ಪುಣಚ ಗ್ರಾ.ಪಂ. ವಿಶೇಷ ಗ್ರಾಮ ಸಭೆ, ಸ್ವಚ್ಛತಾ ಕಾರ‍್ಯಕ್ರಮ

Puttur_Advt_NewsUnder_1
Puttur_Advt_NewsUnder_1

punachaಪುತ್ತೂರು: ಪುಣಚ ಗ್ರಾಮ ಪಂಚಾಯತುನ ೨೦೧೭-೧೮ನೇ ಸಾಲಿನ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹಾಗೂ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆಯ ಬಗ್ಗೆ ವಿಶೇಷ ಗ್ರಾಮ ಸಭೆ ಅ.೨ ರಂದು ಗ್ರಾ.ಪಂ ಸಭಾಂಗಣದಲ್ಲಿ ಗ್ರಾ.ಪಂ ಅಧ್ಯಕ್ಷೆ ಪ್ರತಿಭಾ ಶ್ರೀಧರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯತು ಉಪಾಧ್ಯಕ್ಷ ಮಹೇಶ್ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ವಸತಿ ಯೋಜನೆ ಮತ್ತು ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಮ ಸಭೆಯ ನೊಡೆಲ್ ಅಧಿಕಾರಿ, ಅಡ್ಯನಡ್ಕ ಪಶುವೈದ್ಯಾಧಿಕಾರಿ ಡಾ.ಪರಮೇಶ್ವರ ನಾಯ್ಕ್, ತಾ.ಪಂ ಸದಸ್ಯೆ ಲಲಿತಾ, ಕವಿತಾ, ಉದಯ ದಂಬೆ,ನಾರಾಯಣ ನಾಯ್ಕ್, ಆನಂದ ನಾಯ್ಕ, ಜಯಂತ ಗೌಡ, ಭವಾನಿ, ಪುಷ್ಪಾವತಿ, ಗಂಗಯ್ಯ ಗೌಡ, ಪವಿತ್ರ, ಮೋಹಿನಿ ಮತ್ತಿತರರು ಉಪಸ್ಥಿತರಿದ್ದರು. ಲೆಕ್ಕ ಸಹಾಯಕ ರವಿಚಂದ್ರ ಬಿ.ಎಸ್ ಸ್ವಾಗತಿಸಿದರು.ಸದಸ್ಯ ಉದಯ ದಂಬೆ ವಂದಿಸಿದರು.ಸಿಬ್ಬಂದಿಗಳಾದ ರಾಮ ನಾಯ್ಕ್, ಶಿವರಾಮಯ್ಯ, ಹರಿಣಾಕ್ಷಿ, ಕು. ಮಮತಾ ಪುಣಚ, ಉಸ್ಮಾನ್, ಅಶೋಕ್ ಸಹಕರಿಸಿದರು. ಬಳಿಕ ಪುಣಚ ಪೇಟೆ ಆವರಣದಲ್ಲಿ ಸ್ವಚ್ಚತಾ ಕಾರ‍್ಯಕ್ರಮ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.