ಉಪ್ಪಿನಂಗಡಿ: ಮಣ್ಣು ಪರೀಕ್ಷೆ ಮತ್ತು ಜಲ ಮರುಪೂರಣ ಬಗ್ಗೆ ಮಾಹಿತಿ, ಪ್ರಾತ್ಯಕ್ಷಿಕೆ ಕಾರ್ಯಾಗಾರ

Puttur_Advt_NewsUnder_1
Puttur_Advt_NewsUnder_1

18uppworkshop_2ಪ್ರಕೃತಿ ಉಳಿದಾಗ ಮಾತ್ರ ನಮ್ಮ ಉಳಿವು: ಎಸ್. ಮುಖರ್ಥಿ ಹಾಳ್
ಉಪ್ಪಿನಂಗಡಿ: ಭೂಮಿ ತಾಯಿ ಆರೋಗ್ಯವಂತಳಾಗಿದ್ದರೆ ಮಾತ್ರ ನಮಗೆ ಉತ್ತಮ ಆಹಾರ ದೊರೆಯಲು ಸಾಧ್ಯ. ಆಗ ಮಾತ್ರ ನಾವು ಸೇರಿದಂತೆ ಜೀವ ಸಂಕುಲಗಳು ಆರೋಗ್ಯದಿಂದಿರಲು ಸಾಧ್ಯ ಎಂದು ಇಪ್ಕೋ ಲಿಮಿಟೆಡ್‌ನ ಪ್ರಾಂತ್ಯ ವ್ಯವಸ್ಥಾಪಕ ಎಸ್. ಮುಖರ್ಥಿ ಹಾಳ್ ತಿಳಿಸಿದರು.
ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ, ಇಪ್ಕೋ ಲಿಮಿಟೆಡ್, ಬಜತ್ತೂರು ಗ್ರಾಮ ಪಂಚಾಯತ್, ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘ ಹಾಗೂ ಬಜತ್ತೂರು ಗ್ರಾಮ ವಿಕಾಸದ ಸಂಯುಕ್ತಾಶ್ರಯದಲ್ಲಿ ಅ.18ರಂದು ಹೊಸಗದ್ದೆಯ ಕಣಿಯದ ವೇದಾವತಿ ರಾಮಣ್ಣ ಗೌಡ ಅವರ ತೋಟದಲ್ಲಿ ನಡೆದ ಮಣ್ಣು ಪರೀಕ್ಷೆ ಮತ್ತು ಜಲ ಮರುಪೂರಣ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರಕೃತಿ ನಾಶ, ರಸಾಯನಿಕ ಗೊಬ್ಬರಗಳ ಬಳಕೆ ಸೇರಿದಂತೆ ಹತ್ತು ಹಲವು ಕಾರಣಗಳಿಂದಾಗಿ ಇಂದು ನಮ್ಮ ನೆಲ ಜಲ ಮಲೀನಗೊಳ್ಳುತ್ತಿದ್ದು, ಹವಾಮಾನ ವೈಪರೀತ್ಯಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಜಾಗತಿಕ ತಾಪಮಾನವೂ ಏರಿಕೆಯಾಗಿದೆ. ಭೂಮಿಯಲ್ಲಿರುವ ಅಂತರ್ಜಲ ಬತ್ತಿ ಹೋಗುವ ಹಂತಕ್ಕೆ ತಲುಪಿದೆ. ಆದ್ದರಿಂದ ಜಲ ಮರುಪೂರಣ, ಪ್ರಕೃತಿ ರಕ್ಷಣೆ ಸೇರಿದಂತೆ ಪ್ರಕೃತಿಯ ಉಳಿವಿಗಾಗಿ ಅಗತ್ಯ ಕ್ರಮ ಕೈಗೊಂಡಾಗ ಮಾತ್ರ ನಮ್ಮ ಉಳಿವು ಸಾಧ್ಯ ಎಂದರು.
ಬಜತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಪಂರ್ದಾಜೆ ಮಾತನಾಡಿ, ಜಲಮರುಪೂರಣ, ಇಂಗುಗುಂಡಿಗಳ ಮೂಲಕ ನೀರಿಂಗಿಸುವಿಕೆಗೆ ಪ್ರತಿಯೋರ್ವರು ಆದ್ಯತೆ ನೀಡವುದು ಇಂದಿನ ಅಗತ್ಯವಾಗಿದ್ದು, ಇದಕ್ಕೆ ಉದ್ಯೋಗ ಖಾತ್ರಿ ಯೋಜನೆಯ ಸವಲತ್ತುಗಳು ಬಳಸಿಕೊಳ್ಳಲು ಮುಂದಾಗಬೇಕು. ಪ್ರಕೃತಿಯ ರಕ್ಷಣೆಯಾದಾಗ ಮಾತ್ರ ಮುಂದಿನ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದರು.
ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜಗದೀಶ್ ರಾವ್ ಮಾತನಾಡಿ, ಜಲ ಸಂರಕ್ಷಣೆಯಲ್ಲಿ ಎಲ್ಲರೂ ಭಾಗಿಗಳಾದಾಗ ಭೂಮಿಯ ಅಂತರ್ಜಲ ಹೆಚ್ಚಳವಾಗಲು ಸಾಧ್ಯವಿದೆ. ಆದ್ದರಿಂದ ನೆಲ, ಜಲ ರಕ್ಷಣೆಯೊಂದಿಗೆ ನೀರಿಂಗಿಸುವ ಪ್ರಯತ್ನ ಮನೆ ಮನೆಗಳಲ್ಲಿ ಆಂದೋಲನದ ರೀತಿ ಸಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಯಶವಂತ ಜಿ. ಮಾತನಾಡಿ, ಪ್ರಕೃತಿಯೊಂದಿಗೆ ಚೆಲ್ಲಾಟವಾಡುವುದು ಸರಿಯಲ್ಲ. ಉತ್ತರ ಕರ್ನಾಟಕದ ಕಡೆ ಬರುತ್ತಿದ್ದ ಬರಗಾಲದ ದಿನಗಳು ಕರಾವಳಿಯತ್ತಲೂ ಮುಖ ಮಾಡುತ್ತಿವೆ. ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವುದು ಸೇರಿದಂತೆ ಪ್ರಕೃತಿ ರಕ್ಷಣೆಗೆ ಬಗ್ಗೆ ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಆಪತ್ತು ಖಂಡಿತ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ಪಾಟೀಲ್ ರವೀಂದ್ರ ಸಂಗಣಗೌಡ, ಮಣ್ಣು ವಿಜ್ಞಾನಿ ಡಾ. ಪುನೀತ ಬಿ.ಸಿ., ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್, ನರೇಗ ಯೋಜನೆಯ ಸಹಾಯಕ ತಾಂತ್ರಿಕ ಎಂಜಿನಿಯರ್ ವಿನೋದ್ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘುವೀರ್ ರಾವ್, ಕೃಷಿಕೆ ವೇದಾವತಿ ರಾಮಣ್ಣ ಗೌಡ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೃಷಿಕರಾದ ಗಣೇಶ್ ಕಿಂಡೋವು, ಗಂಗಾಧರ ಪಿ.ಎನ್., ಶಂಕರನಾರಾಯಣ ಭಟ್ ಬೊಳ್ಳಾವು, ರಾಜೇಶ್ ಪಿಜಕ್ಕಳ, ಮಧುಷಾ, ಧರ್ನಪ್ಪ ನಾಯ್ಕ, ಜಯಗೋವಿಂದ ಶರ್ಮ, ಮಾಧವ ಪೂಜಾರಿ ಓರುಂಬೋಡಿ, ಸತೀಶ್ ಕಣಿಯ, ಉಮೇಶ್ ನಾಯಕ್ ಪೊರೋಳಿ, ದೇವಪ್ಪ, ಪದ್ಮಯ್ಯ ಪೂಜಾರಿ ಕೋಡಿಜಾಲ್, ಉಮೇಶ್ ಕೋಡಿಜಾಲ್, ಸುಧಾಕರ ಕಣಿಯ ಮತ್ತಿತರರು ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಟ್ಟಿಬೈಲ್ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ಯು.ಜಿ.ರಾಧಾ ಸ್ವಾಗತಿಸಿದರು. ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಪ್ರವೀಣ್ ಆಳ್ವ ವಂದಿಸಿದರು. ಸುಧಾಕರ ಶೆಟ್ಟಿ ಗಾಂಧಿಪಾರ್ಕ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.