ಮುಕ್ಕೂರು: ಪ್ರಥಮ ವರ್ಷದ ಶಾರದೋತ್ಸವ`ಸಂಸ್ಕೃತಿ, ನಂಬಿಕೆ ದೇಶದ ಜೀವಾಳ’

Puttur_Advt_NewsUnder_1
Puttur_Advt_NewsUnder_1

6ಸವಣೂರು: ಸಂಸ್ಕೃತಿ, ಸಂಸ್ಕಾರದ ಚೌಕಟ್ಟಿನಲ್ಲಿ ಪರಸ್ಪರ ನಂಬಿಕೆಯ ಬದುಕು ಸಾಗಿಸಬೇಕು. ಸಂಸ್ಕೃತಿ ಮತ್ತು ನಂಬಿಕೆ ಈ ದೇಶದ ಜೀವಾಳ ಎಂದು ದ.ಕ.ಸಂಸದ ಹಾಗೂ ಮುಕ್ಕೂರು-ಪೆರುವಾಜೆ ಶಾರದೋತ್ಸವ ಸಮಿತಿ ಗೌರವಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.

ಅವರು ಪೆರುವಾಜೆ ಗ್ರಾಮದ ಮುಕ್ಕೂರು-ಪೆರುವಾಜೆ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ಮುಕ್ಕೂರು ಶಾಲಾ ವಠಾರದಲ್ಲಿ ನಡೆದ ಪ್ರಥಮ ವರ್ಷದ ಶಾರದೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸವಣೂರು ಸ.ಪ.ಪೂ.ಕಾಲೇಜಿನ ಪ್ರಾಂಶುಪಾಲ ಬಿ.ವಿ. ಸೂರ್ಯನಾರಾಯಣರು ಮಾತನಾಡಿ, ಆಚರಣೆಗಳು ಊರಿನ ಸಾಮರಸ್ಯ, ಸೌಹಾರ್ದತೆಗೆ ಸಹಕಾರಿ ಆಗಬೇಕು. ಹಬ್ಬದ ನಂಬಿಕೆಯನ್ನು ಅರಿತು, ಅದರ ಆದರ್ಶವನ್ನು ಜೀವನದಲ್ಲಿ ಪಾಲಿಸಬೇಕು ಎಂದರು.

ಜಿ.ಪಂ.ಸದಸ್ಯ ಎಸ್.ಎನ್. ಮನ್ಮಥ ಮಾತನಾಡಿ, ಶಾರದೋತ್ಸವದ ಮೂಲಕ ಧಾರ್ಮಿಕ ಜಾಗೃತಿ ಸಾಧ್ಯವಾಗುತ್ತದೆ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಮುಕ್ಕೂರು – ಪೆರುವಾಜೆ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಅಡ್ಯತಕಂಡ ಮಾತನಾಡಿ, ಊರ-ಪರವೂರಿನ ಜನರ ಸಹಕಾರದಿಂದ ಶಾರದೋತ್ಸವ ಆರಂಭಗೊಂಡಿದೆ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.

ವೇದಿಕೆಯಲ್ಲಿ ವೇ.ಮೂ.ರಾಘವೇಂದ್ರ ಶಾಸ್ತ್ರಿ ಮುಕ್ಕೂರು, ಪೆರುವಾಜೆ ಗ್ರಾ.ಪಂ.ಸದಸ್ಯರಾದ ಉಮೇಶ್ ಕೆ.ಎಂ.ಬಿ., ಚನಿಯ ಕುಂಡಡ್ಕ, ಸ್ವಾತಿ ಕುಂಡಡ್ಕ, ಕಲಾವಿದ ಐತ್ತ ಪಾಟಾಜೆ, ಶಾರದೋತ್ಸವ ಸಮಿತಿ ಕೋಶಾಧಿಕಾರಿ ಲಿಂಗಪ್ಪ ಗೌಡ, ಜತೆ ಕಾರ್ಯದರ್ಶಿ ರೂಪಾನಂದ ಮೊದಲಾದವರು ಉಪಸ್ಥಿತರಿದ್ದರು.  ಸಮಿತಿ ಕಾರ್ಯದರ್ಶಿ ನಾರಾಯಣ ಕೊಂಡೆಪ್ಪಾಡಿ ಪ್ರಸ್ತಾವನೆಗೈದು, ಸ್ವಾಗತಿಸಿದರು. ಉಪಾಧ್ಯಕ್ಷ ವಿಜಯ ಕುಮಾರ್ ರೈ ಪೆರ್‍ವೋಡಿ ವಂದಿಸಿದರು. ಉಪನ್ಯಾಸಕಿ ಆರಾದಿತಾ ಕಾಯರ್‌ಮಾರ್ ನಿರೂಪಿಸಿದರು. ದೇರಬೈಲ್ ತಂತ್ರಿ ರಾಘವೇಂದ್ರ ಶಾಸ್ತ್ರಿ ಅವರ ನೇತೃತ್ವದಲ್ಲಿ ಬೆಳಗ್ಗೆ ಶಾರದಾ ಪ್ರತಿಷ್ಠೆ, ಗಣಹೋಮ ನಡೆಯಿತು. ಅನಂತರ ಅಕ್ಷರಾಭ್ಯಾಸ, ಮಹಾಪೂಜೆ, ಇತ್ಯಾದಿ ಸೇವೆಗಳು ನಡೆಯಿತು. ಬಳಿಕ ವಿದ್ಯಾರ್ಥಿಗಳಿಗೆ ಭಕ್ತಿಗೀತೆ ಮತ್ತು ಸಾರ್ವಜನಿಕರಿಗೆ ಹಗ್ಗಜಗ್ಗಾಟ ನಡೆಯಿತು.

ಸಂಜೆ ಮುಕ್ಕೂರು ಶಾಲಾ ವಠಾರದಿಂದ ಕುಂಡಡ್ಕ ಗೌರಿ ಹೊಳೆಗೆ ಶಾರದಾದೇವಿಯ ಶೋಭಾಯಾತ್ರೆ ನಡೆಯಿತು. ಹುಲಿವೇಷ ಕುಣಿತ ಮೆರವಣಿಗೆಯ ಸೊಬಗು ಹೆಚ್ಚಿಸಿತ್ತು. ಈ ಸಂದರ್ಭದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.