ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡುರವರಿಗೆ ಪಿತೃವಿಯೋಗ

Puttur_Advt_NewsUnder_1
Puttur_Advt_NewsUnder_1

whatsapp-image-2016-10-18-at-5-58-52-pm

ಪುತ್ತೂರು: ಮುಂಡೂರು ಗ್ರಾಮದ ಕೇದಗೆದಡಿ ನಿವಾಸಿ ಬಾಬು ನಾಯ್ಕ (76 ವ.)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಅ.18ರಂದು ಸ್ವ ಗೃಹದಲ್ಲಿ ನಿಧನ ಹೊಂದಿದ್ದಾರೆ.
ಮೃತರು ಪುತ್ತೂರು ನಗರ ಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಪುತ್ರರಾದ ಮೋಹನ ನಾಯ್ಕ, ಮುಂಡೂರು ಗ್ರಾಮ ಪಂಚಾಯತ್ ಸಿಬ್ಬಂದಿ ದೇವಪ್ಪ ನಾಯ್ಕ, ಸಂಜೀವ ನಾಯ್ಕ, ಜಿನ್ನಪ್ಪ ನಾಯ್ಕ, ಸಹೋದರರಾದ ಐತ್ತಪ್ಪ ನಾಯ್ಕ, ಚೋಮ ನಾಯ್ಕರವರನ್ನು ಅಗಲಿದ್ದಾರೆ.
ಮೃತರ ಮನೆಗೆ ನಗರ ಸಭಾ ಉಪಾಧ್ಯಕ್ಷ ವಿಶ್ವನಾಥ ಗೌಡ, ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಪುತ್ತೂರು ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ನಗರ ಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ ಭಂಡಾರಿ, ಸದಸ್ಯರಾದ ಹೆಚ್. ಮಹಮ್ಮದಾಲಿ, ಬಾಲಚಂದ್ರ, ಹರೀಶ್ ನಾಕ್, ರಾಜೇಶ್ ಬನ್ನೂರು, ಶಕ್ತಿ ಸಿನ್ಹಾ, ಜೆಸಿಂತಾ ಮಸ್ಕರೇನಸ್, ಮುಖೇಶ್ ಕೆಮ್ಮಿಂಜೆ, ಮಾಜಿ ಪುರಸಭಾ ಸದಸ್ಯ ಲ್ಯಾನ್ಸಿ ಮಸ್ಕರೇನಸ್, ಪೌರಾಯುಕ್ತೆ ರೂಪಾ ಶೆಟ್ಟಿ ಮತ್ತು ಸಿಬ್ಬಂದಿಗಳು, ಮುಂಡೂರು ಗ್ರಾ.ಪಂ. ಅಧ್ಯಕ್ಷ ಎಸ್.ಡಿ.ವಸಂತ, ಸದಸ್ಯರಾದ ಬಾಲಕೃಷ್ಣ ಪೂಜಾರಿ, ಶೀನಪ್ಪ ನಾಯ್ಕ ಉದಯಗಿರಿ, ಬಿ.ಟಿ. ಮಹೇಶ್ಚಂದ್ರ ಸಾಲಿಯಾನ್, ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಯಾಕೂಬ್ ಮುಲಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ, ಶಿವನಾಥ ರೈ ಮೇಗಿನಗುತ್ತು, ಅರುಣ್ ಕುಮಾರ್ ಪುತ್ತಿಲ, ನಗರ ಸಭೆ ಇಂಜಿನಿಯರ್ ರಾಮಚಂದ್ರ, ಫೆರಾಕ್ಸ್ ಡಿ.ಸೋಜ, ವಾಸುದೇವ ಸಾಲಿಯಾನ್, ನಿವೃತ್ತ ಅರಣ್ಯಾಧಿಕಾರಿ ಕೃಷ್ಣ ನಾಯ್ಕ, ಸುಬ್ಬಣ್ಣ ನಾಯ್ಕ ಕೃಷ್ಣನಗರ, ನರಿಮೊಗರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಮಹಾಲಿಂಗ ನಾಯ್ಕ, ಮಾಜಿ ಅಧ್ಯಕ್ಷರಾದ ಅಶ್ವಿನಿ ಬಿ.ಕೆ., ಬಿ.ಕೆ. ಸುಂದರ ನಾಯ್ಕ, ಮಾಜಿ ಕಾರ್ಯದರ್ಶಿ ಯೋಗೀಶ್ ಮತ್ತು ಸದಸ್ಯರು ಹಾಗೂ ಮುಂಡೂರು ಗ್ರಾ.ಪಂ. ಸಿಬ್ಬಂದಿಗಳು ಭೇಟಿ ನೀಡಿ ಸಂತಾಪ ಸೂಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.