Breaking News

ಒಂದೇ ಬುಲೆಟ್..ಕಾಡುಪ್ರಾಣಿ, ಮಂಗಗಳ ನಾಗಲೋಟ; ಕೃಷಿ ರಕ್ಷಣೆಗೆ ಪೆರ್ನಾಜೆಯವರ ಆಶಾಕಿರಣ ಕೋವಿ

Puttur_Advt_NewsUnder_1
Puttur_Advt_NewsUnder_1

pernajeಚಿತ್ರ/ಬರಹ: ಸಿಶೇ ಕಜೆಮಾರ್

ಮಂಗಗಳ ಹಾವಳಿಗೆ ಕೃಷಿಕ ಹಲವಾರು ತಂತ್ರಗಳನ್ನು ಮಾಡಿದರೂ ಒಮ್ಮೆಗಷ್ಟೆ. ಶಾಶ್ವತ ಪರಿಹಾರವಲ್ಲ. ಕೃಷಿ ಮಾಡುವ ಛಲ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಕೃಷಿಯಲ್ಲಿ ಕಾಡು ಪ್ರಾಣಿಗಳ ಉಪಟಳ, ಹಾನಿ ದಿನೇ ದಿನೇ ಜಾಸ್ತಿಯಾಗುತ್ತಿದೆ. ಬೆಳೆ ಕೈಗೆ ಸಿಗಬೇಕೇನ್ನುವಷ್ಟರಲ್ಲಿ ಮಂಗಗಳು ಮುತ್ತಿಕೊಂಡು ನಮ್ಮ ಕೈಗೆ ಬರೇ ಸಿಪ್ಪೇ ನೀಡಿಬಿಡುತ್ತವೆ. ಹೆಣ್ಣು ಮಕ್ಕಳಿಗಂತೂ ಮಂಗಗಳು ಕ್ಯಾರೇ ಮಾಡುವುದಿಲ್ಲ. ಮನೆಯ ಮೇಲೆ ಎಲ್ಲೆಂದರಲ್ಲಿ ಸವಾರಿ ಮಾಡಿ ಕೃಷಿಯೇ ಬೇಡ ಎನ್ನುವಷ್ಟು ಬೇಸರವನ್ನು ತರುತ್ತದೆ. ಇಂತಹ ಸಮಯದಲ್ಲಿ ಕೋವಿಯೊಂದು ಇದ್ದರೆ ಒಳ್ಳೆಯದಲ್ವ ಎಂದಾಗ ಇದಕ್ಕೆ ಕಾನೂನು ಕಟ್ಟಳೆಗಳು ಹೆಚ್ಚು. ಹಾಗಂತ ಕಾಡು ಪ್ರಾಣಿಗಳನ್ನು ಕೊಲ್ಲುವುದು ಕೂಡ ಅಪರಾಧ. ಕಾನೂನಿನಲ್ಲಿ ಇದಕ್ಕೆ ಜೈಲು ಶಿಕ್ಷೆ ಕೂಡ ಇದೆ. ಹಾಗಂತ ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳಬೇಕು ಎಂದಲ್ಲ ಕೃಷಿಗೆ ಉಪದ್ರ ಕೊಡುವ ಪ್ರಾಣಿಗಳನ್ನು ಬೆದರಿಸಿ ಓಡಿಸಲು ಇಲ್ಲೊಂದು ಸರಳ ಕೋವಿ ತಯಾರಾಗಿದೆ. ಏರ್‌ಗನ್ ಮಾದರಿಯಲ್ಲಿ ತನ್ನದೇ ರೂಪ, ಬೇರೆಯವರಿಗಿಂತ ಭಿನ್ನವಾಗಿರಬೇಕು, ನೋಡುಗರಿಗೂ ವಿಭಿನ್ನವಾಗಿ ಕಾಣುವಂತಿರಬೇಕು ಎಂದು ಅತ್ಯಂತ ಸರಳ, ಕಡಿಮೆ ಖರ್ಚಿನಲ್ಲಿ ಈ ಕೋವಿಯ ಸಂಶೋಧನೆಯನ್ನು ಮಾಡಿದವರು ಕೃಷಿಕ ಕುಮಾರ್ ಪೆರ್ನಾಜೆಯವರು. ಇವರಿಗೆ ಸಹಕಾರ ನೀಡಿದವರು ನುರಿತ ಬಡಗಿ ಬಳ್ಪ ಪರಮೇಶ್ವರ್. ಈ ಕೋವಿಗೆ ಬೇಕಾದದ್ದು ಒಂದೇ ಒಂದು ಬುಲೆಟ್ ಅಂದರೆ ಗರ್ನಲ್( ಪಟಾಕಿ).

