ್ಯ ಜಾನಪದ ಉತ್ಸವ ಸವಣೂರಿನಲ್ಲಿ ಸಂಪನ್ನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

15ಸಾವಿರಕ್ಕೂ ಅಧಿಕ ಕಲಾಸಕ್ತರಿಂದ ಜಾನಪದ ಲೋಕ ವೀಕ್ಷಣೆ- ಕಲಾರಶ್ಮಿ ಪ್ರಶಸ್ತಿ ಪ್ರದಾನ

*ಯುವ ಪೀಳಿಗೆಯಿಂದ ಬಲಿಷ್ಠ ಭಾರತ: ಖಾದರ್

*ಕಲೆಯನ್ನು ಉಳಿಸಬೇಕು: ಅಂಗಾರ

*ಸಾಹಿತ್ಯ ಇದ್ದಲ್ಲಿ ಸಂಸ್ಕೃತಿ: ಬೈರಪ್ಪ

*ರಾಜ್ಯಕ್ಕೆ ಮಾದರಿ ಕಾರ್ಯಕ್ರಮ: ಸೀತಾರಾಮ ರೈ

*ಸಾಂಸ್ಕೃತಿಕ ಏಕೀಕರಣ ಕಾರ್ಯ-ಪ್ರೊ.ಬಿ.ಎ.ವಿವೇಕ್ ರೈ

*ಜಾನಪದ ಸಂಸ್ಕೃತಿ ಶ್ರೀಮಂತ-ದಿವ್ಯಪ್ರಭಾ

ಜಾನಪದ ಕಲಾವಿದರನ್ನು ಮತ್ತು ಕಲೆಯನ್ನು ಮುಂದಿನ ಪೀಳಿಗೆಗೆ  ಉಳಿಸುವ ಕೆಲಸವನ್ನು ಮಾಡುವ ಕಾರ‍್ಯವನ್ನು ಸರಕಾರವು ಮಾಡಬೇಕು, ಕಲಾವಿದರು ಬಹಳಷ್ಟು ಕಷ್ಟದಲ್ಲಿ ಇದ್ದಾರೆ, ಅವರಿಗೆ ಪ್ರೋತ್ಸಾಹವನ್ನು ಮಾಡುವ ಮೂಲಕ  ಕಲೆಯ ಉಳಿವು ಆಗಬೇಕು ಎಂದು ವಿವೇಕ್ ರೈ ಹೇಳಿದರು.

ಪುತ್ತೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ  ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕರ್ನಾಟಕ ಜಾನಪದ ವಿಶ್ವ ವಿದ್ಯಾನಿಲಯ ಹಾವೇರಿ, ತುಳು ಸಾಹಿತ್ಯ ಅಕಾಡೆಮಿ, ಜಾನಪದ ಅಕಾಡೆಮಿ, ಬ್ಯಾರಿ ಸಾಹಿತ್ಯ ಅಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿ, ಕೊಡವ ಸಾಹಿತ್ಯ ಅಕಾಡೆಮಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಯಕ್ಷಗಾನ ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯ, ವಾರ್ತಾ ಮತ್ತು ಪ್ರಚಾರ ಇಲಾಖೆ ಬೆಂಗಳೂರು  ಮತ್ತು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ  ರಾಜ್ಯ ಮಟ್ಟದ ಜಾನಪದ ಉತ್ಸವ-ಕಲಾರಶ್ಮಿ-2016 ಸಮಾರೋಪ ಅ.16 ರಂದು ಜರಗಿತು.

