Breaking News

ಒಳಮೊಗ್ರು: ಕುಕ್ಕುಮುಗೇರು ದೈವಸ್ಥಾನದ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ

Puttur_Advt_NewsUnder_1
Puttur_Advt_NewsUnder_1

19ಕುಂಬ್ರ ಅ.17: ಒಳಮೊಗ್ರು ಶ್ರೀಮಹಾಕಾಳಿ ಮತ್ತು ಕುಕ್ಕುಮುಗೇರು ಉಳ್ಳಾಕುಲು ಮತ್ತು ಪರಿವಾರ ದೈವಗಳ ಕ್ಷೇತ್ರ ಒಳಮೊಗ್ರು ರಾಜಮಾಡ, ಉರ್ವ, ಮುಗೇರು ಮತ್ತು ಕೈಕಾರದಲ್ಲಿ 2017ರ ಜ. 14 ರಿಂದ 20ರ ವರೆಗೆ ನಡೆಯುವ ಬ್ರಹ್ಮಕಲಶೋತ್ಸವ ಅಂಗವಾಗಿ ಪೂರ್ವಭಾವಿ ಸಭೆ ಒಳಮೊಗ್ರು ರಾಜಮಾಡದ ವಠಾರದಲ್ಲಿ ಅ.೧೮ ರಂದು ಕ್ಷೇತ್ರ ಆಡಳಿತ ಮೋಕ್ತೇಸರ ಚಿಕ್ಕಪ್ಪ ನಾಕ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಕ್ಷೇತ್ರದ ಪುನಃ ನವೀಕರಣದ ಅಂತಿಮ ಕಾಮಗಾರಿಯ ಕುರಿತು ಮಾಹಿತಿ ನೀಡಿ, ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆಗೆ ವಿವಿಧ ಸಮಿತಿ ರಚಿಸಲಾಯಿತು.
ಸಭೆಯಲ್ಲಿ ಕ್ಷೇತ್ರದ ಆಡಳಿತ ಮೋಕ್ತೇಸರ ವಿಜಯ ಕುಮಾರ್ ರೈ ಮುಗೇರು, ಜೆ.ಕೆ. ವಸಂತ ಗೌಡ, ಜೀರ್ಣೋದ್ಧಾರ ಸಮಿತಿ ಪ್ರಮುಖರಾದ ಕುಂಬ್ರ ದುರ್ಗಾಪ್ರಸಾದ್ ರೈ, ಎಂ.ಎಸ್. ಮುಕ್ಕುಂದ, ಪ್ರಕಾಶ್ಚಂದ್ರ ರೈ ಕೈಕಾರ, ರಕ್ಷಿತ್ ರೈ ಮುಗೇರು, ಒಳಮೊಗ್ರು ಗ್ರಾ.ಪಂ. ಅಧ್ಯಕ್ಷ ಯತಿರಾಜ್, ತಾ.ಪಂ. ಸದಸ್ಯ ಹರೀಶ್ ಬಿಜತ್ರೆ, ಪಂಚಾಯತ್ ಸದಸ್ಯರಾದ ಶಶಿಕಿರಣ್ ರೈ, ಮಹೇಶ್ ಕೇರಿ, ಉಷಾನಾರಾಯಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಉಪನ್ಯಾಸಕ ವಿಶ್ವನಾಥ ಗೌಡ ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.