ದುಬೈಯಲ್ಲಿ ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಪ್ರಚಾರ ಸಂಗಮ-ಸನ್ಮಾನ

Puttur_Advt_NewsUnder_1
Puttur_Advt_NewsUnder_1

dubaiಪುತ್ತೂರು: ದುಬೈ ನಗರದ ದೇರಾ ಲ್ಯಾಂಡ್ ಮಾರ್ಕ್ ಹೋಟೆಲ್ ಸಭಾಂಗಣದಲ್ಲಿ ಪುತ್ತೂರು ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಪ್ರಚಾರ ಸಂಗಮ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ದಾರುಲ್ ಹುದಾ ಚೆಮ್ಮಾಡ್ ಇದರ ವೈಸ್ ಚಾನ್ಸಲರ್ ಡಾ. ಬಹಾವುದ್ದೀನ್ ನದ್ವಿ ಉಸ್ತಾದ್‌ರವರು ಮಾತನಾಡಿ, ೧೯೮೬ರಲ್ಲಿ ಆರಂಭಗೊಂಡ ದಾರುಲ್ ಹುದಾ ಇಸ್ಲಾಮಿಕ್ ಯುನಿವರ್ಸಿಟಿ ಚೆಮ್ಮಾಡ್ ಎಂಬ ಬೃಹತ್ ಸಮುಚ್ಛಯದಲ್ಲಿ ೧೮೦೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಐದು ಭಾಷೆಗಳಲ್ಲಿ ಮಾತನಾಡುವ ಸಾಮರ್ಥ್ಯದೊಂದಿಗೆ ಅಲ್ಲಿಂದ ವಿದ್ಯಾರ್ಜನೆಗೈದು ಹುದವಿ ಬಿರುದು ಪಡೆದುಕೊಂಡು ಭಾರತ ಹಾಗೂ ಗಲ್ಫ್ ರಾಷ್ಟ್ರಗಳು ಸೇರಿದಂತೆ ಅಮೇರಿಕಾ, ಲಂಡನ್ ದೇಶಗಳ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸುತ್ತಿದ್ದು, ಇದು ಆ ಸಂಸ್ಥೆಗೆ ಸಲ್ಲುವ ಅಭಿಮಾನವಾಗಿದೆ ಎಂದು ಹೇಳಿದರು.

ನೂರುಲ್ ಹುದಾ ಪ್ರಾಂಶುಪಾಲ ಅಡ್ವೊಕೇಟ್ ಹನೀಫ್ ಹುದವಿ ಮಾತನಾಡಿ, ಕೇರಳ ಹಾಗೂ ಕರ್ನಾಟಕದ ಜನಸಂಖ್ಯೆಯನ್ನು ತುಲನೆ ಮಾಡಿದರೆ ಕರ್ನಾಟಕದಲ್ಲಿ ಜನಸಂಖ್ಯೆ ಯಾ ಬಲ ಜಾಸ್ತಿ ಇದ್ದರೂ ಧಾರ್ಮಿಕ ಲೌಕಿಕ ಸಮನ್ವಯ ವಿದ್ಯಾಭ್ಯಾಸ ನೀಡಿ ಬಿರುದು ಕೊಡುವ ಯುನಿವರ್ಸಿಟಿಗಳು ಆರಂಭಗೊಳ್ಳದಿರುವುದು ನಮ್ಮ ವಿಪರ್ಯಾಸ ಎಂದು ವಿಷಾದ ವ್ಯಕ್ತಪಡಿಸಿದರು.

ನೂರುಲ್ ಹುದಾ ಎಂಬ ವಿದ್ಯಾಸಂಸ್ಥೆ ಮಾಡನ್ನೂರುನಲ್ಲಿ ತಲೆ ಎತ್ತಿ ನಿಲ್ಲಬೇಕೆಂಬ ಚಿಂತನೆಯೂ ಆ ಜಮಾಅತಿನ ಒಂದಿಬ್ಬರ ಮನಸ್ಸಿನಲ್ಲಿ ಮೂಡಿದಾಗ ದಾರುಲ್ ಹುದಾ ಚೆಮ್ಮಾಡ್ ಸಂಸ್ಥೆಗೆ ಸಂಬಂಧಿಸಿ ವ್ಯಕ್ತಿಗಳನ್ನು ಸಂಪರ್ಕಿಸಿ ನೂರುಲ್ ಹುದಾ ಎಂಬ ಸಂಸ್ಥೆಗೆ ಚಾಲನೆ ನೀಡಿದರು. ಇದು ಕರ್ನಾಟಕ ಜನತೆಯ ಭಾಗ್ಯ ಅಂತ ನಾವು ತಿಳಿದುಕೊಳ್ಳಬೇಕು, ಕರ್ನಾಟಕದ ಮುಸ್ಲಿಂ ಸಮುದಾಯಕ್ಕೆ ಸೇರಿದ ಜನರ ಚಿತ್ತ ಹುದವಿ ಬಿರುದಿನತ್ತ ಮುಖ ಮಾಡಿರುವುದು ಹೆಮ್ಮೆಯ ವಿಚಾರ ಎಂದರು.

ನೂರುಲ್ ಹುದಾ ಪ್ರಚಾರ ಸಮಿತಿಯಿಂದ ಸನ್ಮಾನ: ತಾಯ್ನಾಡಿನಿಂದ ಆಗಮಿಸಿದ್ದ ಅತಿಥಿಗಳಾದ ಸಯ್ಯದ್ ಅಲಿ ತಂಙಳ್ ಕುಂಬೋಳ್, ದಾರುಲ್ ಹುದಾ ವೈಸ್ ಚಾನ್ಸಲರ್ ಡಾ. ಬಹಾವುದ್ದೀನ್ ನದ್ವಿ, ನೂರುಲ್ ಹುದಾ ಪ್ರಾಂಶುಪಾಲ ಅಡ್ವೊಕೇಟ್ ಹನೀಫ್ ಹುದವಿ, ಸಂಸ್ಥೆಯ ಉಪಾಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಕೋಶಾಧಿಕಾರಿ ಹಾಜಿ ಇಸ್ಮಾಯಿಲ್ ಕಾವು ಮೊದಲಾದವರಿಗೆ ನೂರುಲ್ ಹುದಾ ಪ್ರಚಾರ ಸಮಿತಿ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿಲಾಯಿತು. ಅಲ್ಲದೆ ಯುಎಇ ಕಾರ್ಯಾಚರಿಸುತ್ತಿರುವ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಗಣ್ಯ ಅತಿಥಿಗಳಿಗೆ ಶಾಲು ಹೊದಿಸಿ ಗೌರವಿಸಿದರು. ಈ ವೇಳೆ ಲೇಖನ ಸ್ಪರ್ಧೆಯ ವಿಜೇತರಿಗೆ ಪ್ರಚಾರ ಸಮಿತಿ ಸ್ಮರಣಿಕೆ ನೀಡಿ ಅಭಿನಂದಿಸಿತು. ಹಾಗೂ ನೂರುಲ್ ಹುದಾ ವಿದ್ಯಾ ಸಂಸ್ಥೆಯ ೨೦೧೭ರ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.

