ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜೇಸಿ ಸಪ್ತಾಹದ ಅಂಗವಾಗಿ ಜನಪ್ರತಿನಿಧಿಗಳೊಂದಿಗೆ ಸಂವಾದ

Puttur_Advt_NewsUnder_1
Puttur_Advt_NewsUnder_1

nellyadyಸಿಬ್ಬಂದಿಗಳ ಕೊರತೆ ನೀಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ; ಭರವಸೆ

ನೆಲ್ಯಾಡಿ: ಜೇಸಿಐ, ಜೇಸಿರೆಟ್ ಹಾಗೂ ಜೂನಿಯರ್ ಜೇಸಿವಿಂಗ್, ನೆಲ್ಯಾಡಿ ಇದರ ಆಶ್ರಯದಲ್ಲಿ ನಡೆಯುತ್ತಿರುವ 33ನೇ ವರ್ಷದ ೞಜೇಸಿ ಸಪ್ತಾಹ-2016’ ಇದರ ಸಪ್ತ ಸಂಭ್ರಮದ ೬ನೇ ದಿನವನ್ನು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ದಿನವನ್ನಾಗಿ ಆಚರಿಸಲಾಯಿತು.

ಒಳಿತು ಮಾಡು ಮನುಷ್ಯ, ಈ ಬದುಕು ಮೂರೇ ದಿವಸ’ ಎಂಬ ಧ್ಯೇಯದೊಂದಿಗೆ ನಡೆದ ಕಾರ‍್ಯಕ್ರಮದಲ್ಲಿ ಆರೋಗ್ಯ ಇಲಾಖೆಯಿಂದ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ಮತ್ತು ಜನಪ್ರತಿನಿಧಿಗಳೊಂದಿಗೆ ಸಂವಾದ ಕಾರ‍್ಯಕ್ರಮ ನಡೆಯಿತು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೃಷ್ಣಾನಂದರವರು ಆರೋಗ್ಯ ಇಲಾಖೆಯಿಂದ ಜನರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದ ಅವರು, ವೈದ್ಯಾಧಿಕಾರಿಗಳಿಗೆ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ 3 ದಿನಗಳ ನಿಯೋಜನೆ ತೆರವು, ಸುಸಜ್ಜಿತ ಪ್ರಯೋಗಾಲಯವಿದ್ದರೂ ಖಾಯಂ ಲ್ಯಾಬ್ ಟೆಕ್ನಿಷಿಯನ್ ಇಲ್ಲದೇ ಇರುವುದು, ಆಂಬುಲೆನ್ಸ್ ಸೇವೆ ತುರ್ತಾಗಿ ಆಗಬೇಕಾಗಿದೆ ಎಂದು ಹೇಳಿದರು.