ಯುವ ಪೀಳಿಗೆಯಿಂದ ಬಲಿಷ್ಠ ಭಾರತ: ಖಾದರ್-

ಸಚಿವ ಯು.ಟಿ.ಖಾದರ್‌ರವರು ಮಾತನಾಡಿ ಜಾನಪದವನ್ನು ಗ್ರಾಮೀಣ ಮಟ್ಟದಲ್ಲಿ ಉಳಿಸುವ ಕಾರ‍್ಯವನ್ನು ಸವಣೂರು ಸೀತಾರಾಮ ರೈ ಮಾಡಿದ್ದಾರೆ. ಸವಣೂರು ಸೀತಾರಾಮ ರೈರವರು ಸಮಾಜಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ. ಹಿರಿಯರ ತ್ಯಾಗಮಯ ಜೀವನ ನಮಗೆ ಮಾದರಿಯಾಗಿದೆ  ಈ ಮಣ್ಣಿನ ಸಂಸ್ಕೃತಿಯನ್ನು ಉಳಿಸುವ ಕಾರ‍್ಯವನ್ನು ಯುವಪೀಳಿಗೆಯವರು ಮಾಡಬೇಕು, ರಾಜ್ಯದ ವಿವಿಧ ಜಿಲ್ಲೆಗಳ ಜಾನಪದ ಇಲ್ಲಿ ಮೇಳೈಸಿದೆ, ಇಂದು ನಾವು ಮನುಷ್ಯ ಮನುಷ್ಯರ ಬದಲು ಫೇಸ್‌ಬುಕ್ ಮತ್ತು ವಾಟ್ಸಾಪ್‌ನ್ನು ನಂಬುವ ಕಾಲವಾಗಿದ್ದು, ಭಾರತ ದೇಶ ಬಲಿಷ್ಠವಾಗಲು ನಮ್ಮ ವಿದ್ಯಾರ್ಥಿಗಳು ಮತ್ತು ಯುವಪೀಳಿಗೆ ಮುಂದೆ ಬರಬೇಕು ಎಂದರು. ಭಾರತ ದೇಶ ವಿಶ್ವದಲ್ಲಿ ಸಂಪತ್ತು ಭರಿತವಾಗಿದ್ದು, ಇಲ್ಲಿರುವವರು ದೇಶಪ್ರೇಮವನ್ನು ಬೆಳೆಸಿಕೊಳ್ಳಿ ಎಂದರು. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ರೇಷನ್ ಕಾರ್ಡ್‌ನ್ನು ತುರ್ತಾಗಿ ನೀಡುವುದಾಗಿ ಖಾದರ್ ತಿಳಿಸಿದರು

ಕಲೆಯನ್ನು ಉಳಿಸಬೇಕು: ಅಂಗಾರ

-ಅಧ್ಯಕ್ಷತೆಯನ್ನು ಶಾಸಕ ಎಸ್.ಅಂಗಾರ ವಹಿಸಿ ಮಾತನಾಡಿ ಭಾವನಾತ್ಮಕವಾದ ಭಾವನೆಗೆ ನಾವು ಮೈಗೂಡಿಸಿಕೊಂಡು ಹೋದಾಗ ಮಾತ್ರ ನಮ್ಮ ಸಂಸ್ಕೃತಿ ಮತ್ತು ಕಲೆ ಉಳಿಯುತ್ತದೆ, ಸಾಮಾನ್ಯ  ಜನರಲ್ಲಿ ಇರುವ ನಂಬಿಕೆಯಿಂದಾಗಿ ಇಂದು ಜಾನಪದ ಕಲೆ ಉಳಿಯಲು ಸಾಧ್ಯವಾಗಿದೆ. ಕಲೆಯನ್ನು ನಾವು ನೋಡುವುದು ಮಾತ್ರವಲ್ಲ ಅದನ್ನು ಉಳಿಸಿಕೊಳ್ಳುವ ಪ್ರವೃತ್ತಿಯನ್ನು ಮಾಡಬೇಕು. ಸವಣೂರಿನಲ್ಲಿ ಅತ್ಯುತ್ತಮ ಜಾನಪದ ಕಾರ‍್ಯಕ್ರಮವನ್ನು ಸಂಘಟಿಸಿದ ಸೀತಾರಾಮ ರೈಯವರು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಸಾಹಿತ್ಯ ಇದ್ದಲ್ಲಿ ಸಂಸ್ಕೃತಿ: ಬೈರಪ್ಪ

