Breaking News

ಕುದ್ಮಾರಿನಲ್ಲಿ ರಕ್ತದಾನ ಶಿಬಿರ ರಕ್ತದಾನ ಮಹಾದಾನ -ಚೆಲುವಯ್ಯ

Puttur_Advt_NewsUnder_1
Puttur_Advt_NewsUnder_1

16-1 16-2ಪುತ್ತೂರು : ಯುವಕರು ರಕ್ತದಾನದ ಮಹತ್ವವನ್ನು ಅರ್ಥ ಮಾಡಿಕೊಂಡು ರಕ್ತದಾನ ಮಾಡಲು ಮುಂದಾಗಬೇಕು. ರಕ್ತದಾನ ಇನ್ನೊಬ್ಬರ ಪ್ರಾಣ ರಕ್ಷಣೆಗೆ ಸಹಕಾರಿ. ಈ ಹಿನ್ನೆಲೆಯಲ್ಲಿ ರಕ್ತದಾನ ಮಹಾದಾನವೆಂದು ಬೆಳ್ಳಾರೆ ಠಾಣಾ ಆರಕ್ಷಕ ಉಪ ನಿರೀಕ್ಷಕ ಎಂ.ವಿ. ಚೆಲುವಯ್ಯ ಹೇಳಿದರು. ಅವರು ಯುವ ಗೌಡ ಸೇವಾ ಸಂಘ ಸವಣೂರು ವಲಯ ಹಾಗೂ ಯೂತ್ ಫ್ರೆಂಡ್ಸ್ ಕುದ್ಮಾರು ವಾಟ್ಸಪ್ ಗ್ರೂಪ್ ಇದರ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು, ವೆನ್ಲಾಕ್ ಆಸ್ಪತ್ರೆ ಮಂಗಳೂರಿನ ಸಹಯೋಗದಲ್ಲಿ ಕುದ್ಮಾರು ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರವಿವಾರದಂದು ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರಕ್ತದಾನದ ಕುರಿತು ಮಾಹಿತಿ ನೀಡಿದ ರೋಟರಿ ಕ್ಯಾಂಪ್ರೋ ಬ್ಲಡ್ ಬ್ಯಾಂಕ್‌ನ ವೈದ್ಯಾಧಿಕಾರಿ ಡಾ| ರಾಮಚಂದ್ರ ಭಟ್, ರಕ್ತದಾನ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಸಾಮಾನ್ಯವಾಗಿ ಆರೋಗ್ಯವಂತನ ಶರೀರದಲ್ಲಿ 5ರಿಂದ 6 ಲೀಟರ್ ರಕ್ತವಿರುತ್ತದೆ. ಈ ರಕ್ತ 120 ದಿನಗಳಲ್ಲಿ ತನ್ನಿಂದ ತಾನೇ ತನ್ನ ಮಹತ್ವ ಕಳೆದುಕೊಳ್ಳುತ್ತದೆ. ರಕ್ತದಾನ ಮಾಡಿದಲ್ಲಿ ಪುನಃ ರಕ್ತದಾನಿಯ ಶರೀರದಲ್ಲಿ ಹೊಸ ರಕ್ತ ತಯಾರಾಗಿ ಹೊಸ ಚೈತನ್ಯ ತುಂಬುತ್ತದೆ ಎಂದರು.
ಬೆಳಂದೂರು ಗ್ರಾ.ಪಂ. ಅಧ್ಯಕ್ಷೆ ಉಮೇಶ್ವರಿ ಅಗಳಿ ಮಾತನಾಡಿ, ರಕ್ತದಾನ ಶಿಬಿರ ಆಯೋಜಿಸುವುದು ಉತ್ತಮ ಕಾರ್ಯ. ಇಂತಹ ಕಾರ್ಯ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
