ನೆಲ್ಯಾಡಿ: ಗೋ ಗ್ರೀನ್ ಡೇ, ಜೇಸಿರೆಟ್ ಸಂಭ್ರಮ

Puttur_Advt_NewsUnder_1
Puttur_Advt_NewsUnder_1

nelyadiನೆಲ್ಯಾಡಿ: ಜೇಸಿಐ ನೆಲ್ಯಾಡಿ ಇದರ ಜೇಸಿ ಸಪ್ತಾಹದ ಅಂಗವಾಗಿ ‘ಗೋ ಗ್ರೀನ್ ಡೇ’ಹಾಗೂ ಜೇಸಿರೆಟ್ ಸಂಭ್ರಮ ಅ.೧೭ರಂದು ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.

ಗೋ ಗ್ರೀನ್ ಡೇ ಅಂಗವಾಗಿ ಜೇಸಿಐ ನೆಲ್ಯಾಡಿಯ ೩೩ನೇ ವರ್ಷದ ಸವಿನೆನಪಿಗಾಗಿ ೩೩ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಹೊಸಮಜಲು ಸರಕಾರಿ ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಆನಂದ ಗೌಡರವರು ರಾಷ್ಟ್ರಧ್ವಜ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ನೆಲ್ಯಾಡಿ ಜೇಸಿಐ ಅಧ್ಯಕ್ಷ ಮೋಹನ ವಿ.,ಅಧ್ಯಕ್ಷತೆ ವಹಿಸಿದ್ದರು.

ಪುತ್ತೂರು ಸಿಡಿಪಿಒ ಶಾಂತಿ ಪಿ.ಹೆಗಡೆ, ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲೆ ಮುಖ್ಯ ಶಿಕ್ಷಕ ಆನಂದ ಅಜಿಲ, ನೆಲ್ಯಾಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಜಯೇಶ್, ನೆಲ್ಯಾಡಿ ಮಾತಾ ಲ್ಯಾಬ್ ಮಾಲಕ ಜೋಸ್ ಕೆ.ಜೆ., ನೆಲ್ಯಾಡಿ ಗಾಂಧಿಮೈದಾನ ಶ್ರೀ ಕೃಷ್ಣ ಜನ್ಮಾಷ್ಟಮಿ ಗೆಳೆಯರ ಬಳಗದ ಅಧ್ಯಕ್ಷ ರತ್ನಾಕರ ಶೆಟ್ಟಿ, ನೆಲ್ಯಾಡಿ ಗ್ರಾ.ಪಂ.ಸದಸ್ಯ ಅಬ್ದುಲ್ ಹಮೀದ್ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು. ಜೇಸಿಐ ಕಾರ‍್ಯದರ್ಶಿ ಮಹಾವೀರ ಜೈನ್, ಜೇಸಿರೆಟ್ ಅಧ್ಯಕ್ಷೆ ಲೀಲಾ ಮೋಹನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೇಸಿ ಸಪ್ತಾಹದ ಯೋಜನಾಧಿಕಾರಿ ಜಯಾನಂದ ಬಂಟ್ರಿಯಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸದಾನಂದ ಕುಂದರ್ ನೆಲ್ಯಾಡಿ, ಯತೀಶ್ ಯತಿ ಸ್ಟುಡಿಯೋ, ಶಿವಪ್ರಕಾಶ್, ಸುಬ್ರಹ್ಮಣ್ಯ ಜಿ., ಲಕ್ಷ್ಮಣ್, ದಯಾನಂದ ಆದರ್ಶ, ಪ್ರೇಮಾರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಮೇರಿ ಜಾನ್ ಜೇಸಿವಾಣಿ ವಾಚಿಸಿದರು. ಮೋಹನ್ ವಿ.,ಸ್ವಾಗತಿಸಿ ಕಾರ‍್ಯಕ್ರಮ ನಿರೂಪಿಸಿದರು. ಡಾ.ಸದಾನಂದ ಕುಂದರ್ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.