ಸರಕಾರದ ಮಟ್ಟದಲ್ಲಿ ಪ್ರಯತ್ನ: ಸಂವಾದ ಕಾರ‍್ಯಕ್ರಮದಲ್ಲಿ ಮಾತನಾಡಿದ ನೆಲ್ಯಾಡಿ ಕ್ಷೇತ್ರದ ತಾ.ಪಂ.ಸದಸ್ಯೆ ಉಷಾ ಅಂಚನ್‌ರವರು, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಸಿಬ್ಬಂದಿಗಳ ಕೊರತೆ ಬಗ್ಗೆ ಸಚಿವರು ಹಾಗೂ ಅಧಿಕಾರಿಗಳ ಮಟ್ಟದಲ್ಲಿ ಪ್ರಯತ್ನ ನಡೆಸುತ್ತೇನೆ. ಮುಖ್ಯವಾಗಿ ಇಲ್ಲಿನ ವೈದ್ಯಾಧಿಕಾರಿಗಳ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ನಿಯೋಜನೆ ರದ್ದುಗೊಳಿಸಿ ವಾರದ ಎಲ್ಲಾ ದಿನವೂ ಅವರು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಕರ್ತವ್ಯ ನಿರ್ವಹಿಸುವಂತಾಗಬೇಕು. ಖಾಯಂ ಲ್ಯಾಬ್ ಟೆಕ್ನಿಷಿಯನ್ ನೇಮಕ, ಆಂಬುಲೆನ್ಸ್ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಹೇಳಿದರು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಾ.ಪಂ.ಅನುದಾನದಿಂದ ನೀರಿನ ಟ್ಯಾಂಕ್, ಟೈಲ್ಸ್ ಅಳವಡಿಸಲಾಗಿದೆ. ಈ ಬಾರಿಯೂ ಆಸ್ಪತ್ರೆಗೆ ಸುಣ್ಣ ಬಣ್ಣ ಹಚ್ಚುವ ಸಂಬಂಧ ೧ ಲಕ್ಷ ರೂ., ಅನುದಾನ ದೊರೆತಿದೆ. ಆವರಣಗೋಡೆಗಾಗಿ ೫ ಲಕ್ಷ ರೂ.ಅನುದಾನಕ್ಕೆ ಜಿಲ್ಲಾ ಪಂಚಾಯತ್‌ಗೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಕೆಡಿಪಿ ಸಭೆಯಲ್ಲಿ ಪ್ರಸ್ತಾಪ: ಗೋಳಿತ್ತೊಟ್ಟು ತಾ.ಪಂ.ಕ್ಷೇತ್ರದ ಸದಸ್ಯೆ ತೇಜಸ್ವಿನಿ ಶೇಖರ ಗೌಡ ಕಟ್ಟಪುಣಿ ಮಾತನಾಡಿ, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆ, ವೈದ್ಯರ ನಿಯೋಜನೆ ಕುರಿತಂತೆ ’ಸುದ್ದಿಬಿಡುಗಡೆ’ಪತ್ರಿಕೆಯಲ್ಲಿ ಬಂದ ವರದಿ ಗಮನಿಸಿzನೆ. ಈ ಬಗ್ಗೆ ಡೈರಿಯಲ್ಲಿ ನೋಟ್ ಮಾಡಿಕೊಂಡಿದ್ದು ಮುಂದಿನ ತಾಲೂಕು ಪಂಚಾಯತ್ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ವೈದ್ಯರ ನಿಯೋಜನೆ ರದ್ದು, ಹೆಚ್ಚಿನ ಸಿಬ್ಬಂದಿಗಳ ನೇಮಕಕ್ಕೆ ಒತ್ತಾಯಿಸುತ್ತೇನೆ ಎಂದು ಹೇಳಿದರು.

ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಮಾತನಾಡಿ, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಸಜ್ಜಿತ ಪ್ರಯೋಗಾಲಯ ಸೇರಿದಂತೆ ಎಲ್ಲಾ ಸೌಲಭ್ಯಗಳೂ ಇವೆ. ಆದರೆ ಸಿಬ್ಬಂದಿಗಳ ಕೊರತೆ ಇದ್ದು ವೈದ್ಯರಿಗೂ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಜವಾಬ್ದಾರಿ ನೀಡಲಾಗಿದೆ. ಇದರಿಂದ ಅವರಿಗೆ ಎರಡೂ ಕಡೆ ಕರ್ತವ್ಯ ನಿರ್ವಹಿಸಲು ಕಷ್ಟ ಸಾಧ್ಯ. ವೈದ್ಯರ ನಿಯೋಜನೆ ರದ್ದು, ಲ್ಯಾಬ್ ಟೆಕ್ನಿಷಿಯನ್ ನೇಮಕಗೊಳಿಸುವ ಸಂಬಂಧ ತುರ್ತಾಗಿ ಕ್ರಮ ಕೈಗೊಳ್ಳಬೇಕಾಗಿದೆ ಎಂದರು. ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಎಂ.ಕೆ.ಇಬ್ರಾಹಿಂ ಮಾತನಾಡಿ, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶೇ.೭೫ರಷ್ಟು ಸಿಬ್ಬಂದಿಗಳ ಕೊರತೆ ಇದೆ. ಶೇ.೫೦ರಷ್ಟಾದರೂ ಇಲ್ಲಿಗೆ ಸಿಬ್ಬಂದಿಗಳ ನೇಮಕ ಆಗಬೇಕು ಎಂದರು. ಸರ್ಕಾರದ ಕೆಲ ನೀತಿಗಳು, ಗೊಂದಲಗಳಿಂದಾಗಿ ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ನೀಡಲು ತೊಂದರೆಯಾಗುತ್ತಿದೆ. ಗ್ರಾಮದ ಜನರ ಅವಶ್ಯಕತೆಗಳಿಗೆ ಪೂರಕವಾಗಿ ಪಂಚಾಯತ್ ಕೆಲಸ ಮಾಡುತ್ತಿದೆ. ನೆಲ್ಯಾಡಿ-ಕೌಕ್ರಾಡಿ ಅವಳಿ ನಗರಗಳಾಗಿವೆ. ಘನತ್ಯಾಜ್ಯ ಘಟಕ ಸೇರಿದಂತೆ ಕೆಲವೊಂದು ಯೋಜನೆಗಳನ್ನು ಜಂಟಿಯಾಗಿ ಕೈಗೊಂಡಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧ್ಯವಿದೆ. ಆದರೆ ಇದಕ್ಕೆ ಸ್ಪಂದನೆ ಸಿಗುತ್ತಿಲ್ಲ ಎಂದರು.  ಜೇಸಿಐ ಅಧ್ಯಕ್ಷ ಮೋಹನ ವಿ. ಅಧ್ಯಕ್ಷತೆ ವಹಿಸಿದ್ದರು. ನೆಲ್ಯಾಡಿ ಸಂತಜಾರ್ಜ್ ಪ್ರೌಢಶಾಲೆ ಮುಖ್ಯಶಿಕ್ಷಕ ರವೀಂದ್ರ ಟಿ. ಸಂವಾದ ನಡೆಸಿಕೊಟ್ಟರು. ಮೋಹನ ವಿ. ಸ್ವಾಗತಿಸಿ, ಜೇಸಿಐ ಕಾರ‍್ಯದರ್ಶಿ ಮಹಾವೀರ ಜೈನ್ ವಂದಿಸಿದರು. ಶಿವಪ್ರಕಾಶ್ ಜೇಸಿವಾಣಿ ವಾಚಿಸಿದರು. ಜೇಸಿಐ ಪೂರ್ವಾಧ್ಯಕ್ಷ ಸುಬ್ರಹ್ಮಣ್ಯ ಜಿ.,ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಅಬ್ದುಲ್ ರಹಿಮಾನ್, ಲಕ್ಷ್ಮಣ್ ಜಿ., ಸುಪ್ರೀತಾ ರವಿಚಂದ್ರ, ಮೇರಿಜಾನ್, ದಯಾನಂದ ಆದರ್ಶರವರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ನೆಲ್ಯಾಡಿ ಗ್ರಾ.ಪಂ.ಸದಸ್ಯರುಗಳಾದ ಅಬ್ದುಲ್ ಹಮೀದ್, ತೀರ್ಥೇಶ್ವರ ಉರ್ಮಾನು, ಅಬ್ರಹಾಂ ಕೆ.ಪಿ., ಕೌಕ್ರಾಡಿ ಗ್ರಾ.ಪಂ.ಸದಸ್ಯ ಲೋಕೇಶ್ ಬಾಣಜಾಲು, ಅಂಗನವಾಡಿ ಮೇಲ್ವಿಚಾರಕಿ ಉಮಾವತಿ, ಜೇಸಿಐ ಪದಾಧಿಕಾರಿಗಳಾದ ರವಿಚಂದ್ರ ಹೊಸವಕ್ಲು, ಹೇಮಾ ಉಪಸ್ಥಿತರಿದ್ದರು.

