Breaking News

ಫೇಸ್‌ಬುಕ್‌ನಲ್ಲಿ ಕಟೀಲು ದೇವರಿಗೆ ಅವಹೇಳನ: ಬೆಳ್ಳಾರೆಯ ಶಾಫಿ ಬಂಧನ

Puttur_Advt_NewsUnder_1
Puttur_Advt_NewsUnder_1

7ಪುತ್ತೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರನ್ನು ಅವಹೇಳನ ಮಾಡಿ ಫೇಸ್‌ಬುಕ್‌ನಲ್ಲಿ ಬರಹಗಳನ್ನು ಪ್ರಕಟಿಸಿದ ಆರೋಪದಡಿ ಸುಳ್ಯ ತಾಲೂಕಿನ ಬೆಳ್ಳಾರೆಯ ಬೀಡುಮನೆ ಬಿ.ಎಂ. ಶಾಫಿ (30ವ) ಎಂಬಾತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಹರೈನ್‌ನಲ್ಲಿ ಉದ್ಯೋಗಿಯಾಗಿರುವ ಬೀಡುಮನೆ ಶಾಫಿ ತನ್ನ ಫೇಸ್ ಬುಕ್‌ನಲ್ಲಿ ಕಟೀಲು ದೇವರನ್ನು ಅವಹೇಳನ ಮಾಡುವಂತಹ ಬರಹಗಳನ್ನು ಪ್ರಕಟಿಸಿದ್ದ. ಇದರ ವಿರುದ್ದ ದ.ಕ.ಜಿಲ್ಲೆಯಾದ್ಯಂತ ಹೋರಾಟ, ಪ್ರತಿಭಟನೆ, ಪಾದಯಾತ್ರೆ ನಡೆದಿದ್ದವು. ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಮತ್ತು ಮಂಗಳೂರು ಉತ್ತರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರತಿಭಟನೆ ಹೆಚ್ಚುತ್ತಿದ್ದ ಹಿನ್ನಲೆಯಲ್ಲಿ ಪೊಲೀಸರು ಶಾಫಿ ಸೇರಿದಂತೆ ಹಲವರ ಮೇಲೆ ಲುಕ್ ಔಟ್ ನೋಟಿಸು ಜಾರಿ ಮಾಡಿದ್ದರು. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಬಹುತೇಕರು ಅರಬ್ ರಾಷ್ಟ್ರಗಳಲ್ಲಿ ಇದ್ದುದರಿಂದ ಪೊಲೀಸರು ಅವರೆಲ್ಲರ ವಿರುದ್ಧ ಲುಕ್‌ಔಟ್ ನೋಟಿಸು ಜಾರಿ ಮಾಡಿದ್ದರು.
ಅ.9ರಂದು ಬಹರೈನ್‌ನಿಂದ ಬಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದ ಬಿ.ಎಂ.ಶಾಫಿಯನ್ನು ವಲಸೆ ತಪಾಸಣಾ ವಿಭಾಗದ ಅಧಿಕಾರಿಗಳು ವಶಕ್ಕೆ ಪಡೆದು ಮಂಗಳೂರು ಉತ್ತರ ವಲಯದ ಪೊಲೀಸರ ವಶಕ್ಕೆ ಒಪ್ಪಿಸಿದರು. ಆತನನ್ನು ಅಂದೇ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಅ.18ರವರೆಗೆ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬೆಳ್ಳಾರೆ ಠಾಣೆಯಲ್ಲಿ ದೂರು: ಶಾಫಿ ಬಿ.ಎಂ.ಮೇಲೆ ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ಪೊಲೀಸ್ ದೂರು ನೀಡಲಾಗಿತ್ತು. ಹಿಂದೂ ದೇವತೆಗಳನ್ನು ಅವಹೇಳನ ಮಾಡಿ ಫೇಸ್‌ಬುಕ್ ನಲ್ಲಿ ಬರಹ ಪ್ರಕಟಿಸುವುದು, ದುರ್ಗಾವಾಹಿನಿ ಕಾರ್ಯಕರ್ತೆಯರ ಬಗ್ಗೆ ಅಶ್ಲೀಲವಾಗಿ ನಿಂದನೆ ಪ್ರಕಟಿಸುವುದು, ಪೆರುವಾಜೆ ಕಾಲೇಜಿನ ವಿದ್ಯಾರ್ಥಿನಿಯರನ್ನು ನಿಂದಿಸಿ ಬರೆಯುವುದು ಮಾಡುತ್ತಿದ್ದಾನೆ ಎಂದು ಬೆಳ್ಳಾರೆಯ ಚಂಚಲಾಕ್ಷಿ ಎಂಬವರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದರು. ಮಂಗಳೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಈ ದೂರುಗಳನ್ನು ಕೂಡ ಮಂಗಳೂರು ಠಾಣೆಗೆ ವರ್ಗಾಯಿಸಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.