ಗುಂಡ್ಯಡ್ಕ ಭಜನಾ ಮಂದಿರದಲ್ಲಿ ಗಣಪತಿ ಹವನ, ಮೃತ್ಯುಂಜಯ ಹೋಮ, ಸಾಮೂಹಿಕ ಸತ್ಯನಾರಾಯಣ ಪೂಜೆ

Puttur_Advt_NewsUnder_1
Puttur_Advt_NewsUnder_1

gundyadka-2dsc_0173_2

gundyadka-1dsc_0248_2

ಬೆಟ್ಟಂಪಾಡಿ :ಇಲ್ಲಿಯ ಗುಂಡ್ಯಡ್ಕ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಗಣಪತಿ ಹವನ , ಮೃತ್ಯುಂಜಯ ಹೋಮ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಅ.19 ರಂದು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಸ್ವರ ದೇವಸ್ಥಾನದ ಪ್ರಧಾನ ಅರ್ಚಕ ದಿವಾಕರ ಭಟ್ ಇವರ ನೇತೃತ್ವದಲ್ಲಿ ನಡೆಯಿತು.
ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ನಂತರ ಗಣಪತಿ ಹೋಮ, ಮೃತ್ಯಂಜಯ ಹೋಮ ನಡೆಯಿತು. ನಂತರ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಮಹಾಮಂಗಳಾರತಿ ನಡೆಯಿತು. ಮಧ್ಯಾಹ್ನ ನಡೆದ ಧಾರ್ಮಿಕ ಸಭೆಯಲ್ಲಿ ಪ್ರಿಯದರ್ಶಿನಿ ಶಾಲೆಯ ಮುಖ್ಯಗುರು ರಾಜೇಶ್ ನೆಲ್ಲಿತ್ತಡ್ಕ ಧಾರ್ಮಿಕ ಉಪನ್ಯಾಸ ನೀಡಿದರು. ನಿವೃತ್ತ ದೈಹಿಕ ಶಿಕ್ಷಕ ಎನ್ ಸಂಜೀವ ರೈ ಅಧ್ಯಕ್ಷತೆ ವಹಿಸಿದ್ದರು. ಯೊಗೀಶ ಮಣಿಯಾಣಿ ತಲೆಪ್ಪಾಡಿ , ವೆಂಕಟ್ರಮಣ ಬೋರ್ಕರ್ ಬ್ರಹ್ಮರಗುಂಡ , ಭಾಸ್ಕರ ರೈ ಗುತ್ತು, ಭಜನಾ ಮಂದಿರದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ರಂಗನಾಥ ರೈ ಗುತ್ತು , ಆಡಳಿತ ಸಮಿತಿಯ ಗೌರವಾಧ್ಯಕ್ಷ ವಿನೋದ್ ಕುಮಾರ್ ರೈ ಗುತ್ತು ,ಅಧ್ಯಕ್ಷ ಅಮ್ಮಣ್ಣಿ ತಲೆಪ್ಪಾಡಿ ,ಜೀರ್ಣೋದ್ದಾರ ಸಮಿತಿಯ ಕಾರ್‍ಯದರ್ಶಿ ಚಂದ್ರನ್ ತಲೆಪ್ಪಾಡಿ , ಕೋಶಾಧಿಕಾರಿ ಶಿವಕುಮಾರ್ ಬಲ್ಲಾಳ್ ಬೀಡು, ಗೌರವ ಸಲಹೆಗಾರ ರವಿನಾಥ ರೈ ಗುಂಡ್ಯಡ್ಕ, ಕೋಶಾಧಿಕಾರಿ ಗೋಪಾಲ ಜಿ, ದೈವಜ್ಞರಾದ ವೇಣು ಬಿ ಮುಳ್ಳೇರಿಯಾ ಉಪಸ್ಥಿತರಿದ್ದರು.
ಅಣ್ಣಪ್ಪ ತಲೆಪ್ಪಾಡಿ ಸ್ವಾಗತಿಸಿ ಶಂಕರ ಗುಂಡ್ಯಡ್ಕ ವರದಿ ವಾಚಿಸಿದರು.ರವಿ ಗುಂಡ್ಯಡ್ಕ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಮಂಡಳಿ ಸದಸ್ಯರು , ಯುವಕ ಮಂಡಲದ ಸದಸ್ಯರು ಹಾಗೂ ಊರವರು ಸಹಕರಿಸಿದರು. ನಂತರ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.