ನೆಲಮಂಗಲದಲ್ಲಿ ಲಾರಿ-ಬಸ್ ಡಿಕ್ಕಿ ಲಾರಿ ಚಾಲಕ ಹಿರೇಬಂಡಾಡಿಯ ತೀರ್ಥೇಶ್ ಸಾವು

Puttur_Advt_NewsUnder_1
Puttur_Advt_NewsUnder_1

13ಹಿರೇಬಂಡಾಡಿ: ಲಾರಿ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರೇಬಂಡಾಡಿ ಗ್ರಾಮದ ಖಂಡಿಗ ನಿವಾಸಿ ನಾಗಪ್ಪ ಗೌಡರ ಪುತ್ರ ತೀರ್ಥೇಶ್ (31ವ) ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ತೀರ್ಥೇಶ್ ಅವರು ವೃತ್ತಿಯಲ್ಲಿ ಲಾರಿ ಚಾಲಕರಾಗಿದ್ದು, ಮಂಗಳೂರಿನಿಂದ ಬೆಂಗಳೂರಿಗೆ ಈಚರ್ ಲಾರಿಯಲ್ಲಿ ತೆರಳುತ್ತಿದ್ದ ಸಂದರ್ಭ ನೆಲಮಂಗಲದ ಬೆಳ್ಳೂರು ಕ್ರಾಸ್ ಬಳಿ ಇವರ ಲಾರಿಗೆ ಬಸ್ಸೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿತ್ತು. ಈ ಸಂದರ್ಭ ಇವರಿದ್ದ ಲಾರಿ ಮಾರ್ಗದಿಂದ ಆಳವಾದ ಪ್ರದೇಶಕ್ಕೆ ಉರುಳಿ ಬಿದ್ದಿದ್ದು, ಚಾಲಕ ತೀರ್ಥೇಶ್ ಗಂಭೀರ ಗಾಯಗೊಂಡಿದ್ದರು. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಅ.10ರಂದು ಮೃತಪಟ್ಟಿದ್ದಾರೆ.
ಮೃತರು ತಂದೆ ನಾಗಪ್ಪ ಗೌಡ, ತಾಯಿ ಹೊನ್ನಮ್ಮ, ಸಹೋದರ ಹೊನ್ನಪ್ಪ, ಸಹೋದರಿ ಭವಾನಿಯವರನ್ನು ಅಗಲಿದ್ದಾರೆ. ಮೃತರ ಮನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೇಶವ ಗೌಡ ಬಜತ್ತೂರು, ತಾಲೂಕು ಪಂಚಾಯತ್ ಸದಸ್ಯರಾದ ಮುಕುಂದ ಬಜತ್ತೂರು, ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷ ಶೌಖತ್ ಅಲಿ, ಸದಸ್ಯರಾದ ನಿತಿನ್, ಸೋಮೇಶ್, ಹಿರೇಬಂಡಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಗೌಡ ಅನತ್ತಿಮಾರು, ಪ್ರಮುಖರಾದ ಹಮೀದ್ ಮುರ ಸೇರಿದಂತೆ ನೂರಾರು ಮಂದಿ ಆಗಮಿಸಿ, ಸಂತಾಪ ಸೂಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.