ಕೋಟಿ ಚೆನ್ನಯರು ಯಾವುದೇ ಜಾತಿ-ಧರ್ಮಕ್ಕೆ ಸೀಮಿತವಾದ ದೇವರಲ್ಲ  ಭಯ ಮಿಶ್ರಿತ ನಂಬಿಕೆಯಿಂದ ಜನ್ಮಸ್ಥಳದಲ್ಲಿ ಗರಡಿ ಆಗಿಲ್ಲ : ಹರಿಕೃಷ್ಣ ಬಂಟ್ವಾಳ್

Puttur_Advt_NewsUnder_1
Puttur_Advt_NewsUnder_1

15ಪುತ್ತೂರು :ತುಳುನಾಡಿನ ಐತಿಹಾಸಿಕ ಕಾರಣಿಕ ಪುರುಷರಾದ ಕೋಟಿ ಚೆನ್ನಯರು ಯಾವುದೇ ಜಾತಿ-ಧರ್ಮಕ್ಕೆ ಸೀಮಿತವಾದ ದೇವರಲ್ಲ. ಪ್ರತೀ ಧರ್ಮದಲ್ಲಿಯೂ ಕೋಟಿ ಚೆನ್ನಯರ ಆರಾಧಕರಿದ್ದಾರೆ. ತುಳುನಾಡಿನ ಎಲ್ಲೆಡೆ ಕೋಟಿ ಚೆನ್ನಯರನ್ನು ಗರಡಿಗಳ ಮೂಲಕ ಆರಾಧಿಸಲಾಗುತ್ತಿದೆ. ಆದರೆ ಭಯ ಮಿಶ್ರಿತ ನಂಬಿಕೆಯಿಂದಾಗಿ ಕೋಟಿ ಚೆನ್ನಯರು ಹುಟ್ಟಿದ ಸ್ಥಳದಲ್ಲಿ ಈ ತನಕ ಗರಡಿಯಾಗಿಲ್ಲ. ಜನ್ಮ ಕ್ಷೇತ್ರದ ಉದ್ಧಾರವೂ ಆಗಿಲ್ಲ. ಆದರೆ ಇದೀಗ ಕೋಟಿ ಚೆನ್ನಯರ ಜನ್ಮಸ್ಥಳದ ಅಭಿವೃದ್ಧಿಗೆ ಮತ್ತು ಮೂಲ ಗರಡಿ ರಚನೆಗೆ ಪೂರಕ ವಾತಾವರಣ ಸೃಷ್ಠಿಯಾಗುವುದರೊಂದಿಗೆ ಕಾಲ ಕೂಡಿ ಬಂದಿದೆ ಎಂದು ಬಿಲ್ಲವ ಮಹಾಮಂಡಲದ ಮುಖಂಡ ಹರಿಕೃಷ್ಣ ಬಂಟ್ವಾಳ್ ಹೇಳಿದರು.

ಪಡುಮಲೆಯಲ್ಲಿ ಕೋಟಿ ಚೆನ್ನಯರ ಜನ್ಮಸ್ಥಳವಾದ ಪಡುಮಲೆ ಅರಮನೆಯ ಅಭಿವೃದ್ಧಿ ,ಗರಡಿ ರಚನೆ ಹಾಗೂ ಒಟ್ಟು ಕ್ಷೇತ್ರದ ಅಭಿವೃದ್ಧಿಯ ನಿಟ್ಟಿನಲ್ಲಿ ಆರಂಭಿಕವಾಗಿ ಕೋಟಿ ಚೆನ್ನಯರು ಆರಾಧಿಸಿಕೊಂಡು ಬಂದಿದ್ದ ನಾಗಬ್ರಹ್ಮ ಸಾನಿಧ್ಯದ ಜೀರ್ಣೋದ್ಧಾರ ಕಾರ್ಯ ನಡೆಯಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಡಿ.17 ಮತ್ತು 18ರಂದು ನಡೆಯಲಿರುವ ಪ್ರಾಯಶ್ಚಿತ ಪರಿಹಾರ ಕಾರ್ಯಕ್ರಮಗಳ ಕುರಿತು ಪೂರ್ವಭಾವಿಯಾಗಿ ಪಡುಮಲೆಯ ಬಲ್ಲಾಳರ ಚಾವಡಿಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ದೇಶ ವಿದೇಶಗಳಲ್ಲಿಯೂ ಕೋಟಿ ಚೆನ್ನಯರ ಬಹಳಷ್ಟು ಮಂದಿ ಆರಾಧಕರಿದ್ದಾರೆ. ಪಡುಮಲೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯಾದಲ್ಲಿ ಅದೊಂದು ಐತಿಹಾಸಿಕ ಚರಿತ್ರೆಯಾಗಲಿದೆ. ತಿರುಮಲ, ಶಬರಿಮಲೆಯಂತೆ ಪಡುಮಲೆಯೂ ಹೆಸರುವಾಸಿ ಕ್ಷೇತ್ರವಾಗಲಿದೆ. ಇದೊಂದು ಸರ್ವ ಧರ್ಮೀಯರ ಕ್ಷೇತ್ರವಾಗಲಿದ್ದು, ಇದಕ್ಕೆ ಶಕ್ತಿ ತುಂಬುವ ಕೆಲಸವನ್ನು ನಾವೆಲ್ಲರೂ ಜಾತಿ-ಧರ್ಮ ಮರೆತು ಇದು ನಮ್ಮ ಕಾರ್ಯಕ್ರಮ ಎಂಬ ನೆಲೆಯಲ್ಲಿ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಕ್ಷೇತ್ರದ ಅಭಿವೃದ್ಧಿಯಲ್ಲಿ ರಾಜಕೀಯವಿಲ್ಲ: ಕೋಟಿ ಚೆನ್ನಯರ ಜನ್ಮಸ್ಥಳವಾದ ಪಡುಮಲೆ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿ ನಡೆಸಲಾದ ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಂತೆ ಹಲವಾರು ಕುರುಹುಗಳನ್ನು ಕಂಡು ಹಿಡಿದು ಅಭಿವೃದ್ಧಿಗೆ ಮುಂದಾಗಿzವೆ. ಕೋಟಿ ಚೆನ್ನಯರ ವಿಚಾರದಲ್ಲಿ ಜಾತಿ ಧರ್ಮ ಮತಬೇಧವಿಲ್ಲ. ರಾಜಕೀಯವೂ ಇಲ್ಲ ಎಂದು ವಿಟ್ಲದ ಮಾಜಿ ಶಾಸಕ ರುಕ್ಮಯ ಪೂಜಾರಿ ಹೇಳಿದರು. ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಂತೆ ಕೋಟಿ ಚೆನ್ನಯರು ಆರಾಧಿಸಿಕೊಂಡು ಬಂದಿದ್ದ ಪಡುಮಲೆ ಕ್ಷೇತ್ರದ ಕಾರಣಿಕ ಸಾನಿಧ್ಯವೂ ಆಗಿರುವ ನಾಗಬ್ರಹ್ಮ ಸಾನಿಧ್ಯದ ಜೀರ್ಣೋದ್ಧಾರ ಕಾರ್ಯ ಮೊದಲು ಆಗಬೇಕಿದೆ. ನಾಗಬ್ರಹ್ಮ ಸಾನಿಧ್ಯದ ಜೀರ್ಣೋದ್ಧಾರಕ್ಕೆ ಮುನ್ನ ನಾಗಬ್ರಹ್ಮನ ಕೈಯಲ್ಲಿರುವ ಬುದ್ಧಿವಂತನಿಗೆ ಮೋಕ್ಷ ಮಾಡಬೇಕಾಗಿದೆ. ಈ ಪ್ರಾಯಶ್ಚಿತ ಕಾರ್ಯಕ್ರಮಗಳನ್ನು ನಡೆಸದ ಹೊರತು ಪಡುಮಲೆ ಅಭಿವೃದ್ಧಿ ವಿಚಾರದಲ್ಲಿನ ಗೊಂದಲ ಬಗೆಹರಿಯುವುದಿಲ್ಲ ಎಂದ ಅವರು ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಪ್ರಾಯಶ್ಚಿತ ಪರಿಹಾರೋಪಾದಿ ಕಾರ್ಯಕ್ರಮಗಳು ಡಿ.17 ಮತ್ತು 18ರಂದು ನಡೆಯಲಿದ್ದು, ಊರಿಗೆ ತಟ್ಟಿರುವ ದೋಷ ನಿವಾರಣೆಯ ನಿಟ್ಟಿನಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮದ ಪೂರ್ತಿ ಜವಾಬ್ದಾರಿಯನ್ನು ಊರವರೇ ವಹಿಸಿಕೊಳ್ಳಬೆಕೆಂದು ಮನವಿ ಮಾಡಿದರು.