ಮೇಲ್ಸೇತುವೆ ಗೊಂದಲ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ವೇಳೆ ನೆಲ್ಯಾಡಿಯಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದೆಯೇ ಎಂಬ ವಿಚಾರವೂ ಸಭೆಯಲ್ಲಿ ಪ್ರಸ್ತಾಪಗೊಂಡಿತು. ಆದರೆ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಇಂಜಿನಿಯರ್ ಜೊತೆ ಮಾತುಕತೆ ನಡೆಸಿ ಗೊಂದಲ ನಿವಾರಿಸಿಕೊಳ್ಳಲು ನಿರ್ಧರಿಸಲಾಯಿತು. ನೆಲ್ಯಾಡಿ-ಬಲ್ಯ ಜಿ.ಪಂ.ರಸ್ತೆ ಮರು ಡಾಮರೀಕರಣ, ನೆಲ್ಯಾಡಿ ಬಸ್ ನಿಲ್ದಾಣದ ದುರಸ್ತಿ ವಿಚಾರವೂ ಸಭೆಯಲ್ಲಿ ಪ್ರಸ್ತಾಪಗೊಂಡಿತು.

ಪ್ರತಿಧ್ವನಿಸಿದ ‘ಸುದ್ದಿಬಿಡುಗಡೆ’ ವರದಿ

ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 23ಸಿಬ್ಬಂದಿಗಳ ಪೈಕಿ 7 ಜನ ಸಿಬ್ಬಂದಿಗಳು ಮಾತ್ರ ಇರುವ ಬಗ್ಗೆ ಅ.10ರ ಸುದ್ದಿಬಿಡುಗಡೆ ಪತ್ರಿಕೆಯ ‘ಸಮಸ್ಯೆ ನಿಮ್ಮದು, ಕಾಳಜಿ ನಮ್ಮದು ಜನರ ಸಮಸ್ಯೆಗಳು, ಬೇಡಿಕೆಗಳು ಮತ್ತು ಪರಿಹಾರದ’ ಅಂಕಣದಲ್ಲಿ ಪ್ರಕಟಗೊಂಡ ವರದಿ ಸಂವಾದ ಕಾರ‍್ಯಕ್ರಮದಲ್ಲಿ ಪ್ರತಿಧ್ವನಿಸಿತು. ಕಾರ‍್ಯಕ್ರಮ ಆರಂಭಕ್ಕೆ ಮೊದಲು ಆಗಮಿಸಿದ್ದ ಜನಪ್ರತಿನಿಧಿಗಳಿಗೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕೃಷ್ಣಾನಂದರವರು ಆಸ್ಪತ್ರೆಯ ಸಿಬ್ಬಂದಿಗಳ ಕೊರತೆ ಕುರಿತಂತೆ ವರದಿ ಪ್ರಕಟಗೊಂಡ ’ಸುದ್ದಿಬಿಡುಗಡೆ’ಪತ್ರಿಕೆಯನ್ನು ಓದಲು ನೀಡಿದ್ದರು. ಅಲ್ಲದೇ ಆಸ್ಪತ್ರೆಯಲ್ಲಿನ ಸಿಬ್ಬಂದಿಗಳ ಕೊರತೆ ಬಗ್ಗೆ ವರದಿ ಪ್ರಕಟಿಸಿರುವ ‘ಸುದ್ದಿಬಿಡುಗಡೆ’ಗೆ ಅಭಿನಂದನೆ ಸಲ್ಲಿಸುವುದಾಗಿಯೂ ಹೇಳಿದರು. ತಾ.ಪಂ.ಸದಸ್ಯೆಯರಾದ ಉಷಾ ಅಂಚನ್, ತೇಜಸ್ವಿನಿ ಕಟ್ಟಪುಣಿ, ಗ್ರಾ.ಪಂ.ಅಧ್ಯಕ್ಷರುಗಳಾದ ಜಯಾನಂದ ಬಂಟ್ರಿಯಾಲ್, ಇಬ್ರಾಹಿಂ ಎಂ.ಕೆ., ಸಂಪನ್ಮೂಲ ವ್ಯಕ್ತಿ ರವೀಂದ್ರ ಟಿ.ಯವರು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಸಿಬ್ಬಂದಿಗಳ ಕೊರತೆ ಕುರಿತಂತೆ ಸುದ್ದಿಬಿಡುಗಡೆ ಪತ್ರಿಕೆಯಲ್ಲಿ ಬಂದಿರುವ ವರದಿ ಉಲ್ಲೇಖಿಸಿ ಮೆಚ್ಚುಗೆ ಸೂಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.