Breaking News

ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ, ವಿಟ್ಲ ಪೊಲೀಸ್ ಠಾಣೆಯ ಸಹಯೋಗದಲ್ಲಿ ಪೋಕ್ಸೋ ಕಾಯ್ದೆಯ ಮಾಹಿತಿ

Puttur_Advt_NewsUnder_1
Puttur_Advt_NewsUnder_1

12ವಿಟ್ಲ: ಸಮಾಜದಲ್ಲಿರುವ ಅಶಕ್ತರಿಗೆ ಸಂಘಟನೆಗಳು ಶಕ್ತಿಯಾಗಿ ನಿಲ್ಲಬೇಕು. ನಮ್ಮೊಳಗಿನ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಿ ಎಲ್ಲರೂ ಸಮಾನರೆಂಬ ಭಾವನೆಯನ್ನು ತುಂಬುವ ಕಾರ್ಯವಾಗಬೇಕು. ನಮ್ಮ ಅರಿವು ನಮ್ಮ ಗುರುವಾಗಿದ್ದು, ಅರಿವಿಗೆ ವಿದ್ಯೆಯ ಅವಶ್ಯಕತೆ ಇದೆ. ಮಕ್ಕಳಿಗೆ ನೆರವಾಗುವ ಜತೆಗೆ ಸಮಾಜದವನ್ನು ಸುಶಿಕ್ಷಿತಗೊಳುಸುವ ಹೊಣೆ ಎಲ್ಲರಲ್ಲಿದೆ ಎಂದು ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ಸಿ ಆರ್ ರವೀಶ್ ಹೇಳಿದರು.
ಅವರು ಅ.16ರಂದು ವಿಟ್ಲ ಮಾದರಿ ಶಾಲೆಯಲ್ಲಿ ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾ ಪ್ರಧಾನ ಕಛೇರಿ ವಿಟ್ಲ ಮತ್ತು ವಿಟ್ಲ ಪೊಲೀಸ್ ಠಾಣೆಯ ಸಹಯೋಗದಲ್ಲಿ ಸಂಘಟನೆ 10 ವರ್ಷ ಪೂರೈಸಿದ ಪ್ರಯುಕ್ತ ನಡೆದ ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ ಮತ್ತು ಸಂಘಟನೆಯ ಸದಸ್ಯರಿಗೆ ಗುರುತು ಚೀಟಿ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಟ್ಲ ಠಾಣೆಯ ಪೊಲೀಸ್ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ ಕಾರ್ಯಕ್ರಮ ಉದ್ಘಾಟಿಸಿದರು. ದಕ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ. ಕೆ. ಸೇಸಪ್ಪ ಬೆದ್ರಕಾಡು ರವರನ್ನು ಠಾಣೆಯ ವತಿಯಿಂದ ಸನ್ಮಾನಿಸಲಾಯಿತು. ಆಲ್ ಇಂಡಿಯಾ ಕ್ರೈಮ್ ಪ್ರಿವೆನ್‌ಶನ್ ಸೊಸೈಟಿ ಜಿಲ್ಲಾ ವೈಸ್ ಗವರ್ನರ್ ಕಸ್ತೂರಿ ಫೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ವಿಟ್ಲ ಶಿಶು ಅಬಿವೃದ್ಧಿ ಯೋಜನಾಧಿಕಾರಿ ಸುಧಾ ಜೋಷಿ, ಉದ್ಯಮಿ ಸುದರ್ಶನ ಪಡಿಯಾರ್, ಶಾಲಾ ಮುಖ್ಯ ಶಿಕ್ಷಕ ಎಂ. ಮೋಹನರಾಜ್, ಮಹಿಳಾ ಘಟಕ ಅಧ್ಯಕ್ಷೆ ಚಂದ್ರಾವತಿ ಎಂ. ಮಾಣಿಲ ಉಪಸ್ಥಿತರಿದ್ದರು. ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ಉಪಾಧ್ಯಕ್ಷೆ ದಿವ್ಯಾ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಚಂದ್ರ ಶೇಖರ ಯು. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.