ಪಡ್ನೂರು: ಬಿಜೆಪಿ ಕಾರ್ಯಕರ್ತರ ಸಭೆ

Puttur_Advt_NewsUnder_1
Puttur_Advt_NewsUnder_1

1ಪುತ್ತೂರು: ಬಿಜೆಪಿ ಪಡ್ನೂರು ಗ್ರಾಮ ಸಮಿತಿ ಸಭೆಯು ಅ.16ರಂದು ಪಡ್ನೂರು ಬಿಜೆಪಿ ಹಿರಿಯ ಕಾರ್ಯಕರ್ತ ಗಿರಿಧರ್ ಪಂಜಿಗುಡ್ಡೆ ಇವರ ಮನೆಯಲ್ಲಿ ನಡೆಯಿತು.

ಪಕ್ಷದ ಮುಂದಿನ ಹೋರಾಟ ಹಾಗೂ ಪಕ್ಷವನ್ನು ಇನ್ನಷ್ಟು ಬಲಗೊಳಿಸುವ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಪುತ್ತೂರು ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲದ ಅಧ್ಯಕ್ಷ ಜೀವಂಧರ್ ಜೈನ್, ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಕೇಶವ ಬಜತ್ತೂರು, ತಾಲೂಕು ಯುವ ಮೋರ್ಚಾದ ಅಧ್ಯಕ್ಷ ಸುನೀಲ್ ದಡ್ಡು, ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಮಣಿ ಡಿ.ಗಾಣಿಗ, ತಾಲೂಕು ಪಂಚಾಯತ್ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಗ್ರಾಮ ಪಂಚಾಯತ್ ಸದಸ್ಯೆ ಯಶೋಧಾ ಟಿ.ನಾಯ್ಕ, ರತ್ನಾಕರ ಪ್ರಭು, ಹಿರಿಯರಾದ ಜಯರಾಮ ಶೆಟ್ಟಿ ಮುಂಡಾಜೆ, ಕಿಲಿಂಗಾರು ಶಂಕರನಾರಾಯಣ ಭಟ್, ಶ್ರೀರಾಮ್ ಫ್ರೇಂಡ್ಸ್ ಸಂಚಾಲಕರಾದ ವಿಶ್ವನಾಥ ಗೌಡ ಪಂಜಿಗುಡ್ಡೆ, ಸಹ ಸಂಚಾಲಕ ಲೋಕೇಶ್ ಮುಂಡಾಜೆ, ಅಧ್ಯಕ್ಷ ಅಶೋಕ್ ಕುಂಜಾರು, ಜನಾರ್ಧನ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಬೇರಿಕೆ, ಗೆಳೆಯರ ಬಳಗ ಯರ್ಮುಂಜ ಪಳ್ಳ ಇದರ ಅಧ್ಯಕ್ಷ ಗಣೇಶ್ ಪಳ್ಳ ಹಾಗೂ ಬೂತ್ ಸಮಿತಿಯ ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು. ಬಿಜೆಪಿ ಬನ್ನೂರು ಗ್ರಾಮ ಪಂಚಾಯತ್ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಜೋಯಿಸಾ ಸ್ವಾಗತಿಸಿ, ಪೂವಪ್ಪ ದೇಂತಡ್ಕ ವಂದಿಸಿದರು. ತಾಲೂಕು ಯುವ ಮೋರ್ಚಾ ಉಪಾಧ್ಯಕ್ಷ ನವೀನ್ ಪಡ್ನೂರು ಕಾರ್ಯಕ್ರಮ ನಿರೂಪಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.