ಮಂಗಳೂರು  ವಿಶ್ವ ವಿದ್ಯಾನಿಲಯದ  ಕುಲಪತಿ ಪ್ರೊ.ಕೆ. ಬೈರಪ್ಪರವರು ಸಮಾರೋಪ ಭಾಷಣದಲ್ಲಿ ಎಲ್ಲಿ ಸಾಹಿತ್ಯ ಇರುತ್ತದೆಯೂ ಅಲ್ಲಿ ಸಂಸ್ಕೃತಿ ಇರುತ್ತದೆ. ಆದರೆ ಇಂದು  ಟಿ.ವಿ. ಚಲನ ಚಿತ್ರ. ವಾಟ್ಸಾಪ್ ಮತ್ತು ಫೇಸ್‌ಬುಕ್‌ನಿಂದಾಗಿ ನಮ್ಮ ಜಾನಪದ ಕಲೆಗಳು ನಶಿಸಿ ಹೋಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕಲೆಯನ್ನು ಪ್ರೋತ್ಸಾಹಿಸಿದ ಸವಣೂರು ಸೀತಾರಾಮ ರೈರವರ ಕಾರ‍್ಯ ಪ್ರಶಂಸನೀಯ ಎಂದು ಹೇಳಿ, ಹಳ್ಳಿ-ಹಳ್ಳಿಗಳಲ್ಲಿ ಜಾನಪದ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು

ಸಾಂಸ್ಕೃತಿಕ ಏಕೀಕರಣ ಕಾರ್ಯ-ಪ್ರೊ.ಬಿ.ಎ.ವಿವೇಕ್ ರೈ

ಕಲಾರಶ್ಮಿ ಸನ್ಮಾನವನ್ನು ನಡೆಸಿಕೊಟ್ಟ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ.ಬಿ.ವಿ.ವಿವೇಕ್ ರೈರವರು ಮಾತನಾಡಿ ಸವಣೂರಿನಂಥ ಸಣ್ಣ ಊರಿನಲ್ಲಿ ಕರ್ನಾಟಕ ರಾಜ್ಯ ಮಟ್ಟದ ಜಾನಪದ ಉತ್ಸವವನ್ನು ಆಯೋಜಿಸಿ ಸಾಂಸ್ಕೃತಿಕ ಏಕೀಕರಣವನ್ನು ಮಾಡುವ ಮೂಲಕ, ಕರ್ನಾಟಕದ ಎಲ್ಲ ಕಲಾಪ್ರಕಾರವನ್ನು ಮಾಡಿ ತೋರಿಸಿದ ಸೀತಾರಾಮ ರೈಯವರ ಪ್ರಯತ್ನ ಅತ್ಯಂತ ಶ್ರೇಷ್ಠವಾದ ಕೆಲಸವಾಗಿದೆ, ಬಹುಮುಖ ಪ್ರತಿಭಾವಂತರನ್ನು ಸನ್ಮಾನಿಸುವ ಭಾಗ್ಯ ದೊರೆತಿರುವುದು ನನ್ನ ಭಾಗ್ಯ ಎಂದು ಹೇಳಿದರು.

ಜಾನಪದ ಸಂಸ್ಕೃತಿ ಶ್ರೀಮಂತ-ದಿವ್ಯಪ್ರಭಾ:

ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕರವರು ಮಾತನಾಡಿ ಭಾರತ ದೇಶದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ, ನಮ್ಮ ಕನ್ನಡದ ಕಲೆಯನ್ನು ಬೆಳೆಸಿಕೊಳ್ಳಲಿ ಎಂದು ಹೇಳಿ, ಗ್ರಾಮೀಣ ಸೊಗಡು ಇರುವ ಜಾನಪದವನ್ನು ನಾವು ಉಳಿಸೋಣ, ಜಾನಪದ ಹಾಡಿಗೆ ಶಕ್ತಿ ಇದೆ ಎಂದು ಹೇಳಿದರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡುರವರು ಮಾತನಾಡಿ ಜಾನಪದ ಸಂಸ್ಕೃತಿಯನ್ನು ಉಳಿಸುವ ಕಾರ‍್ಯವನ್ನು ಎಲ್ಲರೂ ಮಾಡಬೇಕು ಏಂದು ಹೇಳಿದರು. ಪುತ್ತೂರಿನ ಸಹಾಯಕ ಪೋಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್‌ರವರು ಮಾತನಾಡಿ ನಮ್ಮ  ರಾಜ್ಯದ  ಸಂಸ್ಕೃತಿಯನ್ನು ತಿಳಿಸುವ ಜನಪದ ಉತ್ಸವ ಪ್ರತಿವರ್ಷ ನಡೆಯಲಿ ಏಂದು ಹೇಳಿದರು ಸವಣೂರು ಗ್ರಾಮ ಪಂಚಾಯತ್ ಸದಸ್ಯರಫೀಕ್ ಎಂ.ಎ. ಮಾತನಾಡಿ ಉತ್ತಮ ಕಾರ‍್ಯಕ್ರಮವನ್ನು ಸಂಘಟಿಸಿದ ಸವಣೂರು ಸೀತಾರಾಮ ರೈ ಮತ್ತು ಆಶ್ವಿನ್ ಎಲ್ ಶೆಟ್ಟಿ ಹಾಗೂ ತಂಡದ ಶ್ರಮ ಸಾರ್ಥಕತೆಯನ್ನು ಕಂಡಿದೆ ಎಂದು ಹೇಳಿದರು

ಕಲಾರಶ್ಮಿ  ಸನ್ಮಾನಿತರು:

ಈ ಸಂದರ್ಭದಲ್ಲಿ ಭಜನೆ ಗಾಯಕ ಶುಭಾನಂದ ಶಿವಬಸು ಬೆಳಗಾವಿ, ತತ್ವಪದ ಗಾಯಕ ಶರಣಪ್ಪ ಗೋನಾಳ ರಾಯಚೂರು, ನೀಲಗಾರರ ಮೇಳದ ಗಾಯಕ ಕೆಬ್ಬೇಪುರ ಸಿದ್ಧರಾಜು ಚಾಮರಾಜ ನಗರ, ಸಿರಿ ಪಾಡ್ದನ ಗಾಯಕಿ ಕರ್ಗಿ ಶೆಡ್ತಿ ಬೆಳ್ತಂಗಡಿಯವರನ್ನು ಸನ್ಮಾನಿಸಲಾಯಿತು.

ರಾಜ್ಯಕ್ಕೆ ಮಾದರಿ ಕಾರ್ಯಕ್ರಮ:

ಸೀತಾರಾಮ ರೈ-ಸ್ವಾಗತ ಭಾಷಣಗೈದ ಜಾನಪದ ಉತ್ಸವದ ಗೌರವಾಧ್ಯಕ್ಷ ಸವಣೂರು ಸೀತಾರಾಮ ರೈಯವರು ನಾವು ರಾಜ್ಯ ಮಟ್ಟದ ಜಾನಪದ ಉತ್ಸವದ ಸಂಸ್ಕೃತಿಯ ರಕ್ಷಣೆಯ ಕಾರ‍್ಯವನ್ನು ಮಾಡಿದ್ದೇವೆ ಎಂದರಲ್ಲದೆ ಕಾರ‍್ಯಕ್ರಮ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಬ್ಯಾರಿ ಅಕಾಡೆಮಿ ಅಧ್ಯಕ್ಷ ಮಹಮ್ಮದ್ ಹನೀಫ್,  ಜಿಲ್ಲಾ ಪಂಚಾಯತ್ ಸದಸ್ಯೆ ಪ್ರಮೀಳಾ ಜನಾರ್ದನ್, ವಿದ್ಯಾರಶ್ಮಿ ಸಂಸ್ಥೆಯ ಟ್ರಸ್ಟಿಗಳಾದ ಸವಣೂರು ಸುಂದರ ರೈ, ಡಾ.ರಾಜೇಶ್ ರೈ ಸವಣೂರು,ವಾದಿರಾಜ್ ಪೆಜತ್ತಾಯ, ರಶ್ಮಿ ಆಶ್ವಿನ್ ಶೆಟ್ಟಿ ಮಂಗಳೂರು,   ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ  ಮಿಥಾಲಿ ಪ್ರಸನ್ನ ರೈ ಉಪಸ್ಥಿತರಿದ್ದರು

