ಧರ್ಮ ಜಾಗೃತಿ ಸಮಿತಿಯಿಂದ ಉಡುಪಿ ಮಠ ಉಳಿಸಿ ಜಾಥಾ-ರಾಜಾರಾಮ ಶೆಟ್ಟಿ ಕೋಲ್ಪೆ

Puttur_Advt_NewsUnder_1
Puttur_Advt_NewsUnder_1
  • ಅಹಿತಕರ ಘಟನೆಗೆ ಜಿಲ್ಲಾಡಳಿತ ಜವಾಬ್ದಾರಿ- ಪುತ್ತಿಲ
  • ಹಿಂದೂ ಸಮಾಜವನ್ನು ಬೇರ್ಪಡಿಸುವ ಹುನ್ನಾರ- ಹಸಂತಡ್ಕ
  • ಕೊಲೆ ಆರೋಪಿಯನ್ನು ಬಂಧಿಸದಿದ್ದರೆ ಪ್ರತಿಭಟನೆ- ಚಿನ್ಮಯ್ ರೈ

ಪುತ್ತೂರು: ಬುದ್ದಿ ಜೀವಿಗಳ ಮೂಲಕ ಉಡುಪಿ ಮಠಕ್ಕೆ ಮುತ್ತಿಗೆ ಹಾಕಿಸುವ ಸರಕಾರದ ಪ್ರಯತ್ನವನ್ನು ಧಮನಿಸುವ ನಿಟ್ಟಿನಲ್ಲಿ ಧರ್ಮ ಜಾಗೃತಿ ಸಮಿತಿಯಿಂದ ಉಡುಪಿ ಮಠ ಉಳಿಸಿ ಜಾಥಾ ಯೋಜನೆ ಕೈಗೊಳ್ಳಲಾಗುವುದು ಹಿಂದು ಧರ್ಮಜಾಗೃತಿ ಸಮಿತಿಯ ಜಿಲ್ಲಾ  ಪ್ರಧಾನ ಕಾರ‍್ಯದರ್ಶಿ ರಾಜಾರಾಮ ಶೆಟ್ಟಿ ಕೋಲ್ಪೆ ಗುತ್ತುರವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.  ಹಿಂದೂ ಸಮಾಜದ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದ್ದರೂ ಸರಕಾರ ಯಾವುದೇ ಉತ್ತರ ನೀಡುತ್ತಿಲ್ಲ. ಇದೊಂದು ಸರಕಾರ ಕೃಪಾಪೋಷಿತ ಶೋಷಣೆಯಾಗಿರುವುದು ಕಾಣುತ್ತಿದೆ ಎಂದ ಅವರು ಇತ್ತೀಚೆಗೆ ಹೊಸನಗರ ಮಠದ ಮೇಲೂ ಸರಕಾರ ಆಡಳಿತಾಧಿಕಾರಿ ನೇಮಕಕ್ಕೆ ಮುಂದಾಗಿದ್ದು,  ಈ ಕುರಿತು ಯಾವುದೇ ಹೇಳಿಕೆ ನೀಡುತ್ತಿಲ್ಲ ಎಂದರಲ್ಲದೆ ಧರ್ಮ ಜಾಗೃತಿಸಮಿತಿಯಿಂದ ಹಿಂದೂಗಳನ್ನು ಸೇರಿಸುವ ಯೋಜನೆ ಮಾಡಲಿದ್ದೇವೆ ಎಂದರು.

ಅಹಿತಕರ ಘಟನೆಗೆ ಜಿಲ್ಲಾಡಳಿತ ಜವಾಬ್ದಾರಿ:

ಅ.೨೩ರಂದು ಶ್ರೀ ಕೃಷ್ಣ ಮಠಕ್ಕೆ ಮುತ್ತಿಗೆ ಹಾಕುವ ಪ್ರಯತ್ನಗಳು ಸರಕಾರದ ಕುಮ್ಮಕ್ಕಿನಿಂದ ಮಾಡುವ ವ್ಯವಸ್ಥೆಯಾಗಿದೆ. ಮುತ್ತಿಗೆ ಹಾಕಿದರೆ ಅದರ ಮೇಲಾಗುವ ಯಾವುದೇ ಅಹಿತಕರ ಘಟನೆಗೆ ಜಿಲ್ಲಾಡಳಿತ ಜವಾಬ್ದಾರಿಯಾಗಲಿದೆ ಎಂದು ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಹೇಳಿದರಲ್ಲದೆ ಮುಂದೆ ಶ್ರೀ ಕೃಷ್ಣ ಮಠದ ಪರವಾಗಿ ನಡೆಯುವ ಎಲ್ಲಾ ಹೋರಾಟಗಳಿಗೆ ನಾವು ಬೆಂಬಲ ನೀಡಲಿದ್ದೇವೆ. ಪೇಜಾವರ ಶ್ರೀಗಳ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಕಲ್ಲಡ್ಕ ಡಾ. ಪ್ರಭಾಕರ ಭಟ್‌ರವರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಮಾತನಾಡಿದ್ದು ಕಂಡು ಬಂದರೆ ಅದರ ವಿರುದ್ಧ ಹೋರಾಟ ಮಾಡಲಿದ್ದೇವೆ ಎಂದರು.

