ವೀರಮಂಗಲ: ಮುಅಲ್ಲಿಂ ಡೇ ಆಚರಣೆ, ಅಧ್ಯಯನ ಶಿಬಿರ ಆಹಾರವನ್ನು ಪೋಲು ಮಾಡಬೇಡಿ-ಸಿದ್ದಿಕ್ ಜಲಾಲಿ

Puttur_Advt_NewsUnder_1
Puttur_Advt_NewsUnder_1

14ಪುತ್ತೂರು: ಆಹಾರವು ಅಲ್ಲಾಹನು ನೀಡಿದ ಅನುಗ್ರಹವಾಗಿದ್ದು ಅದನ್ನು ಯಾವುದೇ ಕಾರಣಕ್ಕೂ ಪೋಲು ಮಾಡಬಾರದು, ಆಹಾರದ ಮಿತವ್ಯಯ ಬಳಕೆಯಿಂದ ಸಮೃದ್ದಿ ಇದೆ ಎಂದು ಕೂರ್ನಡ್ಕ ಮಸೀದಿಯ ಖತೀಬ್ ಅಬೂಬಕ್ಕರ್ ಸಿದ್ದಿಕ್ ಜಲಾಲಿ ಹೇಳಿದರು. ಅವರು ವೀರಮಂಗಲ ಕಮರುಲ್ ಇಸ್ಲಾಂ ಮದ್ರಸದಲ್ಲಿ ಅ.15ರಂದು ನಡೆದ ಮುಅಲ್ಲಿಂ ಡೇ ಹಾಗೂ ಅಧಯನ ಶಿಬಿರದಲ್ಲಿ ಮಾತನಾಡಿದರು. ಉದ್ಘಾಟಿಸಿ ಮಾತನಾಡಿದ ಸ್ಥಳೀಯ ಖತೀಬ್ ಹನೀಫ್ ದಾರಿಮಿ ಕುಂತೂರುರವರು ಮಕ್ಕಳಿಗೆ ಭೌತಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣವೂ ಅತೀ ಅಗತ್ಯ ಎಂದರು. ಕುಂಬ್ರ ಕೆಐಸಿ ಪ್ರೊಫೆಸರ್ ಅನೀಸ್ ಕೌಸರಿ ಮಾತನಾಡಿ ಪ್ರಸಕ್ತ ಕಾಲಘಟ್ಟದಲ್ಲಿ ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣದಿಂದ ಮಕ್ಕಳು ವಂಚಿತವಾಗಬಾರದು ಎಂದರು. ಜಮಾಅತ್ ಕಮಿಟಿ ಅಧ್ಯಕ್ಷ ಖಾಸಿಂ ಹಾಜಿ ಅಧ್ಯಕತೆ ವಹಿಸಿದ್ದರು. ವೇದಿಕೆಯಲ್ಲಿ ಜಮಾಅತ್ ಕಮಿಟಿ ಉಪಾಧ್ಯಕ್ಷ ಇಸ್ಮಾಯಿಲ್ ಹಾಜಿ ಉಪಸ್ಥಿತರಿದ್ದರು. ಮದ್ರಸ ಅಧ್ಯಾಪಕ ಅಬ್ದುಲ್ ರಹ್ಮಾನ್ ಮೌಲವಿ ಕುಂಬ್ರ ಸ್ವಾಗತಿಸಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.