ಹೀಗೆ ತಯಾರಾಗಿದೆ ಆಶಾಕಿರಣ ಕೋವಿ: ೧ ೧/೨ ಇಂಚಿನ ನಳಿಗೆ ಮೂರು ಫೀಟ್‌ನದ್ದು ೧ ೧/೨ ಇಂಚಿನ ಕಪ್ಲಿಂಗ್‌ನಲ್ಲಿ ೨ ತೂತು, ಎಂಡ್ ಕ್ಯಾಪ್ ಅದಕ್ಕೆ ವೆಲ್ಡ್ ಮಾಡಲು ೪ ಫೀಟ್‌ನ ಕಬ್ಬಿಣದ ಪ್ಲೇಟ್, ಅದಕ್ಕೆ ೨ ತೂತು ಕೊರೆದು ಮರದ ಹ್ಯಾಂಡಲ್ (ಕೋವಿ ತರಹ ಮಾಡಿ) ೨ ಇಂಚು ಉದ್ದದ ಕಾಲು ಇಂಚಿನ ಬೋಲ್ಟ್‌ನ್ನು ಹ್ಯಾಂಡ್ಲ್‌ಗೆ ಸಿಕ್ಕಿಸಿದಾಗ ಕೋವಿ ರೆಡಿ. ಕಪ್ಲಿಂಗ್‌ನಲ್ಲಿ ೨ ತೂತು ಕೊರೆದು ಒಳಗಡೆ ಗರ್ನಲ್ (ಪಟಾಕಿ) ಇಟ್ಟು ಬತ್ತಿ ಹೊರ ಬರುವಂತೆ ಇಟ್ಟು ಇನ್ನೊಂದು ತೂತಲ್ಲಿ ಗಾಳಿ ಎಳೆಯುವಂತೆ ಮಾಡಿ ನಳಿಗೆಯಲ್ಲಿ ಚರಳುಕಲ್ಲು ತುಂಬಿಸಿ ಗರ್ನಲ್ ಬತ್ತಿಗೆ ಬೆಂಕಿ ಕೊಟ್ಟು ಸಿಡಿಸಬೇಕಾದ ದಿಕ್ಕಿಗೆ ಕೋವಿಯನ್ನು ಹಿಡಿದು ಸಿಡಿಸಬಹುದು. ೭೫ ಅಡಿ ಎತ್ತರದ ವರೆಗೂ ಚರಳುಕಲ್ಲು ಹೋಗಿ ನಾಟುವುದರಿಂದ ಮಂಗಗಳು ಓಡಿ ಹೋಗುತ್ತವೆ. ಈ ಕೋವಿ ತಯಾರು ಮಾಡಲು ಸುಮಾರು ೧೦೦೦ ದಿಂದ ೧೫೦೦ ರೂ ನಷ್ಟು ಖರ್ಚು ತಗಲುತ್ತದೆ. ಇದಕ್ಕೆ ಲೈಸನ್ಸ್ ಏನೂ ಬೇಡ.

