ಕೊನೆಗೂ ಕೂಡಿಬಂತು ಮುಹೂರ್ತ; ನ.5 ಮಂಜುನಾಥನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

manjunathangara

ವರದಿ: ಉಮಾಪ್ರಸಾದ್ ರೈ ನಡುಬೈಲು

ಪುತ್ತೂರು: ಬಹುವರ್ಷಗಳ ಕನಸಾಗಿದ್ದ ಮಂಜುನಾಥನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ, ಸುಮಾರು 1.25 ಕೋಟಿ ರೂ.ವೆಚ್ಚದಲ್ಲಿ  ಸುಂದರವಾಗಿ ನಿರ್ಮಾಣಗೊಂಡಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರ ಜನರ ಸೇವೆಗೆ ಲಭ್ಯವಾಗಲಿದೆ. ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸವಣೂರು,ಪಾಲ್ತಾಡಿ, ಪುಣ್ಚಪ್ಪಾಡಿ ಗ್ರಾಮದ ಜನರಿಗೆ ಪ್ರಯೋಜನವಾಗಲಿರುವ ಈ ಕೇಂದ್ರವು ಹತ್ತಿರದ ಮುಕ್ಕೂರು, ಪೆರುವಾಜೆಯ ಜನರಿಗೂ ಸಹಕಾರಿಯಾಗಲಿದೆ.

ಮಂಜುನಾಥನಗರದ ಅಭಿವೃದ್ಧಿಗೆ ಸಹಕಾರಿ:

ಮಂಜುನಾಥನಗರದಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗಳು ಇದ್ದು, ಇಲ್ಲಿ  ಸುಂದರವಾದ ಭಜನಾ ಮಂದಿರ, ಸವಣೂರು ಸಹಕಾರಿ ಸಂಘದ ಶಾಖೆ ಕಾರ‍್ಯನಿರ್ವಹಿಸುತ್ತಿದೆ.  ಇಲ್ಲಿ ಇನ್ನೂ ಮುಂದೆ ತಾಂತ್ರಿಕ ಶಿಕ್ಷಣ  ಸಂಸ್ಥೆ ಮತ್ತು ಹಿಂದುಳಿದ ವಿದ್ಯಾರ್ಥಿಗಳ  ಹಾಸ್ಟೆಲ್ ನಿರ್ಮಾಣವಾಗಬೇಕೆಂಬ ಬೇಡಿಕೆ,ಇದ್ದು,ಇದಕ್ಕೆ ಈ ಊರಿನವರೇ ಆದ ಸಂಸದ ನಳಿನ್ ಕಟೀಲ್‌ರವರು ಪ್ರಯತ್ನ ಮಾಡಲಿದ್ಧಾರೆ ಎಂದು ಸ್ಥಳೀಯರು ಆಶಾವಾದ ವ್ಯಕ್ತಪಡಿಸಿದ್ದಾರೆ. ಮುಂದೆ ಮಂಜುನಾಥನಗರವು ಹಂತಹಂತವಾಗಿ ಅಭಿವೃದ್ಧಿಯನ್ನು ಕಾಣುವ ನಿರೀಕ್ಷೆ ನಾಗರಿಕರಲ್ಲಿದೆ.

ಸಮಾಲೋಚನಾ ಸಭೆ:

ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ-ನಳಿನ್ ಕುಮಾರ್- ಮಂಜುನಾಥನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರಗಿದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್‌ರವರು ನ.೫ ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆಯಾಗಲಿದೆ, ಆ ಮೂಲಕ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ದೊರೆಯಲಿದೆ. ಈ ಭಾಗದ ಜನರ ಬೇಡಿಕೆಯಾಗಿದ್ದ, ಆರೋಗ್ಯ ಕೇಂದ್ರವನ್ನು ನಿರ್ಮಿಸಲಾಗಿದೆ. ಇಲ್ಲಿಗೆ ಈಗ ವೈದ್ಯರ ಮತ್ತು ನರ್ಸ್‌ಗಳ ನೇಮಕಾತಿ ನಡೆದಿದೆ. ಮೂಲಭೂತ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಾರ್ವಜನಿಕರು ಇದಕ್ಕೆ ಪೂರ್ಣ ಸಹಕಾರವನ್ನು ನೀಡಬೇಕು ಎಂದು ಅವರು ಹೇಳಿದರು

