ಕೊನೆಗೂ ಹೊಂಡಕ್ಕೆ ಮುಕ್ತಿ ನೀಡಿದ ನಗರಸಭೆ

Puttur_Advt_NewsUnder_1
Puttur_Advt_NewsUnder_1

1ಪುತ್ತೂರು: ಪುತ್ತೂರು ನಗರದ ಮುಖ್ಯ ರಸ್ತೆಯಿಂದ ಎಂ.ಟಿ ರಸ್ತೆಗೆ ಸಂಪರ್ಕ ಕಲ್ಪಿಸುವಲ್ಲಿ ಉಂಟಾಗಿದ್ದ ಬೃಹತ್ ಗಾತ್ರದ ಹೊಂಡಕ್ಕೆ ಕೊನೆಗೂ ಮುಕ್ತಿ ದೊರಕಿದೆ. ನಗರಸಭೆ ವತಿಯಿಂದ ಇಲ್ಲಿನ ಹೊಂಡವನ್ನು ದುರಸ್ತಿ ಮಾಡುವ ಮೂಲಕ ಸಾರ್ವಜನಿಕರ ಬೇಡಿಕೆಯನ್ನು ಈಡೇರಿಸಿದ್ದಾರೆ.
ಹೊಂಡದಿಂದ ಅಗುತ್ತಿರುವ ಅಪಾಯದ ಬಗ್ಗೆ ಸೆ. 2 ರಂದು ಸುದ್ದಿಬಿಡುಗಡೆ ಪತ್ರಿಕೆಯಲ್ಲಿ ಹೊಂಡ ಮುಚ್ಚುವವರು ಯಾರು ಎಂಬ ಶೀರ್ಷಿಕೆಯಡಿ ಸಚಿತ್ರ ವರದಿ ಪ್ರಕಟವಾಗಿ ಸಂಬಂಧಿಸಿದವರನ್ನು ಎಚ್ಚರಿಸಿತ್ತು.
ಅ. 17ರಂದು ನಗರಸಭಾ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿನ ಹೊಂಡ ಮುಚ್ಚುವ ಕಾರ್ಯನಡೆದಿತ್ತು. ಈ ಸಂದರ್ಭದಲ್ಲಿ ಎಂ. ಟಿ ರಸ್ತೆಯ ಹೊಂಡಕ್ಕೂ ಮುಕ್ತಿ ದೊರಕಿದಂತಾಗಿದೆ, ಇದರಿಂದ ದ್ವಿಚಕ್ರ ವಾಹನ ಚಾಲಕರು ಮತ್ತು ಇತರೆ ವಾಹನ ಚಾಲಕರು ನಿಟ್ಟುಸಿರು ಬಿಡುವಂತಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.