ಜಾನಪದ ಉತ್ಸವ ಸಮಿತಿಯ ಅಧ್ಯಕ್ಷ ಆಶ್ವಿನ್ ಎಲ್ ಶೆಟ್ಟಿ  ವಿದ್ಯಾರಶ್ಮಿ ಪ್ರಥಮ  ದರ್ಜೆ ಕಾಲೇಜ್‌ನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಜಗನ್ನಾಥ ರೈ ಪೋಳಾಜೆ, ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ರೇ| ವಿಜಯ ಹಾರ್ವಿನ್, ಪ್ರದೀಪ್ ರೈ ಪನ್ನೆ, ಸುದರ್ಶನ್ ನಾಕ್ ಕಂಪ, ಪ್ರಸನ್ನ ರೈ ಮಜಲುಗದ್ದೆ, ವೆಂಕಟೇಶ್ ಭಟ್,  ಉಪನ್ಯಾಸಕ ಮಹೇಶ್, ಡಾ.ಮಾಧವ ಭಟ್‌ರವರುಗಳು ಅತಿಥಿಗಳನ್ನು  ಗೌರವಿಸಿದರು. ವಿದ್ಯಾರಶ್ಮಿ ವಿದ್ಯಾಲಯದ ಉಪಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ, ಉಪನ್ಯಾಸಕ ಪುಷ್ಪರಾಜ್  ಕಾರ‍್ಯಕ್ರಮ ನಿರೂಪಿಸಿದರು. ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ವಂದಿಸಿದರು.

ಕಲಾರಶ್ಮಿಯಲ್ಲಿ ಮೇಳೈಸಿದ ಜನಪದ ಸಮ್ಮಿಲನ ಜನಪದ ಉತ್ಸವದಲ್ಲಿ ಜನಜಾತ್ರೆ:

ಕಲಾ ರಶ್ಮಿ ಕರ್ನಾಟಕ ಜಾನಪದ ಉತ್ಸವ ಹಾಗೂ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಸವಣೂರು  ವಿದ್ಯಾರಶ್ಮಿ ವಿದ್ಯಾಲಯದಲ್ಲಿ 2 ದಿನಗಳು ನಡೆದ  ಕರ್ನಾಟಕ ಜಾನಪದ ಉತ್ಸವದಲ್ಲಿ ಜಾನಪದ ವೈವಿದ್ಯಗಳು ಮೇಳೈಸಿ ಜಾನಪದ ಲೋಕವನ್ನೇ ಸೃಷ್ಠಿಸಿತ್ತು. ಎರಡು ದಿನಗಳ ಈ ಜನಪದ ಜಾತ್ರೆಗೆ ಸುಮಾರು 15 ಸಾವಿರಕ್ಕೂ ಮಿಕ್ಕಿ ಕಲಾಸಕ್ತರು ಆಗಮಿಸಿ ಕಲೆಯನ್ನು ಆಸ್ವಾದಿಸಿದರು.

ಈ ಜಾನಪದ ಉತ್ಸವದಲ್ಲಿ ತುಳು ಅಕಾಡೆಮಿಯ ಪ್ರಾಯೋಜಿತ ಬೆಳ್ತಂಗಡಿ ಪಿಂಗಾರ ಕಲಾ ತಂಡದಿಂದ ಹುಲಿ ಕುಣಿತ, ನಲಿಪು ಜಾನಪದ ಕೂಟ ಬಾಳೆಪುಣಿ ತಂಡದಿಂದ ದುಡಿಕುಣಿತ, ಸುಧೀರ್  ಮತ್ತು ಬಳಗ ಬಾಳೆಪುಣಿ ಇವರಿಂದ  ಕರಂಗೋಲು, ಫೇಸ್ ಮಂಗಳೂರು ತಂಡದಿಂದ  ಕಂಗೀಲು, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಕಲಾರಶ್ಮಿ ತಂಡದಿಂದ ಜಾನಪದ ವೈವಿದ್ಯ ,ಜಾನಪದ ಸಂಭ್ರಮ, ಪ್ರಶಾಂತ್ ಮಹಲ್ ಪುತ್ತೂರು ಪ್ರಾಯೋಜಿತ ಸಿದ್ಧ ಮೋಟೆ ಮತ್ತು ತಂಡ ಬೆಳಗಾಂ ಇವರಿಂದ ಡೊಳ್ಳಿನ ಪದ ಇವುಗಳು  ಜನರಲ್ಲಿ ಹೊಸ ಕಲೆಯ ಆಸ್ವಾದಿಸುವಂತೆ ಮಾಡಿತು.

