Breaking News

ಪಡುಮಲೆ ಜೀರ್ಣೋದ್ಧಾರ ಸಮಿತಿಯಿಂದ ಎಣ್ಮೂರು ಗರಡಿಯಲ್ಲಿ ಸೇವಾ ತಂಬಿಲ

Puttur_Advt_NewsUnder_1
Puttur_Advt_NewsUnder_1

2-1 2-2ಪುತ್ತೂರು: ಎಣ್ಮೂರು ಕೋಟಿ ಚೆನ್ನಯ್ಯ ಗರಡಿಯಲ್ಲಿ ಅ.17 ರಂದು ಪಡುಮಲೆ ಜೀರ್ಣೋದ್ಧಾರ ಸಮಿತಿ ವತಿಯಿಂದ ಸಂಕ್ರಮಣ ವಿಶೇಷ ಪೂಜಾ ತಂಬಿಲ ನಡೆಯಿತು. ಪಡುಮಲೆಯಲ್ಲಿ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದ್ದು ಅಲ್ಲಿನ ಕೆಲವು ದೋಷ ನಿವಾರಣೆಗಾಗಿ ವಿಶೇಷ ತಂಬಿಲ ನಡೆಯಿತು. ಎಣ್ಮೂರು ಗರಡಿಯ ಅನುವಂಶಿಕ ಆಡಳಿತದಾರ ಕಟ್ಟೆಬೀಡು ರಾಮಕೃಷ್ಣ ಶೆಟ್ಟಿ ದಂಪತಿ ಉಪಸ್ಥಿತರಿದ್ದು ಪ್ರಸಾದ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಪಡುಮಲೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ, ಕಾರ್ಯದರ್ಶಿ ಶೇಖರ ನಾರಾವಿ, ಶ್ರೀಧರ ಪಟ್ಲ, ಚರಣ್ ಸದಸ್ಯರಾದ ರಮೇಶ್ ಬೆಳ್ತಂಗಡಿ, ಉದಯಕುಮಾರ ಭಟ್ ಪಡುಮಲೆ, ರತನ್ ಕುಮಾರ್ ಕರ್ನೂರು, ಯೋಗೀಶ್ ಕುಮಾರ್, ಮಂಗಳೂರು ಮತ್ತು ಉಡುಪಿಯಿಂದ ಸುಮಾರು ೮೦ ಭಕ್ತಾಧಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.