ಬಳ್ಳಾಲರ ಸೋನ ನೇಮ ಚಾವಡಿಯಲ್ಲಿ ನಿವೃತ್ತ ಶಿಕ್ಷಕ ವಿಷ್ಣು ಭಟ್‌ರವರು ದೀಪ ಬೆಳಗಿಸಿ, ಪ್ರಾರ್ಥಿಸುವ ಮೂಲಕ ಪೂರ್ವಭಾವಿ ಸಭೆಗೆ ಚಾಲನೆ ನೀಡಿದರು.
ವಿವಿಧ ಸಮಿತಿ ರಚನೆ: ಪ್ರಾಯಶ್ಚಿತ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇರುವುದರಿಂದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಮುಖ್ಯ ಸಂಚಾಲಕರಾಗಿ ಮನೋಜ್ ರೈ ಪೇರಾಲುರವರನ್ನು ಆಯ್ಕೆ ಮಾಡಲಾಯಿತು.
ಸ್ಥಳದಾನದ ಘೋಷಣೆ: ಪೂರ್ವಭಾವಿ ಸಭೆ ಮುಗಿಯುವ ಹಂತಲ್ಲಿದ್ದಾಗ ಆಗಮಿಸಿದ ನಾಗಬ್ರಹ್ಮ ಸಾನಿಧ್ಯವಿರುವ ಜಾಗದ ಪಾಲುದಾರರಾದ ಮೇಘನಾಥ ರೈ ಮತ್ತು ಅವರ ಸಹೋದರನ ಪುತ್ರ, ನಾಗಬ್ರಹ್ಮ ಸಾನಿಧ್ಯವಿರುವ ಸ್ಥಳವನ್ನು ಟ್ರಸ್ಟ್ ಹೆಸರಿಗೆ ಬರೆದುಕೊಡುವುದಾಗಿ ಘೋಷಿಸಿದರು. ಅಲ್ಲದೆ ಕ್ಷೇತ್ರದ ಅಭಿವೃದ್ಧಿಗೆ ತಮ್ಮಿಂದಾಗುವ ಸಹಕಾರ ನೀಡುವುದಾಗಿ ತಿಳಿಸಿದರು.
ಯೋಗೀಶ್ ಕುಮಾರ್ ಬೆಳ್ತಂಗಡಿ, ಬಾಲಚಂದ್ರ ರೈ ಬೆಳ್ಳಿಪ್ಪಾಡಿ, ರತ್ನಾಕರ ಸುವರ್ಣ, ಶೇಖರ್ ನಾರಾವಿ, ಶ್ರೀಧರ್ ಪಟ್ಲ, ವಿಷ್ಣು ಭಟ್, ರೋಹಿನಾಥ್ ಪಾರೆ ಬಂಟ್ವಾಳ, ಸಂಜೀವ ಪೂಜಾರಿ ಕೂರೇಲು, ರಾಮಣ್ಣ ಗೌಡ , ಮುಕುಂದ ಎಂ.ಎಸ್, ಚರಣ್ ಬೆಳ್ತಂಗಡಿ, ಡೀಕಯ್ಯ ಪೆರ್‍ವೋಡಿ, ಮನೋಜ್ ರೈ ಪೇರಾಲು, ರತನ್‌ಕುಮಾರ್ ಕರ್ನೂರು, ಹರೀಶ್ ಕುಮಾರ್,ವೇದನಾಥ ಸುವರ್ಣ, ರವಿರಾಜ್ ರೈ ಸಜಂಕಾಡಿ, ಶೈಲೇಶ್ ಕುಮಾರ್ ಬೆಳ್ತಂಗಡಿ,ರಾಜೇಶ್ ಶೆಟ್ಟಿ ಕೊಂಬೆಟ್ಟು, ಜಿ.ಕೆ.ಸುವರ್ಣ, ನೇಮಾಕ್ಷ ಸುವರ್ಣ, ಸುಬ್ಬಯ್ಯ ರೈ ಪೆಲತ್ತಡಿ, ಉದಯಕುಮಾರ್, ಗುರುಪ್ರಸಾದ್ ರೈ ಕುದ್ಕಾಡಿ, ಮನ್ವಿತ್ ರೈ ಕುಡ್ಕಾಡಿ, ವಿಶ್ವನಾಥ ಪೂಜಾರಿ ಪೂಜಾರಿಮೂಲೆ ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.