ಪರ್ಪುಂಜ ಅತಿಥಿ ಮೊಬೈಲ್ಸ್,ಎಲೆಕ್ಟ್ರಾನಿಕ್ಸ್ ಶಾಪ್‌ನಲ್ಲಿ ದೀಪಾವಳಿ ಧಮಾಕ; ಒಂದೇ ಸೂರಿನಡಿ ಎಲ್ಲಾ ವಸ್ತುಗಳ ಮಾರಾಟ-ವಿಶೇಷ ಮಳಿಗೆ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

athithi

ಪುತ್ತೂರು: ಒಳಮೊಗ್ರು ಗ್ರಾಮದ ಪರ್ಪುಂಜ ಕೆ.ವಿ ರೈ ಕಾಂಪ್ಲೆಕ್ಸ್‌ನಲ್ಲಿರುವ ಅತಿಥಿ ಮೊಬೈಲ್ಸ್ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ಎಲ್ಲಾ ತರದ ಎಲೆಕ್ಟ್ರಾನಿಕ್ಸ್ ವಸ್ತುಗಳ ವಿಶೇಷ ದರ ಕಡಿತ ಮಾರಾಟ ದೀಪಾವಳಿ ಧಮಾಕ ಅ.16ರಿಂದ ಆರಂಭಗೊಂಡಿದೆ. ಟಿ.ವಿ, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಮೊಬೈಲ್ ಫೋನ್ ಸೇರಿದಂತೆ ಎಲ್ಲಾ ಕಂಪೆನಿಗಳ ಎಲೆಕ್ಟ್ರಾನಿಕ್ಸ್ ವಸ್ತುಗಳು ಒಂದೇ ಸೂರಿನಡಿ ದೊರೆಯುವ ನಿಟ್ಟಿನಲ್ಲಿ ತೆರೆಯಲಾದ ವಿಶೇಷವಾದ ತಾತ್ಕಾಲಿಕ ಮಳಿಗೆಯನ್ನು  ಪನೊಡಾ ಬೋಡ್ಚಾ ತುಳು ಸಿನಿಮಾದ ನಿರ್ದೇಶಕ ಮಧು ಸುರತ್ಕಲ್‌ರವರು ರಿಬ್ಬನ್ ತುಂಡರಿಸುವ ಮೂಲಕ ಉದ್ಘಾಟಿಸಿ, ದೀಪಾವಳಿ ಎಲ್ಲರಿಗೂ ಒಳಿತನ್ನು ಮಾಡಲಿ, ಅತಿಥಿ ಮೊಬೈಲ್ ಸಂಸ್ಥೆಯವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಶುಭ ಹಾರೈಸಿದರು. ಒಳಮೊಗ್ರು ಗ್ರಾ.ಪಂ ಅಧ್ಯಕ್ಷ ಯತಿರಾಜ ರೈ ನೀರ್ಪಾಡಿಯವರು ದೀಪ ಬೆಳಗಿಸಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ಕುಂಬ್ರ ಸಿ.ಎ ಬ್ಯಾಂಕ್ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಕೃಷಿಕರಾದ ಬಾರಿಕೆ ನಾರಾಯಣ ರೈ, ಪ್ರೇಮ್‌ರಾಜ್ ರೈ, ಪರ್ಪುಂಜ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಯುವವಾಹಿನಿಯ ನಿಕಟಪೂರ್ವ ಅಧ್ಯಕ್ಷ ಶಶಿಧರ್ ಕಿನ್ನಿಮಜಲು, ಪರ್ಪುಂಜ ಸ್ನೇಹ ಮಹಿಳಾ ಮಂಡಲದ ಅಧ್ಯಕ್ಷೆ ಪ್ರಮೀಳಾ ಟಿ, ಜಯಕರ್ನಾಟಕ ಮೊಟ್ಟೆತ್ತಡ್ಕ ಘಟಕದ ಕಾರ‍್ಯದರ್ಶಿ ವಿಶ್ವಜಿತ್ ಅಮ್ಮುಂಜ, ಯುವವಾಹಿನಿ ವಿದ್ಯಾರ್ಥಿಘಟಕದ ನಿಕಟಪೂರ್ವ ಅಧ್ಯಕ್ಷ ಸಮಿತ್,ಸುರೇಶ್ ಪೂಜಾರಿ, ರಾಜೇಶ್ ಪಿದಪಟ್ಲ, ನಾಗೇಶ್ ರೈ, ಯಶೋಧರ ಗೌಡ, ಆರಿಫ್, ಹರೀಶ್ ಕೂರೇಲು, ಅಶೋಕ್ ಕೂರೇಲು, ಲೋಕೇಶ್ ಪುಣಚ, ರಾಕೇಶ್ ರೈ ಪರ್ಪುಂಜ, ರಾಜೇಶ್ ಶೇಡಿಗುಂಡಿ, ರಾಮಣ್ಣ ನಾಯ್ಕ್ ಕುರಿಯ, ನವೀನ್ ಪ್ರಸಾದ್ ರೈ ಕೈಕಾರ, ಇಬ್ರಾಹಿಂ, ಬಶೀರ್ ಪರ್ಪುಂಜ ಕಿಶೋರ್ ರೈ ಪುಂಡಿಕಾ, ಶಿವಪ್ರಸಾದ್ ಡಿಂಬ್ರಿ, ವಿಪಿನ್ ಶೆಟ್ಟಿ, ಪುರುಷೋತ್ತಮ, ಶರತ್, ಭರತ್ , ಅತಿಥಿ ಮೊಬೈಲ್ ಸಂಸ್ಥೆಯ ಮಾಲಕರ ತಂದೆ ಸೀತಾರಾಮ ಪೂಜಾರಿ ಉಪಸ್ಥಿತರಿದ್ದರು. ಅತಿಥಿ ಮೊಬೈಲ್ಸ್‌ನ ಮಾಲಕ ಸಂಪತ್ ಕುಮಾರ್ ಮತ್ತು ಪತ್ನಿ ಅಶ್ವಿನಿ ಸಂಪತ್ ಕುಮಾರ್‌ರವರುಗಳು ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.

