ಕುಂಬ್ರ: ಉದ್ಘಾಟನೆಗೆ ಸಜ್ಜುಗೊಳ್ಳುತ್ತಿದೆ ಎಂ.ಎ ಆರ್ಕೇಡ್

Puttur_Advt_NewsUnder_1
Puttur_Advt_NewsUnder_1

kumbra

ಪುತ್ತೂರು: ದಿನದಿಂದ ದಿನಕ್ಕೆ ಅಭಿವೃದ್ದಿ ಹೊಂದುತ್ತಿರುವ ಕುಂಬ್ರದಲ್ಲಿ ಬಹು ನಿರೀಕ್ಷಿತ ವಾಣಿಜ್ಯ ಮಳಿಗೆ ಹಾಗೂ ವಸತಿ ಸಮುಚ್ಚಯಗಳನ್ನೊಳಗೊಂಡ ಎಂ.ಎ ಆರ್ಕೇಡ್’ ಉದ್ಘಾಟನೆಗೊಳ್ಳಲು ಸಜ್ಜುಗೊಳ್ಳುತ್ತಿದೆ. ನೆಲ ಅಂತಸ್ತು ಹಾಗೂ ಮೊದಲ ಮಹಡಿಯಲ್ಲಿ ವಾಣಿಜ್ಯ ಮಳಿಗೆಗಳಿಗೆ ಸುಸಜ್ಜಿತವಾದ ಕೋಣೆಗಳು ಲಭ್ಯವಿದ್ದು ಈಗಾಗಲೇ ಬಹುತೇಕ ಮಳಿಗೆಗಳನ್ನು ಬಾಡಿಗೆ ರೂಪದಲ್ಲಿ ನೀಡಲಾಗಿದ್ದು ಕೆಲವೇ ಕೆಲವು ಕೋಣೆಗಳು ಮಾತ್ರ ಲಭ್ಯವಿದೆ. ಎರಡನೇ ಅಂತಸ್ತಿನಲ್ಲಿ ವಸತಿ ಸಮುಚ್ಚಯದ ವ್ಯವಸ್ಥೆ ಕಲ್ಪಿಸಲಾಗಿದ್ದು ಕೆಲವೇ ಕೆಲವು ವಸತಿ ಮಾತ್ರ ಲಭ್ಯವಿದೆ.

ಅ.24ರಂದು ಉದ್ಘಾಟನೆ: ವಾಣಿಜ್ಯ ಮಳಿಗೆ ಹಾಗೂ ವಸತಿ ಸಮುಚ್ಚಯಗಳನ್ನೊಳಗೊಂಡ ’ಎಂ.ಎ ಆರ್ಕೇಡ್’ ಅ.24ರಂದು ಉದ್ಘಾಟನೆಗೊಳ್ಳಲಿದೆ. ಎಂದು ’ಎಂ.ಎ ಆರ್ಕೇಡ್’ ಮಾಲಕ ಹಾಜಿ. ಕೆ ಮಮ್ಮಾಲಿ ಬೆಳ್ಳಾರೆ ತಿಳಿಸಿದ್ದಾರೆ.

ವಾಣಿಜ್ಯ ಮಳಿಗೆಗೆ 20 ಕೋಣೆಗಳು-6 ವಸತಿ ಸಮುಚ್ಚಯಗಳು

ನೆಲ ಅಂತಸ್ತು ಹಾಗೂ ಮೊದಲ ಮಹಡಿಯಲ್ಲಿ ವಾಣಿಜ್ಯ ಮಳಿಗೆಗಳಿಗಾಗಿ ಒಟ್ಟು 20 ಸುಸಜ್ಜಿತ ಕೋಣೆಗಳಿವೆ. ಎರಡನೇ ಅಂತಸ್ತಿನಲ್ಲಿ ಸುಸಜ್ಜಿತ 6 ವಸತಿ ಸಮುಚ್ಚಯಗಳು ಇವೆ. ಇವುಗಳಲ್ಲಿ ಬಹುತೇಕ ವಾಣಿಜ್ಯ ಕೊಠಡಿಗಳು ಹಾಗೂ ವಸತಿ ಸಮುಚ್ಚಯಗಳು ಬಾಡಿಗೆ ಆಧಾರದಲ್ಲಿ ಆಸಕ್ತರು ಪಡೆದುಕೊಂಡಿದ್ದು ಕೆಲವು ಮಾತ್ರ ಬಾಕಿ ಉಳಿದಿದೆ ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.