ಭಾರತದಲ್ಲಿ ರಕ್ತದ ಅಭಾವವಿದೆ- ನಿರಂಜನ್ ಗೌಡ: ಭಾರತದಲ್ಲಿ ಸುಮಾರು 5 ಕೋಟಿ ಲೀ. ಯುನಿಟ್ ರಕ್ತದ ಅವಶ್ಯಕತೆಯಿದ್ದು, 2.50 ಯುನಿಟ್ ಕೋಟಿ ರಕ್ತದ ಅಭಾವವಿದೆ ಎಂದು ಬೆಂಗಳೂರು ಸಿನಿವರ್ಸ್ ಟೆಕ್ನೋಲಾಜಿಸ್‌ನ ಮುಖ್ಯ ಇಂಜಿನಿಯರ್ ನಿರಂಜನ್ ಗೌಡ ಪಟ್ಟೆತ್ತಾನ ಹೇಳಿದರು. ರಕ್ತದಾನ ಶ್ರೇಷ್ಠದಾನವಾಗಿದ್ದು, ಈ ಕಾರ್ಯದಲ್ಲಿ ಎಲ್ಲರೂ ಭಾಗಿಗಳಾಗಬೇಕೆಂದು ಅವರು ಅಭಿಪ್ರಾಯಪಟ್ಟರು.
೫೩ನೇ ಬಾರಿ ರಕ್ತದಾನ ಮಾಡಿರುವ ಐಶ್ವರ್ಯ ಕನ್‌ಸ್ಟ್ರಕ್ಷನ್‌ನ ರಘುರಾಮ ಉಪ್ಪಂಗಳ, ಕುದ್ಮಾರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪಾಲತಾ ಪಿ. ಗೌಡ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಭರತ್ ನಡುಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಯುವ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಪ್ರವೀಣ್ ಕುಂಟ್ಯಾನ, ಅಧ್ಯಕ್ಷ ಪುರುಷೋತ್ತಮ ಗೌಡ ಮುಂಗ್ಲಿಮನೆ, ಕಾರ್ಯದರ್ಶಿ ರಾಧಾಕೃಷ್ಣ ನಂದಿಲ, ಸವಣೂರು ಸಿ.ಎ. ಬ್ಯಾಂಕ್ ನಿರ್ದೇಶಕ ತಾರನಾಥ ಕಾಯರ್ಗ, ಚಂದ್ರಶೇಖರ್ ಬರೆಪ್ಪಾಡಿ, ಶಾಂತಿಮೊಗರು ದೇವಸ್ಥಾನದ ಅನುವಂಶೀಯ ಮೊಕ್ತೇಸರ ಪ್ರವೀಣ್ ಕುಮಾರ್ ಕೆಡೆಂಜಿ, ಪರಮೇಶ್ವರ ಗೌಡ ಬನ್ನೂರು, ಬೆಳಂದೂರು ಪದವಿ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯೆ ಶುಭ ಆರ್. ನೋಂಡಾ, ಸವಣೂರು ಸಿಆರ್‌ಪಿ ವೆಂಕಟೇಶ್ ಅನಂತಾಡಿ, ಶಿಕ್ಷಕ ಕುಶಾಲಪ್ಪ ಬರಮೇಲು, ಶಿಕ್ಷಕಿ ಜಯಪ್ರಭಾ ಉಪಸ್ಥಿತರಿದ್ದರು.
ಸನ್ಮಾನ: ಕಬಡ್ಡಿ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ಒಲಿಂಪಿಕ್ ಅಸೊಶಿಯೇಷನ್ ವತಿಯಿಂದ ಪುರಸ್ಕೃತಗೊಂಡಿರುವ ಕುದ್ಮಾರಿನ ನವ್ಯಶ್ರೀಯವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ರಾಮಚಂದ್ರ ಬರೆಪ್ಪಾಡಿ ಸ್ವಾಗತಿಸಿ, ಯಶೋಧರ್ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು. ಮೇದಪ್ಪ ಕುವೆತ್ತೋಡಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.