ಹಿಂದುತ್ವದ ಹೆಸರಿನಲ್ಲಿ ಸರಕಾರದ ಪತನ: ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್‌ರವರು ರಾಮ ಮತು  ಶ್ರೀ ಕೃಷ್ಣ ಮಾಂಸ ಭಕ್ಷಣೆ ಮಾಡಿದ್ದಾರೆ ಎಂದು ಉದ್ದೇಶ ಪೂರ್ವಕವಾಗಿ ಹೇಳಿದ್ದಾರೆ. ಆದರೆ ಅವರ ಹೇಳಿಕೆ ಸಮಾಜದಲ್ಲಿ ಶಾಂತಿಯನ್ನು ಕದಡುವ ವ್ಯವಸ್ಥೆಯಾಗಿದ್ದು ಅದನ್ನು ಈ ಸಂದರ್ಭದಲ್ಲಿ ಹೇಳುವ ಅವಶ್ಯಕತೆ ಇರಲಿಲ್ಲ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರಲ್ಲದೆ ಮುಂದೆ ಹಿಂದುತ್ವದ ಹೆಸರಿನಲ್ಲೇ ಸರಕಾರ ಪತನವಾಗುವ ಸಾಧ್ಯತೆ ಇದೆ ಎಂದರು.

ಹಿಂದೂ ಸಮಾಜವನ್ನು ಬೇರ್ಪಡಿಸುವ ಹುನ್ನಾರ: ದಲಿತರನ್ನು ಹಿಂದೂ ಸಮಾಜದಿಂದ ಬೇರ್ಪಡಿಸುವ ವಾತಾವರಣವನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಮಟ್ಟುರವರು ಮಾಡುತ್ತಿದ್ದಾರೆ. ಹಿಂದೂ ಸಮಾಜವನ್ನು ಒಡೆಯುವ ತಂತ್ರಕ್ಕೆ ಹಿಂದೂಗಳು ಒಟ್ಟಾಗಿ ಉತ್ತರ ಕೊಡಲಿದ್ದಾರೆ ಎಂದು ಧರ್ಮ ಜಾಗೃತಿ ಸಮಿತಿಯ ತಾಲೂಕು ಸಂಚಾಲಕ ಮುರಳಿಕೃಷ್ಣ ಹಸಂತಡ್ಕ ಹೇಳಿದರು.

ಕೊಲೆ ಆರೋಪಿಯನ್ನು ಬಂಧಿಸದಿದ್ದರೆ ಪ್ರತಿಭಟನೆ: ಬೆಂಗಳೂರಿನ ಕಾಮರಾಜ್ ರಸ್ತೆಯಲ್ಲಿ ಆದಿತ್ಯವಾರ ನಡೆದ ಆರ್ ಎಸ್ ಎಸ್  ಮತ್ತು ಬಿಜೆಪಿ ಮುಖಂಡ ರುದ್ರೇಶ್‌ರವರ ಕೊಲೆಗೆ ಸರಕಾರದ ಪರೋಕ್ಷ ಬೆಂಬಲವಿದೆ. ಆರೋಪಿಗಳನ್ನು ೨೪ ಗಂಟೆಯೊಳಗೆ ಬಂಧಿಸದಿದ್ದಲ್ಲಿ ಅ.೧೮ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಧರ್ಮ ಜಾಗೃತಿ ಸಮಿತಿಯ ಸದಸ್ಯ ನ್ಯಾಯವಾದಿ ಚಿನ್ಮಯ್ ರೈ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಧರ್ಮ ಜಾಗೃತಿ ಸಮಿತಿಯ ಉಪಾಧ್ಯಕ್ಷ ರಾಜೇಶ್ ಬನ್ನೂರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.