ಭಾವುಕ ನೆಲೆಯಿಂದ ಕವನ ಸೃಷ್ಟಿಯಾಗಬೇಕು: ಆದಿತ್ಯ ಶರ್ಮ

Puttur_Advt_NewsUnder_1
Puttur_Advt_NewsUnder_1

news-photo-aadithya-sharma

ಪುತ್ತೂರು : ಕವನಗಳು ಜೀವನ ಅನುಭವವನ್ನು ಕಡಿಮೆ ಶಬ್ದಗಳಲ್ಲಿ ಹೇಳುತ್ತವೆ. ಆದ್ದರಿಂದ ಕವನಗಳನ್ನು ಓದುವಾಗ ಅಲ್ಲಿ ಕವಿ ಬಳಸಿದ ಪದಗಳನ್ನು ಕಾಲ, ದೇಶ, ಭೌಗೋಳಿಕತೆ, ಜೀವನ ಕ್ರಮಗಳ ಜೊತೆಗೆ ಅರ್ಥೈಸಲು ಪ್ರಯತ್ನಿಸಿದಾಗ ಮಾತ್ರ ಅದರ ಸೊಗಸನ್ನು ಆಸ್ವಾದಿಸಲು ಸಾಧ್ಯ. ಕವನಗಳು ಸೂಚ್ಯವಾಗಿದ್ದಷ್ಟು ಪ್ರಸ್ತುತಗೊಳ್ಳುತ್ತವೆ ಎಂದು ವಿವೇಕಾನಂದ ಕಾಲೇಜಿನ ಆಂಗ್ಲ ವಿಭಾಗದ ಉಪನ್ಯಾಸಕ ಆದಿತ್ಯ ಶರ್ಮ ಅಭಿಪ್ರಾಯಪಟ್ಟರು.
ಅವರು ವಿವೇಕಾನಂದ ಕಾಲೇಜಿನ ತೃತೀಯ ಬಿ.ಎ. ಕನ್ನಡ ಐಚ್ಚಿಕ ವಿದ್ಯಾರ್ಥಿಗಳು ಆಯೋಜಿಸಿದ ಸಾಹಿತ್ಯಮಂಟಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕವಿಗೆ ಬುದ್ಧಿಯ ಕಣ್ಣಿಗಿಂತ ಹೃದಯದ ಕಣ್ಣಿರಬೇಕು. ನಮ್ಮ ಸಮಾಜ, ಜೀವನಕ್ರಮ, ಪ್ರಕೃತಿಯನ್ನು ಭಾವುಕ ನೆಲೆಯಿಂದ ಗ್ರಹಿಸಿ ಕವನ ಬರೆದಾಗ ಓದುವ ಸಹೃದಯರ ಭಾವಪ್ರಪಂಚ ಅರಳುತ್ತದೆ. ಒಟ್ಟಿನಲ್ಲಿ ಕವಿಯಾದವನು ಓದುಗನ ಮನಸ್ಸನ್ನು ಅರಳಿಸಬೇಕು ಹೊರತು ಕೆರಳಿಸಬಾರದು
ಈ ಸಂದರ್ಭದಲ್ಲಿ ಕನ್ನಡ ಸಂಘದ ಸಂಯೋಜಕ ಡಾ. ಮನಮೋಹನ.ಯಂ. ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಕವಿಗಳಾದ ಪ್ರಕೃತಿ, ಜೀವಿತಾ, ಶ್ಯಾಮಲಾ, ಜಯಶ್ರೀ ಇಡ್ಕಿದು, ಆಝಾದ್ ಕಂಡಿಗ, ಭಾರವಿ ಪಕ್ಕಳ, ಅಶ್ವಿನಿ ಎಂ ಕವನ ವಾಚನ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.