ಕಡಬದ  ಸುರೇಶ್ ಕುಮಾರ್ ಚಾಮರಾಜನಗರ ಎಸಿಬಿ ಇನ್ಸ್‌ಪೆಕ್ಟರ್

Puttur_Advt_NewsUnder_1
Puttur_Advt_NewsUnder_1

kadaba

ಕಡಬ: ಮೈಸೂರು ಜಿಲ್ಲೆ ಬೀಚನಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಕಡಬ ಗ್ರಾಮದ ಕೋಡಿಬೈಲು ನಿವಾಸಿ ಸುರೇಶ್ ಕುಮಾರ್ ಎಸ್.ಡಿ.ಯವರು ಭಡ್ತಿಗೊಂಡು ಚಾಮರಾಜನಗರ ಎಸಿಬಿ ಇನ್ಸ್‌ಪೆಕ್ಟರ್ ಆಗಿ ವರ್ಗಾವಣೆಗೊಂಡಿದ್ದಾರೆ.

ಕಡಬ ಗ್ರಾಮದ ಕೋಡಿಬೈಲು ದಿ| ದಿವಾಕರ ಸುವರ್ಣ ಮತ್ತು ದೇವಕಿ ದಂಪತಿಯ ಪುತ್ರರಾಗಿರುವ ಸುರೇಶ್ ಕುಮಾರ್‌ರವರು, ಕಡಬ ಮಾದರಿ ಶಾಲೆ, ಕಡಬ ಸರ್ಕಾರಿ ಪ್ರೌಢಶಾಲೆ, ಕಡಬ ಪ.ಪೂ. ಕಾಲೇಜು, ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ಶಿಕ್ಷಣ ಪಡೆದು ಬಳಿಕ ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಎಂ.ಎ (ಪೊಲಿಟಿಕಲ್ ಸೈನ್ಸ್) ವ್ಯಾಸಂಗ ಮಾಡಿರುತ್ತಾರೆ.

2005 ರಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡ ಇವರು ಮೈಸೂರಿನಲ್ಲಿ ಪ್ರೊಬೆಷನರಿ ಎಸ್.ಐ. ಆಗಿ ಬಳಿಕ ೧ ವರ್ಷ ಚಿಕ್ಕಮಗಳೂರಿನಲ್ಲಿ ಪ್ರಾಕ್ಟಿಕಲ್ ಟ್ರೈನಿಂಗ್ ಬಳಿಕ ಕೊಡಗು ಜಿಲ್ಲಾ ಸೋಮವಾರಪೇಟೆ, ಗೋಣಿಕೊಪ್ಪ, ಶುಂಠಿಕೊಪ್ಪಗಳಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿ ಮೈಸೂರು ಜಿಲ್ಲಾ ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ಇನ್ಸ್‌ಪೆಕ್ಟರ್ ಆಗಿ ಭಡ್ತಿಗೊಂಡು  ಚಾಮರಾಜನಗರಕ್ಕೆ ಎಸಿಬಿ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.