ಶಾಂತಿಗೋಡು:  ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ,5 ಮಂದಿ ಬಂಧನ, ಐವರು ಪರಾರಿ ಆಟಕ್ಕೆ ಬಳಸಿದ್ದ ಇಸ್ಪಿಟ್ ಎಲೆ, ಗ್ಯಾಸ್ ಲೈಟ್, ಬೈಕ್, 2 ರಿಕ್ಷಾ, ರೂ. 37,100 ನಗದು ವಶ

Puttur_Advt_NewsUnder_1
Puttur_Advt_NewsUnder_1

img-20161019-wa000310-2

ಪುತ್ತೂರು: ಶಾಂತಿಗೋಡು ಗ್ರಾಮದ ಸರೋಳಿ ಎಂಬಲ್ಲಿ ಜುಗಾರಿ ಅಡ್ಡೆಗೆ ಪುತ್ತೂರು ನಗರ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಅ.18ರಂದು ಮಧ್ಯರಾತ್ರಿ ನಡೆದ ದಾಳಿಯಲ್ಲಿ ಆಟದಲ್ಲಿ ನಿರತರಾಗಿದ್ದ 5ಮಂದಿಯನ್ನು ಬಂಧಿಸಿದ್ದು, ಅವರಿಂದ ಆಟಕ್ಕೆ ಬಳಸಿದ ಇಸ್ಪಿಟ್, ರೂ. 37100 ನಗದನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ. ದಾಳಿ ಸಮಯ ಐವರು ಪರಾರಿಯಾಗಿದ್ದಾರೆ.

ಮರ್ಕಂಜ ಕರಿಕ್ಕಳ ಕಲ್ಮಡ್ಕದ ಅಬ್ದುಲ್ ಖಾದರ್‌ರವರ ಪುತ್ರ ಅಬ್ದುಲ್ ರಹಿಮಾನ್(43ವ), ಬಂಟ್ವಾಳ ಸಜಿಪಮೂಡದ ಬೊಳ್ಳಾಯಿ ನಿವಾಸಿ ಗೋವಿಂದ ಪೂಜಾರಿಯವರ ಪುತ್ರ ರೋಹಿತ್(44ವ), ಚಿಕ್ಕಮುಡ್ನೂರು ತಾರಿಗುಡ್ಡೆ ನಿವಾಸಿ ರಾಮಚಂದ್ರರವರ ಪುತ್ರ ಬಿ.ಹೇಮಂತ್(32ವ), ನೇರಳಕಟ್ಟೆ ನಿವಾಸಿ ಗಣಪತಿ ದಾಸ್‌ರವರ ಪುತ್ರ ಅರುಣಪ್ರಸಾದ್(32ವ), ಮಾಣಿ ಕೊಡಾಜೆ ನಿವಾಸಿ ಕೊರಗುರವರ ಪುತ್ರ ಶಿವಪ್ಪ(37ವ)ರವರನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಆಟಕ್ಕೆ ಬಳಸಲಾಗಿದ್ದ ಟರ್ಪಾಲ್ ಮೇಲೆ ಹರಡಿದ್ದ ಇಸ್ಪಿಟ್ ಎಲೆ, ರೂ. 37100ನಗದು, 1 ಗ್ಯಾಸ್ ಲೈಟ್, ಹಿರೋ ಹೊಂಡಾ ಬೈಕ್(ಕೆ.ಎ 21 ಹೆಚ್. 9151), ಎರಡು ರಿಕ್ಷಾ (ಕೆ.ಎ 19ಸಿ 3163) ಮತ್ತು ಕೆ.ಎ.21 ಎ 8141)ನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ. ದಾಳಿ ಸಮಯದಲ್ಲಿ ಪರಾರಿಯಾದ ಬೇಬಿ ಜಾನ್ ಪುರುಷರಕಟ್ಟೆ, ಚಿನ್ಮಯ್ ಯಾನೆ ತಿಮ್ಮಪ್ಪ, ಅಶೋಕ್, ವಾಸು, ಅಜೀಜ್, ಪ್ರಕಾಶ್‌ರವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಪುತ್ತೂರು ನಗರ ಠಾಣೆ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಹೆಡ್‌ಕಾನ್‌ಸ್ಟೇಬಲ್ ರಾಧಾಕೃಷ್ಣ, ಕಾನ್‌ಸ್ಟೇಬಲ್‌ಗಳಾದ ಪ್ರಶಾಂತ್ ಶೆಟ್ಟಿ, ಹರೀಶ್, ಮಲ್ಲೇಶ್, ಮಂಜುನಾಥ್, ರಮೇಶ್, ಶರೀಫ್ ದಾಳಿಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.