ಹಾರಾಡಿ ಶಾಲೆಯಲ್ಲಿ ಧರ್ಮಸ್ಥಳ ಶಾಂತಿವನ ಟ್ರಸ್ಟ್‌ನಿಂದ ಸ್ಪರ್ಧೆ

Puttur_Advt_NewsUnder_1
Puttur_Advt_NewsUnder_1

haradiಪುತ್ತೂರು: ಹಾರಾಡಿ ಪ್ರಾಥಮಿಕ ಶಾಲೆಯಲ್ಲಿ ಪ್ರತಿವರ್ಷದಂತೆ ವಿದ್ಯಾರ್ಥಿಗಳಿಗೆ ನಡೆಸಲಾಗುವ ಧರ್ಮಸ್ಥಳ ಶಾಂತಿವನ ಟ್ರಸ್ಟ್‌ನ ಯೋಗ ಮತ್ತು ನೈತಿಕ ಶಿಕ್ಷಣದ ಶಾಲಾ ಹಂತದ ಸ್ಪರ್ಧೆಗಳನ್ನು ಅ.೪ ಮತ್ತು ೫ರಂದು ನಡೆಸಲಾಯಿತು.

ಪ್ರಾಥಮಿಕ ಹಾಗೂ ಪ್ರೌಢ ವಿಭಾಗದಲ್ಲಿ ಪ್ರತ್ಯೇಕವಾಗಿ ಭಾಷಣ, ಪ್ರಬಂಧ ರಚನೆ ,ಶ್ಲೋಕ ಕಂಠಪಾಠ ಹಾಗೂ ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಒಟ್ಟು ೧೬೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಥಮಿಕ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಯಕ್ಷಿತಾ ಪ್ರಥಮ, ಅಭಿಲಾಷಾ ದೋಟ ದ್ವಿತೀಯ,  ಲೋಕೇಶ್ವರಿ ತೃತೀಯ ಸ್ಥಾನ  ಪಡೆದುಕೊಂಡರು. ಪ್ರಬಂಧ ಸ್ಪರ್ಧೆಯಲ್ಲಿ ಶಿವಾನಿ ಪ್ರಥಮ, ಲಿಖಿತ್ ದ್ವಿತೀಯ, ಅಭಿಲಾಷಾ ದೋಟ ಹಾಗೂ ನಿಶ್ಮಿಯಾ ತೃತೀಯ,  ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ಶ್ರೀವಿದ್ಯಾ ಪಾದೆಕಲ್ಲು ಪ್ರಥಮ,  ಧನ್ಯಾ ಪೈ ದ್ವಿತೀಯ,  ಕೀರ್ತೇಶ್ ಹಾಗೂ ನಿಶ್ಮಿಯಾ ತೃತೀಯ,  ಚಿತ್ರಕಲೆ ಸ್ಪರ್ಧೆಯಲ್ಲಿ ಸುಧಾಂಶು ಪ್ರಥಮ, ಶಿವಾನಿ ದ್ವಿತೀಯ, ಭೂಮಿಕಾ ಹಾಗೂ ಲೋಕೇಶ್ವರಿ ತೃತೀಯ ಸ್ಥಾನ ಪಡೆದುಕೊಂಡರು.

ಪ್ರೌಢ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ದಿವಿತ್ ಯು.ರೈ ಪ್ರಥಮ,  ಭಾವನಾ ದ್ವಿತೀಯ,  ಫಾತಿಮಾ ಅಮ್ನಾಝ್ ತೃತೀಯ,  ಪ್ರಬಂಧ ಸ್ಪರ್ಧೆಯಲ್ಲಿ ಶಮಿತಾ ಪ್ರಥಮ,  ಭಾವನ ದ್ವಿತೀಯ,  ದಿವಿತ್ ಯು.ರೈ ತೃತೀಯ,  ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ಶ್ರಾವ್ಯಾ ಪ್ರಥಮ,  ಸಬಿಯಾ ದ್ವಿತೀಯ,  ಫಾತಿಮಾ ಅಮ್ನಾಝ್ ತೃತೀಯ,  ಚಿತ್ರಕಲೆ ಸ್ಪರ್ಧೆಯಲ್ಲಿ ಶರಣ್ ಪ್ರಥಮ,  ಫಾತಿಮಾ ಅಮ್ನಾಝ್ ದ್ವಿತೀಯ,  ಸಬಿಯಾ ಹಾಗೂ ಭಾವನ ತೃತೀಯ ಸ್ಥಾನ ಪಡೆದುಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.