Breaking News

ಚಿಕ್ಕಮುಡ್ನೂರು ಜನಜಾಗೃತಿ ಸಮಿತಿಯಿಂದ ಮಾಹಿತಿ

Puttur_Advt_NewsUnder_1
Puttur_Advt_NewsUnder_1

14ಕೆಮ್ಮಾಯಿ: ಚಿಕ್ಕಮುಡ್ನೂರು ಗ್ರಾಮದ ಜನಜಾಗೃತಿ ಸಮಿತಿಯ ಅಧ್ಯಕ್ಷ ರಘುನಾಥ ರೈಯವರ ನೇತೃತ್ವದಲ್ಲಿ ಜಿಡೆಕಲ್ಲು ಶಾಲೆಯಲ್ಲಿ ಸಬೆ ನಡೆಯಿತು. ಈ ಸಂದರ್ಭದಲ್ಲಿ ರಘುನಾಥ ರೈ ಮಾತನಾಡಿ ನವಜೀವನ ಸಮಿತಿ ಸದಸ್ಯರಿಗೆ ಅನಾರೋಗ್ಯವಾದರೆ ಫರಂಗಿಪೇಟೆ ಸೇವಾಂಜಿನಿ ಟ್ರಸ್ಟ್‌ನಲ್ಲಿ ರಿಯಾಯಿತಿ ದರದಲ್ಲಿ ತಮಗೆ ಬೇಕಾದ ಔಷಧಿ ಸಿಗುವ ಬಗ್ಗೆ ಮತ್ತು ಸದಸ್ಯರು ಯೋಜನೆಯ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಭಾಗವಹಿಸುವಾಗ ತಮ್ಮ ಬ್ಯಾಡ್ಜ್ ಧರಿಸಬೇಕು ಎಂದು ವಿನಂತಿಸಿದರು. ಗ್ರಾಮ ಸಮಿತಿ ಗೌರವ ಸಲಹೆಗಾರ ಡಾ.ನಾರಾಯಣ ಭಟ್ ಯನ್. ಕೆಮ್ಮಾಯಿರವರು ಮಾತನಾಡಿ, ನವಜೀವನ ಗ್ರಾಮ ಸಮಿತಿ ಸಭೆಗೆ ಸದಸ್ಯರು ಭಾಗವಹಿಸುವುದು ಮುಖ್ಯ ಎಂದು ಹೇಳಿದರು. 1000 ನೇ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿ ಶಿವಪ್ಪ ಗಡಿಕಲ್ಲುರವರನ್ನು ಸಭೆಗೆ ಪರಿಚಯ ಮಾಡಲಾಯಿತು. ನವಜೀವನ ಸಮಿತಿ ಸದಸ್ಯರ ಮನೆ ಭೇಟಿಯ ಬಗ್ಗೆ ಚರ್ಚೆ ಮಾಡಲಾಯಿತು.
ಗೌರವ ಸಲಹೆಗಾರ ಸಂಪತ್ ಕುಮಾರ್ ಜೈನ್ ಎಣಿಮೊಗರು, ಉಪಾಧ್ಯಕ್ಷ ಶರತ್ ಕುಮಾರ್, ಕಾರ್ಯದರ್ಶಿ ವೀಣಾ ಕೃಷ್ಣ ನಗರ, ಸೇವಾ ಪ್ರತಿನಿಧಿ ರೇಣುಕಾ ಎಸ್. ಜಿಡೆಕಲ್ಲು, ಕೋಶಾಧಿಕಾರಿ ಗಣೇಶ್ ಬಿ, ಕೃಷ್ಣಪ್ಪ ಪೂಜಾರಿ, ಬಾಲಕೃಷ್ಣ ಪೂಜಾರಿ, ವೆಂಕಪ್ಪ, ಸತೀಶ್, ಶಿವಪ್ಪ, ಲಕ್ಷ್ಮೀಶ, ರಮೇಶ್ ಪಿ, ಗಣೇಶ್, ಹರೀಶ್ ಪಿ, ಮುಂಡಪ್ಪ, ಶರತ್, ಉಪಸ್ಥಿತರಿದ್ದರು. ಹರೀಶ್ ಪ್ರಾರ್ಥಿಸಿ ರೇಣುಕಾ ಎನ್ ಸ್ವಾಗತಿಸಿದರು. ರಘುನಾಥ ರೈ ಕಾರ್ಯಕ್ರಮ ನಿರೂಪಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.