ಕೊಡವ ಅಕಾಡೆಮಿಯಿಂದ ಸೌಮ್ಯಾ ಮತ್ತು ತಂಡದಿಂದ ಉಮ್ಮತಾಟ್, ಮುದ್ದಪ್ಪ ಮತ್ತು ತಂಡದಿಂದ ಬೋಳ್‌ಕಾಟ್, ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯಿಂದ ಪ್ರಜ್ವಲ್ ಮತ್ತು ತಂಡ ಚೆಂಬು ಇವರಿಂದ ಸಿದ್ಧವೇಷ, ಅರೆಭಾಷೆ ಸಾಂಸ್ಕೃತಿಕ ಸೌರಭ, ಕರ್ನಾಟಕ ಜಾನಪದ ಅಕಾಡೆಮಿ ಪ್ರಾಯೋಜಿತ ಮಂಡ್ಯದ ಸವಿತಾ ಚಿರುಕುಣ್ಣಯ್ಯ ಮತ್ತು ತಂಡದಿಂದ ಪೂಜಾ ಕುಣಿತ,  ಪಣಿಯಮ್ಮ ಹಾಗೂ ಸಂಗಡಿಗರ ಮೊಳಗು ಕಲಾ ತಂಡ ಸಾಗರ ಹೆಗ್ಗೋಡು ಇವರಿಂದ  ಮಹಿಳಾ ಡೊಳ್ಳು ಕುಣಿತ ಪ್ರದರ್ಶನ ನೋಡುಗರ ಮನತಣಿಸಿತು.

ಕೊಂಕಣಿ ಅಕಾಡೆಮಿ ಪ್ರಾಯೋಜಿತ ಅಪ್ಪು ಗೌಡ ಮತ್ತು ತಂಡ ಎಡಪದವು ಇವರಿಂದ ಗುಮ್ಟೆ ಕುಣಿತ,  ಕರ್ನಾಟಕ ಬ್ಯಾರಿ ಅಕಾಡೆ ಪ್ರಾಯೋಜಿತ ದಫ್ ನೃತ್ಯ ಹಾಗೂ ಬ್ಯಾರಿ ಹಾಡುಗಳು, ಪುತ್ತೂರು ತಾಲೂಕು ಯುವಜನ ಒಕ್ಕೂಟದಿಂದ ನರಿಮೊಗರು ಪ್ರಖ್ಯಾತಿ ಯುವತಿ ಮಂಡಲದವರಿಂದ ಕನ್ಯಾಪು, ಶೀಂಟೂರು ನಾರಾಯಣ ರೈ ಶಿಕ್ಷಣ ಪ್ರತಿಷ್ಠಾನದಿಂದ ರಮೇಶ್ ಮತ್ತು ತಂಡ ಇವರಿಂದ ಕಂಸಾಳೆ, ಎಸ್.ಎನ್.ಆರ್ ರೂರಲ್ ಎಜುಕೇಶನ್ ಟ್ರಸ್ಟ್ ವತಿಯಿಂದ ಶಂಕ್ರಣ್ಣ ಸಂಕಣ್ಣನವರ್ ಹಾಗೂ ಸಂಗಡಿಗರ ಅರುಣೋದಯ ಕಲಾತಂಡ ಗದಗ ಇವರಿಂದ ಜೋಗತಿ ಕುಣಿತ, ಪುತ್ತೂರು ಆದರ್ಶ ವಿವಿದ್ದೋಧೇಶ ಸಹಕಾರಿ ಸಂಘ ಪ್ರಾಯೋಜಿತ ಶಿವಕೃಷ್ಣ ಭಂಡಾರಿ ಮತ್ತು ತಂಡ ಹೊನ್ನಾವರ ಇವರಿಂದ ಉತ್ತರ ಕನ್ನಡದ ಪಂಚವಾದ್ಯ ತಂಡದ ಕಾರ್ಯಕ್ರಮ ಜನಪದ ಲೋಕಕ್ಕೆ ಕಲಾಪ್ರೇಮಿಗಳನ್ನು ಸೆಳೆಯಿತು.

