Breaking News

ರಾಮಕುಂಜ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ಜಲ-ವೃಕ್ಷ ಸಂರಕ್ಷಣೆಯ ಜಾಗೃತಿ ಜಾಥಾ

Puttur_Advt_NewsUnder_1
Puttur_Advt_NewsUnder_1

17ರಾಮಕುಂಜ: ರಾಮಕುಂಜ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಜಲ-ವೃಕ್ಷ ಸಂರಕ್ಷಣೆಯ ಜಾಗೃತಿ ಜಾಥಾ ರಾಮಕುಂಜದಿಂದ ಉಪ್ಪಿನಂಗಡಿ ತನಕ ಅ.೮ರಂದು ನಡೆಯಿತು.

ರಾಮಕುಂಜ ಸರಕಾರಿ ಹಿ.ಪ್ರಾ ಶಾಲೆಯಲ್ಲಿ ವಿದ್ಯಾರ್ಥಿಗಳ ಪಾದಯಾತ್ರೆ ಉದ್ಘಾಟಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ರೇವತಿಯವರು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಶುಭಹಾರೈಸಿದರು. ಕಾಲೇಜಿನ ಪ್ರಾಚಾರ್ಯ ಡಾ| ಸಂಕೀರ್ತ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಲಂಕಾರಿನ ಶಿವರಾಮ್ ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳು ರಾಮಕುಂಜದಿಂದ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದವರೆಗೆ ಸುಮಾರು 11 ಕಿ.ಮೀ ಪಾದಯಾತ್ರೆ ನಡೆಸಿ ಜಲ-ವೃಕ್ಷ ಸಂರಕ್ಷಣೆ ಬಗ್ಗೆ ಕರಪತ್ರ ಹಂಚಿದರು. ಮಾರ್ಗ ಮಧ್ಯೆ ಕೆಮ್ಮಾರ ಸರಕಾರಿ ಹಿ.ಪ್ರಾ.ಶಾಲೆ, ಪುಳಿತ್ತಡಿ-ಮಠ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ವಿದ್ಯಾರ್ಥಿಗಳೊಡನೆ ಸೇರಿ ಪರಿಸರ ಜಾಗೃತಿ ಸಂದೇಶ ನೀಡಲಾಯಿತು.

ಸಮಾರೋಪ: ಸಂಜೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘುನಾಥ ರೈಯವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಉಪನ್ಯಾಸಕ ಡಾ| ಶ್ರೀಶ ಕುಮಾರ್ ಸಮಾರೋಪ ಭಾಷಣ ಮಾಡಿ, ಪ್ರಕೃತಿ ಸಂಪತ್ತನ್ನು ನಾವು ಉಳಿಸಬೇಕೇ ಹೊರತು ಅಳಿಸುವುದಲ್ಲ. ನಾಗರಿಕರಾದ ನಾವು ಈ ನಿಟ್ಟಿನಲ್ಲಿ ಇನ್ನಷ್ಟು ಪ್ರಜ್ಞಾವಂತರಾಗಬೇಕು. ಮುಂದಿನ ಪೀಳಿಗೆಗೂ ಜಲ-ವೃಕ್ಷ ಸಂಪತ್ತು ಉಳಿಯಬೇಕು ಎಂದು ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಪ್ರೊ| ವಿನೀತಾ ರೈ, ಉಪ್ಪಿನಂಗಡಿ ಪದವಿ ಕಾಲೇಜಿನ ಪ್ರಾಂಶುಪಾಲೆ ಮೇರಿ ಬಿ. ಸಿ, ಕಾಲೇಜಿನ ನಿರ್ದೇಶಕ ವೇದವ್ಯಾಸ ರಾಮಕುಂಜ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೃಷ್ಣ ರಾವ್, ಸೋಮನಾಥ, ಕಾಲೇಜಿನ ಪ್ರಾಂಶುಪಾಲ ಡಾ| ಸಂಕೀರ್ತ್ ಹೆಬ್ಬಾರ್ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಕೃಷ್ಣಮೂರ್ತಿ ಕೆ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ನಾಯಕಿ ಪ್ರತಿಭಾ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.