ವಿಶೇಷ ರಿಯಾಯಿತಿ, ಭರಪೂರ ಕೊಡುಗೆಗಳು: ಮಳಿಗೆಯಲ್ಲಿ ಎಲ್ಲಾ ಕಂಪೆನಿಗಳ ಎಲೆಕ್ಟ್ರಾನಿಕ್ಸ್ ಐಟಂಗಳು, ಟಿ.ವಿ ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಮೊಬೈಲ್ ಫೋನ್‌ಗಳು ಲಭ್ಯವಿದೆ.ಶೇ.೦ ಬಡ್ಡಿ ದರದಲ್ಲಿ ಯಾವುದೇ ಡೌನ್ ಪೇಮೆಂಟ್ ಇಲ್ಲದೆ ಕನಿಷ್ಟ ಮೊತ್ತದ ಇಎಂಇಯಲ್ಲಿ ಎಲೆಕ್ಟ್ರಾನಿಕ್ಸ್ ಸಾಮಾಗ್ರಿಗಳನ್ನು ಮನೆಗೊಯ್ಯಬಹುದಾದ ವಿಶೇಷ ಅವಕಾಶ ಇದೆ. ಐಟಂಗಳನ್ನು ಖರೀದಿಸುವ ಗ್ರಾಹಕರಿಗೆ ವಿಶೇಷ ಕೊಡುಗೆಗಳು ಕಂಪೆನಿ ಕಡೆಯಿಂದ ಮತ್ತು ಅತಿಥಿ ಮೊಬೈಲ್ ಸಂಸ್ಥೆಯವರ ಕಡೆಯಿಂದ ದೊರೆಯಲಿದೆ. ಎಲ್ಲಾ ವಸ್ತುಗಳ ಮೇಲೆ ಆಕರ್ಷಕ ರಿಯಾಯಿತಿ ಇದೆ. ಈ ಕೊಡುಗೆ ಅ.೩೧ರವರೆಗೆ ಮಾತ್ರ ಇರುತ್ತದೆ. ದೀಪಾವಳಿ ಹಬ್ಬವನ್ನು ಅತಿಥಿಯಿಂದ ವಸ್ತುವೊಂದನ್ನು ಮನೆಗೊಯ್ಯುವ ಮೂಲಕ ನಿಮ್ಮ ಇಷ್ಟದ ಅತಿಥಿಯೊಂದಿಗೆ ಸಂಭ್ರಮಿಸಿ ಎಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.