ಒಡಿಯೂರು  ಶ್ರೀದೇವಿ, ದತ್ತಾತ್ರೇಯ ವಿಕಾಸ ವಾಹಿನಿ ಸ್ವಸಹಾಯ ಡಿಂಘಗಳ 5ನೇ ವಾರ್ಷಿಕೋತ್ಸವ

Puttur_Advt_NewsUnder_1
Puttur_Advt_NewsUnder_1

20ಪುತ್ತೂರು: ಒಡಿಯೂರು ಶ್ರೀದೇವಿ ಹಾಗೂ ದತ್ತಾತ್ರೇಯ ತಂಡಗಳ ೫ನೇ ವರ್ಷದ ವಾರ್ಷಿಕೋತ್ಸವ ಅ.11 ರಂದು ನೂಜಿಬೈಲು ತಾರಾನಾಥರವರ ಮನೆಯಲ್ಲಿ ನಡೆಯಿತು. ಕೇಂದ್ರ ಮೇಲ್ವಿಚಾರಕ ಸದಾಶಿವ ಅಳಿಕೆಯವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ತಂಡಗಳ ಅಭಿವೃದ್ಧಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ತಾಲೂಕು ಮೇಲ್ವಿಚಾರಕ ಸುರೇಶ್ ಶೆಟ್ಟಿ, ಕಾವು ಘಟ ಸಮಿತಿ ಅಧ್ಯಕ್ಷ ಶಿವರಾಮ ಪೂಜಾರಿಯವರು ಶುಭ ಹಾರೈಸಿದರು. ಶ್ರೀದೇವಿ ತಂಡದ ಸದಸ್ಯ ತಾರಾನಾಥ ಯೋಜನೆಯ ಅನಿಸಿಕೆ ವ್ಯಕ್ತಪಡಿಸಿದರು. ಒಡಿಯೂರು ಶ್ರೀ ಗುರುದೇವ ಭಜನಾ ಸಂಘ ಈಶ್ವರಮಂಗಲ ಘಟ ಸಮಿತಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಗ್ರಾಮ ಸಂಯೋಜಿಕಿ ಸವಿತಾ ರೈ ಮಾತನಾಡಿ ಎರಡು ತಂಡಗಳು ನಮ್ಮ ಘಟ ಸಮಿತಿಯ ಎರಡು ಕಣ್ಣುಗಳು ಎಂದು ಹೇಳಿದರು. ವೇದಿಕೆಯಲ್ಲಿ ಹಿರಿಯರಾದ ಮೀನಾಕ್ಷಿ , ಈಶ್ವರಮಂಗಲ ಘಟ ಸಮಿತಿಯ ಉಪಾಧ್ಯಕ್ಷ ಲಲಿತಾ, ಕಾವು ಘಟಸಮಿತಿಯ ಕಾರ್ಯದರ್ಶಿ ಯತೀಶ್ ಪೂಜಾರಿ, ಸೇವಾದೀಕ್ಷಿತರಾದ ಸುನೀತಾ ಕೆ., ಹೇಮಾವತಿ ಎಂ.ಕೆ ಮತ್ತು ಭಜನಾ ಸಂಘದ ಅಧ್ಯಕ್ಷ ಅರ್ಪಣಾ ಎಂ. ಹಾಗೂ ಯೋಗೀಶ್,ರಾಘವ ಎಸ್ ಉಪಸ್ಥಿತರಿದ್ದರು.ಸ್ಥಳೀಯ ಸಂಘಗಳಾದ ವರಮಹಾಲಕ್ಷ್ಮೀ, ಪಂಚಮಿ, ಹನುಮಶ್ರೀ ತಂಡದ ಸದಸ್ಯರು ಭಾಗವಹಿಸಿದ್ದರು. ದತ್ತಾತ್ರೇಯ ತಂಡದ ಸವಿತಾ ಸ್ವಾಗತಿಸಿ, ಶ್ರೀದೇವಿ ತಂಡದ ಬಾಬು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.