ಸವಣೂರು ಪರಣೆ ಗೋಕುಲಂ ಕ್ಷೀರಧಾಮ ಪ್ರಾಯೋಜಿತ ಪುತ್ತೂರು ಪಾಂಡುರಂಗ ನಾಯಕ್ ಇವರ ಕಲಾಶ್ರೀ ತಂಡದಿಂದ ಜನಪದೀಯ ಂಗೀತ,ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು, ಯಕ್ಷಮಂಗಳ ತಂಡದಿಂದ ಪಾಂಚಜನ್ಯ ಯಕ್ಷಗಾನ ಪ್ರದರ್ಶನ, ಬೊಳಂತಿಮೊಗರಿನ ಶಿಕ್ಷಕ ವಿಠಲ ನಾಯಕ್ ಇವರಿಂದ ಜನಪದ ಗೀತ-ಸಾಹಿತ್ಯ ವೈವಿದ್ಯ ನಡೆಯಿತು. ಇದೇ ಸಂದರ್ಭದಲ್ಲಿ  ಕಲಾರಶ್ಮಿ ಸನ್ಮಾನಿತರಾದ ೮೫ ವರ್ಷ ಪ್ರಾಯದ ಶುಭಾನಂದ ಶಿವಬಸು ಅವರಿಂದ ಭಜನೆ ಪದ ,ಬೆಳ್ತಂಗಡಿಯ ಕರ್ಗಿ ಶೆಡ್ತಿಯವರಿಂದ ಸಿರಿ ಪಾಡ್ದನ ,ಕೆಬ್ಬೆಪುರ ಸಿದ್ದರಾಜು ಅವರಿಂದ ನೀಲಗಾರರ ಮೇಳದ ಗಾಯನ,ಶರಣಪ್ಪ ಗೋನಾಳ ಅವರಿಂದ ತತ್ವಪದ,ತಿಮ್ಮರಾಯಪ್ಪ ಕೋಲಾರ ಅವರಿಂದ ತಮಟೆ ವಾದನ ನಡೆಯಿತು.  ಬೆಳಗ್ಗಿನ ಉಪಾಹಾರದಲ್ಲಿ ಇಡ್ಲಿ,ಚಟ್ನಿ,ಸಾಂಬಾರು,ರವಾ ಸೇಮಿಗೆ, ಚಹಾ,ಕಾಫಿ ,ಮಧ್ಯಾಹ್ನದ ಊಟದಲ್ಲಿ ಉಪ್ಪಿನಕಾಯಿ,(ತೊಂಡೆ ಕಡ್ಲೆ ಪಲ್ಯ)ರಸಂ, ಪೂಂಬೆ ಪಲ್ಯ, ಸಾಂಬಾರು (ಸೌತೆ ನುಗ್ಗೆ,ಅಂಬಟೆ,ಸುವರ್ಣ ಗಡ್ಡೆ,ಅನ್ನ (ಬೆಳ್ತಿಗೆ,ಕುಚ್ಚಲಕ್ಕಿ,ಮಜ್ಜಿಗೆ)ಪಾಯಸ (ಸಾಗು,ಸೇಮಿಗೆ)ಸಿಹಿಯಲ್ಲಿ ಕಾಶಿ ಹಲ್ವ ಸಂಜೆಯ ಚಹಾ, ಕಾಪಿ ಹಾಗೂ  ನೀರುಳ್ಳಿ ಕ್ಯಾಬೆಜ್ ಪಕೋಡ  ಹಾಗೂ ರಾತ್ರಿಯ ಊಟದ ವ್ಯವಸ್ಥೆ ಮಾಡಲಾಗಿತ್ತು.