ಕೋವಿಗಾಗಿ ಸಂಪರ್ಕಿಸಿರಿ: ಹತ್ತಾರು, ಕ್ಷೇತ್ರಗಳಲ್ಲಿ ಅನ್ಯರ ಸಾಧನೆಗಳ ಹೆಜ್ಜೆಗುರುತು ಮೂಡಿಸಿ ಈಗಾಗಲೇ ಸರಳ ತಂತ್ರಜ್ಞಾನ (ಬೋರ್ಡೋ ಮಿಶ್ರಣ ಟೆಕ್ನಿಕ್)ಗೆ ರಾಷ್ಟ್ರೀಯ ಪುರಸ್ಕಾರ ಗಳಿಸಿರುವ ಕುಮಾರ್ ಪೆರ್ನಾಜೆಯವರು, ಗಡ್ಡದಲ್ಲಿ ಜೇನು ಕುಳ್ಳಿರಿಸುವ ಮೂಲಕ ಇಡೀ ರಾಜ್ಯ, ರಾಷ್ಟ್ರದಲ್ಲಿ ಗಮನಸೆಳೆದಿದ್ದಾರೆ. ಸಹನೆ, ತಾಳ್ಮೆ ಇದ್ದರೆ ಏನನ್ನೂ ಸಾಧಿಸಬಹುದು. ಪರಿಶ್ರಮವಿದ್ದರೆ ಯಾವುದೇ ಯಶಸ್ಸು ಕಷ್ಟವಾಗಲಾರದು ಎಂಬುದನ್ನು ಕುಮಾರ್ ಪೆರ್ನಾಜೆ ತೋರಿಸಿಕೊಟ್ಟಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಇವರು ಪ್ರತಿಭೆಯ ಕುಮಾರ.

ಸಂಪರ್ಕಕ್ಕಾಗಿ: ಕುಮಾರ್ ಪೆರ್ನಾಜೆ 9480240643

pernaje1ಇದೊಂದು ಸರಳ ಕೋವಿ, ಯಾವುದೇ ಅಪಾಯ ಇಲ್ಲ-ಕುಮಾರ್ ಪೆರ್ನಾಜೆ: ಯಾವುದೇ ಪ್ರಾಣಿಗಳಿಗೆ ಪ್ರತಿರೋಧ ವ್ಯಕ್ತವಾದಾಗಲೇ ಅವು ಕಾಲು ಕಿತ್ತು ಓಡಲು ಸಾಧ್ಯ. ಇಲ್ಲದಿದ್ದರೆ ನಮ್ಮ ಬೆಳೆಯನ್ನು ನಾಶಮಾಡಿ ಬಿಡುತ್ತವೆ. ಮಂಗಗಳ ಹಾವಳಿಯಂತೂ ಎಲ್ಲಾ ಕಡೆ ಇದೆ. ಪ್ರಾಣಿಗಳನ್ನು ಸಾಯಿಸುವುದು ಅಪರಾಧ, ಕಾನೂನು ಪ್ರಕಾರ ಶಿಕ್ಷೆ ಆಗುತ್ತದೆ. ಅದಕ್ಕಾಗಿ ಈ ರೀತಿಯ ಬೆದರಿಸುವ ಕೋವಿಯೊಂದನ್ನು ತಯಾರು ಮಾಡಿದ್ದೇನೆ. ಇದರಲ್ಲಿ ಮನುಷ್ಯನಿಗೆ ಯಾವುದೇ ರೀತಿಯ ಅಪಾಯವಿಲ್ಲ.ಎಂದು ಕುಮಾರ್ ಪೆರ್ನಾಜೆ ಪ್ರತಿಕ್ರಿಯಿಸುತ್ತಾರೆ. ಮಂಗಗಳ ಹಾವಳಿಗೆ ಏನಾದರೂ ಆಲೋಚಿಸಿದ್ದೀರಾ ಎಂದು ಕೇಳಿದಾಗ ಎಲ್ಲವೂ ಕಾಲವೇ ಮಾಡಿಸುತ್ತದೆ, ನಾವು ನೆಪ ಮಾತ್ರ. ಆಡಿಸುವವನು ಅವನೇ ಎಂದರು

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.