ಪುತ್ತೂರು ಅರುಣಾ ಚಿತ್ರಮಂದಿರದಲ್ಲಿ ಸಿನಿಮಾ ನೋಡುವುದೇ ಈಗ ಮಜಾ; ಆವಿಷ್ಕೃತ ಪ್ರೊಜೆಕ್ಟರ್ ಅಳವಡಿಕೆಯ ಜಿಲ್ಲೆಯ ನಾಲ್ಕನೇ ಚಿತ್ರಮಂದಿರ

ಪುತ್ತೂರು: ಒಂದು ಒಳ್ಳೆಯ ಸಿನಿಮಾವನ್ನು ಎಲ್ಲರೂ ಒಟ್ಟಾಗಿ ಕುಳಿತುಕೊಂಡು ನೋಡಿ ಖುಷಿ ಪಡಬೇಕಾದರೆ ಆ ಚಿತ್ರಮಂದಿರ ಕೂಡ ಅಷ್ಟೇ ಗುಣಮಟ್ಟವನ್ನು ಹೊಂದಿರಬೇಕಾಗುತ್ತದೆ. ಚಿತ್ರಮಂದಿರದಲ್ಲಿ ಅತ್ಯಾಧುನಿಕ ಪ್ರೊಜೆಕ್ಟರ್ ಇದ್ದರೆ ಮಾತ್ರ ಒಂದು ಸಿನಿಮಾ ಕಲರ್‌ಫುಲ್ ಆಗಿ ಕಾಣಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪುತ್ತೂರು ಅರುಣಾ ಚಿತ್ರಮಂದಿರ ಇದೀಗ ತನ್ನ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದು, ಸಿನಿ ರಸಿಕರಿಗೆ ಚಿತ್ರ ವೀಕ್ಷಣೆಯ ಭರಪೂರ ಮಜಾ ನೀಡಲು ತಯಾರಾಗಿದೆ.

ಡಿಜಿಟಲ್ ತಂತ್ರಜ್ಞಾನದ ಪ್ರೊಜೆಕ್ಟರ್ ಅಳವಡಿಕೆ: ಚಿತ್ರಮಂದಿರದಲ್ಲಿ ಈ ಹಿಂದೆ 2 ಬಲ್ಬ್ ಹೊಂದಿದ ಪ್ರೊಜೆಕ್ಟರ್ ವ್ಯವಸ್ಥೆ ಇತ್ತು. ಇದೀಗ ಹೊಸದಾಗಿ ಡಿಜಿಟಲ್ ತಂತ್ರಜ್ಞಾನದ ಆವಿಷ್ಕೃತ ಪ್ಯಾನಸೋನಿಕ್ ಕಂಪೆನಿಯ ಪ್ರೊಜೆಕ್ಟರ್ ಅಳವಡಿಸಲಾಗಿದೆ. ಇದರಲ್ಲಿ ೪ ಬಲ್ಬ್‌ನ ವ್ಯವಸ್ಥೆ ಇದ್ದು, ಉತ್ಕೃಷ್ಟ ಗುಣಮಟ್ಟದ ಪ್ರೊಜೆಕ್ಟರ್ ಇದಾಗಿದೆ. ಈ ಪ್ರೊಜೆಕ್ಟರ್ ಅಳವಡಿಕೆಯಿಂದ ಸಿನಿಮಾ ಕಲರ್‌ಫುಲ್ ಆಗಿ ಕಾಣಲಿದ್ದು, ಪಿಕ್ಚರ್ ಕ್ವಾಲಿಟಿ ಅತ್ಯುತ್ತಮವಾಗಲಿದೆ.ಇಂತಹ ಡಿಜಿಟಲ್ ಪ್ರೊಜೆಕ್ಟರ್ ವ್ಯವಸ್ಥೆ ಹೊಂದಿದ ಜಿಲ್ಲೆಯ ನಾಲ್ಕು ಚಿತ್ರಮಂದಿರಗಳೆಂದರೆ ಮಂಗಳೂರಿನ ಪ್ಲಾಟಿನಂ, ಸುಚಿತ್ರಾ, ಮೂಡಬಿದಿರೆಯ ಟಾಕೀಸ್ ಹಾಗೂ ಪುತ್ತೂರು ಅರುಣಾ ಚಿತ್ರಮಂದಿರ ಆಗಿದೆ.

ಅರುಣಾ ಚಿತ್ರಮಂದಿರ’ ಪುತ್ತೂರಿನ ಅತ್ಯಂತ ಹಳೇಯ ಚಿತ್ರಮಂದಿರ ಇದಾಗಿದೆ. ಚಿತ್ರಮಂದಿರದಲ್ಲಿ ಬಾಲ್ಕನಿಯಲ್ಲಿ ೧೩೬ ಆಸನಗಳಿದ್ದರೆ, ಕೆಳಗೆ ೩೯೭ ಆಸನ ವ್ಯವಸ್ಥೆ ಇದೆ.ಬಾಲ್ಕನಿಯ ಸೀಟುಗಳು ಪುಷ್‌ಬ್ಯಾಕ್ ಸೀಟುಗಳಾಗಿವೆ.ಉತ್ತಮ ಪಾರ್ಕಿಂಗ್ ವ್ಯವಸ್ಥೆ ಕೂಡ ಇದೆ.

ಜಾಗ್ವಾರ್ ಎರಡನೇ ವಾರಕ್ಕೆ: ನಿಖಿಲ್ ಗೌಡ ಅಭಿನಯದ ’ಜಾಗ್ವಾರ್’ಸಿನಿಮಾವು ಎರಡನೇ ವಾರಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದೀಗ ಸಿನಿ ರಸಿಕರಿಗೆ ಮತ್ತಷ್ಟು ಖುಷಿ ನೀಡಲು ಚಿತ್ರಮಂದಿರದವರು ಪ್ರಯತ್ನಿಸುತ್ತಿರುವುದು ಒಳ್ಳೆಯ ವಿಚಾರವಾಗಿದೆ.ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ಮೂಲಕ ಚಿತ್ರಮಂದಿರದ ಮಾಲಕರನ್ನು ಹಾಗೂ ಸಿನಿ ನಿರ್ಮಾಪಕರನ್ನು ಪ್ರೋತ್ಸಾಹಿಸಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.