ಪ್ರಚಾರ ಸಂಗಮದಲ್ಲಿ ರಾಜ್ಯ ಎಸ್.ಕೆ.ಎಸ್.ಎಸ್.ಎಫ್ ದುಬೈ ಅಧ್ಯಕ್ಷ ಅಸ್ಕರ್ ಅಲಿ ತಂಙಳ್ ಕೋಲ್ಪೆ, ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರ್ ಇದರ ಕೋಶಾಧಿಕಾರಿ ಹಾಜಿ ಇಸ್ಮಾಯಿಲ್ ಕಾವು, ಆರ್.ಎಂ. ಗ್ರೂಪ್ ಎಂ.ಡಿ. ಹಾಜಿ ಅಬ್ದುಲ್ ಖಾದರ್ ಅಂಚಿನಡ್ಕ, ಕೆಐಸಿ ಯುಎಇ ಅಧ್ಯಕ್ಷ ಮೋಯ್ದೀನ್ ಕುಟ್ಟಿ ಹಾಜಿ ದಿಬ್ಬ, ದಾರುನ್ನೂರ್ ಯುಎಇ ಅಧ್ಯಕ್ಷ ಸಲೀಂ ಅಲ್ತಾಫ್ ಫರಂಗಿಪೇಟೆ, ಶಂಶುಲ್ ಉಲಮಾ ಅರೇಬಿಕ್ ಕಾಲೇಜ್ ತೋಡಾರ್ ಯುಎಇ ಅಧ್ಯಕ್ಷ ಅಬ್ದುಲ್ ಖಾದರ್ ಬೈತಡ್ಕ, ದಾನತ್ ಗ್ರೂಪ್ ಎಂ.ಡಿ. ಹಾರಿಸ್ ದಾನಾತ್, ಎಸ್.ಕೆ.ಎಸ್.ಎಸ್.ಎಫ್. ದುಬೈ ಅಧ್ಯಕ್ಷ ಶರಫುದ್ದೀನ್ ಹುದವಿ, ಸುನ್ನಿ ಸೆಂಟರ್ ದುಬೈ ಪ್ರಧಾನ ಕಾರ್ಯದರ್ಶಿ ಶೌಕತ್ ಅಲಿ ಹುದವಿ, ಕೆಐಸಿ ದುಬೈ ಅಧ್ಯಕ್ಷ ಅಶ್ರಫ್ ಖಾನ್ ಮಾಂತೂರ್, ಪೈರೆಕ್ಸ್ ಗ್ರೂಪ್ ಮೆನೇಜರ್ ಅಶ್ರಫ್ ಯಾಕೂತ್, ಕರ್ನಾಟಕ ರಾಜ್ಯ ಎಸ್.ಕೆ.ಎಸ್.ಎಸ್.ಎಫ್ ಅಬುಧಾಬಿ ಅಧ್ಯಕ್ಷ ಹನೀಫ್ ಅರಿಯಮೂಲೆ, ಅಲ್ ಫರ್ದಾನ್ ಅಲ್ ಐನ್ ಮೆನೇಜರ್ ಸುಲೈಮಾನ್ ಬೈತಡ್ಕ, ಹಾಜಿ ಅಬ್ದುಲ್ ರಝಕ್ ಮಣಿಲ ಉಪಸ್ಥಿತರಿದ್ದರು.

ನೂರು ಹುದಾ ಪ್ರಚಾರ ಸಮಿತಿ ಚೇರ್ಮನ್ ಕಾವು ಶರೀಫ್ ಬಿ.ಕೆ.ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರ್ ಇದರ ಗೌರವಾಧ್ಯಕ್ಷ ಸಯ್ಯದ್ ಅಲಿ ತಂಙಳ್ ಕುಂಬೋಳ್‌ರವರು ದುಃಅ ಆಶೀರ್ವಚನ ನೀಡಿದರು. ಫೈಝಲ್ ರಹ್ಮಾನಿ ಬಾಯಾರ್, ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರ್ ಇದರ ಉಪಾಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಪ್ರಾಸ್ತಾವಿಕವಾಗಿ ಮಾತನಾಡಿ ಮಾಡನ್ನೂರು ನೂರುಲ್ ಹುದಾ ವಿದ್ಯಾ ಕೇಂದ್ರದ ಯಶಸ್ವಿಗೆ ಶುಭ ಹಾರೈಸಿದರು.

ಈ ವೇಳೆ ನೂರುಲ್ ಹುದಾ ವಿದ್ಯಾ ಸಂಸ್ಥೆಗೆ ಯುಎಇಯಲ್ಲಿ ಕಾರ್ಯಾಚರಿಸಲಿರುವ ಸಮಿತಿಯ ಪಟ್ಟಿಯನ್ನು ಮುಸ್ತಫಾ ಗೂನಡ್ಕ ವಾಚಿಸಿದರು. ಸಯ್ಯದ್ ಅಲಿ ತಂಙಳ್ ಕುಂಬೋಳ್ ಘೋಷಣೆ ಮಾಡಿ ಅಂಗೀಕರಿಸಿದರು. ಕರ್ನಾಟಕ ರಾಜ್ಯ ಎಸ್.ಕೆ.ಎಸ್.ಎಸ್.ಎಫ್ ದುಬೈ ಕಾರ್ಯದರ್ಶಿ ಸುಲೈಮಾನ್ ಮೌಲವಿ ಕಲ್ಲೇಗ ಸ್ವಾಗತಿಸಿ, ನೌಫಲ್ ಉಪ್ಪಳರವರು ಕಿರಾಅತ್ ಪಠಿಸಿದರು. ಅಶ್ರಫ್ ಪರ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.