ಕಾರ‍್ಯಕ್ರಮದ ಬಗ್ಗೆ ಇವರು ಹೀಗೆನ್ನುತ್ತಾರೆ..

ಜನ ಸಂತೃಪ್ತಿಯಿಂದ ಉತ್ಸವವನ್ನು ನೋಡಿದ್ದಾರೆ. ಯಶಸ್ವಿ ಕಾರ್ಯಕ್ರಮವಾಗಿದ್ದು, ಪ್ರೇಕ್ಷಕರು ಪ್ರೋತ್ಸಾಹಿಸಿದ್ದಾರೆ. ಕಾರ್ಯಕ್ರಮ ಸಾರ್ಥಕವಾಗಿದೆ. ಸವಣೂರಿಗೆ ಜನಸಾಗರವೇ ಹರಿದು ಬಂದಿದೆ. ಇಂತಹ ಉತ್ತಮ ಕಾರ್ಯಕ್ರಮಕ್ಕೆ ಪ್ರೋತ್ಸಾಹ ದೊರೆತಿರುವುದು ಖುಷಿ ತಂದಿದೆ.

ಸವಣೂರು ಕೆ. ಸೀತಾರಾಮ ರೈ, ಗೌರವಾಧ್ಯಕ್ಷರು ರಾಜ್ಯ ಜಾನಪದ ಉತ್ಸವ ಕಲಾರಶ್ಮಿ-2016

ಜಾನಪದ ಉತ್ಸವ ಉತ್ತಮವಾಗಿದೆ. ಮುಂದಿನ ವರ್ಷವೂ ಈ ಕಾರ‍್ಯಕ್ರಮ ನಡೆಯಲಿ ಏಂಬುದೇ ನಮ್ಮ ಆಶಯ

ಹರೀಶ್ -ಕೋಡಿಬೈಲು ಆಗ್ರೋ ಸರ್ವೀಸ್ ಪುತ್ತೂರು

 ಚೆನ್ನಾಗಿ ಮೂಡಿಬಂದಿದೆ,ಊಟ-ಉಪಾಹಾರ ಮತ್ತು ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ

ದಯಾನಂದ್ ಮೆದು -ಐ.ಆರ್.ಎಂ,ಡಿ. ಸವಣೂರು

ಉತ್ತಮವಾಗಿ ಕಾರ‍್ಯಕ್ರಮವನ್ನು  ಗ್ರಾಮೀಣ ಭಾಗದಲ್ಲಿ  ಸವಣೂರು ಸೀತಾರಾಮ ರೈ ಮಾಡಿ ತೋರಿಸಿದ್ದಾರೆ ಇವರಿಗೆ ಅಭಿನಂದನೆಗಳು

ಗೋಪಾಲಕೃಷ್ಣ ಪಟೇಲ್ -ಅಧ್ಯಕ್ಷರು-ಸಿ.ಎ.ಬ್ಯಾಂಕ್ ಚಾರ್ವಕ

savanooru1

savanooru5 savanooru2 savanooru3 savanooru4

ವಿದ್ಯಾರಶ್ಮಿ

ಸುಬ್ರ್ಮಣ್ಯ ಕೆ.ಎಸ್.ಎಸ್. ಕಾಲೇಜಿನಲ್ಲಿ ಅರೆಭಾಷೆ ಲೇಖನ ಕೌಶಲ್ಯ ಕಾರ್ಯಾಗಾರ ಉದ್ಘಾಟನೆ

ಕಡಬ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ ಹಾಗೂ ಐ.ಕ್ಯೂ.ಎ.ಸಿ ಘಟಕ ಕ...

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.