ತಾಲೂಕು ವೈದ್ಯಾಧಿಕಾರಿ ಡಾ.ಆಶೋಕ್ ರೈ, ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಬಿ.ಕೆ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪ್ರಮೋದ್, ಪ್ರಾಥಮಿಕ ಆರೋಗ್ಯ ಕೇಂದ್ರದ ಆರಂಭಿಕ ಸಮಿತಿ ಅಧ್ಯಕ್ಷ ಬಿ.ಕೆ.ರಮೇಶ್, ಸದಸ್ಯ ಗಣೇಶ್ ಶೆಟ್ಟಿ ಕುಂಜಾಡಿ, ಸುಧಾಕರ್ ರೈ ದೇವಶ್ಯ, ಅನ್ನಪೂರ್ಣಪ್ರಸಾದ್ ರೈ, ತಾ.ಪಂ, ಮಾಜಿ ಉಪಾಧ್ಯಕ್ಷ ದಿನೇಶ್ ಮೆದು,  ಸವಣೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಕುಶಾಲಪ್ಪ ಗೌಡ ಪೆರುವಾಜೆ, ಸದಸ್ಯರುಗಳಾದ ಸತೀಶ್ ಅಂಗಡಿಮೂಲೆ, ಸತೀಶ್ ಬಲ್ಯಾಯ, ಮಾಜಿ ಸದಸ್ಯ ಬಾಳಪ್ಪ ಪೂಜಾರಿ,   ಸಾಮಾಜಿಕ ಮುಂದಾಳು ವಿಠಲ ಶೆಟ್ಟಿ ಬಂಬಿಲ, ತಾರೇಶ್, ಸಂದೀಪ್, ಮಲ್ಲಿಕಾರ್ಜುನ್ ಖರ್ಗೆ,ರುಕ್ಮಯ್ಯ, ಭಾಸ್ಕರ್ ದೇವಶ್ಯ, ಪ್ರವೀಣ್ ದೇವಶ್ಯ ಸಹಿತ ಅನೇಕ ಮಂದಿ ಭಾಗವಹಿಸಿದರು.

10 ಸಾವಿರ ಮಂದಿಗೆ ಪ್ರಯೋಜನ

ಮಂಜುನಾಥನಗರದಲ್ಲಿ ಆರಂಭವಾಗಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸುಮಾರು 10 ಸಾವಿರ ಮಂದಿಗೆ ಆರೋಗ್ಯ ಸೇವೆ ದೊರೆಯಲಿದೆ, ಇದರಿಂದ ಗ್ರಾಮೀಣ ಭಾಗದ ಜನರಿಗೆ ಪ್ರಯೋಜನವಾಗಲಿದೆ.

-ಇಂದಿರಾ ಬಿ.ಕೆ ಅಧ್ಯಕ್ಷರು ಸವಣೂರು ಗ್ರಾಮ ಪಂಚಾಯತ್

ಈ ಭಾಗದಲ್ಲಿ ಸುಮಾರು ೧೫೦ ಪರಿಶಿಷ್ಟ ಜಾತಿಯವರ ಮನೆಗಳಿದ್ದು, ಇದರಿಂದಾಗಿ ಇಲ್ಲಿನ ಆರೋಗ್ಯ ಕೇಂದ್ರವು ಜನರ ಅಗತ್ಯಕ್ಕೆ ಸ್ಪಂದಿಸಲಿದೆ. ಈಗಾಗಲೇ ೩.೭೫ ಲಕ್ಷ ರೂಪಾಯಿಯ ವೈದ್ಯಕೀಯ ಪರಿಕರಗಳು ಮಂಜೂರಾಗಿದೆ.

-ಬಿ.ಕೆ.ರಮೇಶ್, ಅಧ್ಯಕ್ಷರು

 ಆರಂಭಿಕ ಸಮಿತಿ ಪ್ರಾಥಮಿಕ ಆರೋಗ್ಯ ಕೇಂದ್ರ ಪಾಲ್ತಾಡಿ

ಸಂಸದ ನಳಿನ್ ಕುಮಾರ್ ಕಟೀಲ್‌ರವರ ಪ್ರಯತ್ನದ ಫಲವಾಗಿ ಇಲ್ಲಿ ಆರೋಗ್ಯ ಕೇಂದ್ರ ನಿರ್ಮಾಣಗೊಂಡಿದ್ದು, ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆಯಬೇಕು.

-ಗಣೇಶ್ ಶೆಟ್ಟಿ ಕುಂಜಾಡಿ

ಸದಸ್ಯರು ಆರಂಭಿಕ ಸಮಿತಿ ಪ್ರಾಥಮಿಕ ಆರೋಗ್ಯ ಕೇಂದ್ರ ಪಾಲ್ತಾಡಿ

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.