ಅಂತರಾಷ್ಟ್ರೀಯ ದಕ್ಷಿಣ ಏಷ್ಯಾ ಈಜು ಸ್ಪರ್ಧೆ; ಫಿಲೋಮಿನಾದ ವೈಷ್ಣವ್ ಹೆಗ್ಡೆಗೆ ಚಿನ್ನದ ಪದಕ

Puttur_Advt_NewsUnder_1
Puttur_Advt_NewsUnder_1

vaishnav vaishnav1

*ದ.ಕ ಈಜು ಸ್ಪರ್ಧೆಯ ಇತಿಹಾಸದಲ್ಲಿಯೇ ಪ್ರಥಮ

*18ರ ವಯೋಮಾನ ಹಾಗೂ 50 ಮೀ. ಬ್ರೆಸ್ಟ್‌ಸ್ಟ್ರೋಕ್

* 29.31 ಸೆಕೆಂಡ್‌ನಲ್ಲಿ ಈಜಿ ಮಹತ್ತರ ಸಾಧನೆ

* ಟೋಕಿಯೋದಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್‌ಶಿಪ್‌ಗೆ ಆಯ್ಕೆ

* ಜಾಗತಿಕ ಈಜು ರ‍್ಯಾಂಕಿಂಗ್ ದರ್ಜೆಯಲ್ಲಿ 766 ಅಂಕಗಳ ಹೆಗ್ಗಳಿಕೆ

ಪುತ್ತೂರು: ಶ್ರೀಲಂಕಾದ ಕೊಲಂಬೋದಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯಾ ಈಜು ಸ್ಪರ್ಧೆಯಲ್ಲಿ ದರ್ಬೆ ಸಂತ ಫಿಲೋಮಿನಾ ಕಾಲೇಜ್‌ನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಹಾಗೂ ಪುತ್ತೂರು ಅಕ್ವೆಟಿಕ್ ಕ್ಲಬ್‌ನ ವೈಷ್ಣವ್ ಹೆಗ್ಡೆರವರು ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ಪಡೆದಿದ್ದಾರೆ. ಇದು ದಕ್ಷಿಣ ಕನ್ನಡ ಈಜು ಸ್ಪರ್ಧೆಯ ಇತಿಹಾಸದಲ್ಲಿಯೇ ಈಜುಪಟುವೊಬ್ಬರು ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕವನ್ನು ಪಡೆದ ಮೊದಲಿಗರಾಗಿದ್ದಾರೆ.

 ವೈಷ್ಣವ್ ಹೆಗ್ಡೆರವರು 18ರ ವಯೋಮಾನದ 50 ಮಿ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ 29.31 ಸೆಕೆಂಡ್‌ನಲ್ಲಿ ಗುರಿ ಸಾಧಿಸಿ ಗೆಲುವಿನ ನಗೆ ಬೀರಿದರು. ಸಾರ್ಕ್ ರಾಷ್ಟ್ರಗಳ ಅತ್ಯುನ್ನತ ಈಜುಗಾರರು ಸ್ಪರ್ಧಿಸಿದ್ದು ಇವರ ಜೊತೆ ದ್ವಿತೀಯ ಸ್ಥಾನವನ್ನು ಭಾರತದವರೇ ಆಗಿರುವ ಜಶನ್‌ದೀಪ್ ಸಿಂಗ್‌ರವರು 29.60 ಸೆಕೆಂಡ್‌ನಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಹಾಗೂ ಶ್ರೀಲಂಕಾದ ಕಿರಣ್ ಜಾಸಿಂಗೆರವರು 30.03 ಸೆಕೆಂಡ್‌ನೊಂದಿಗೆ ಗುರಿ ಸಾಧಿಸಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿದ್ದಾರೆ.  ಕಳೆದ ತಿಂಗಳು ರಾಂಚಿಯಲ್ಲಿ ನಡೆದಿದ್ದ ನ್ಯಾಷನಲ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ವೈಷ್ಣವ್‌ರವರು ಬೆಳ್ಳಿ ಪದಕ ಪಡೆದು ದಕ್ಷಿಣ ಏಷ್ಯಾ ಮಟ್ಟಕ್ಕೆ ಆಯ್ಕೆಯಾಗಿದ್ದರು. ಮುಂದಿನ ನವಂಬರ್ ತಿಂಗಳಲ್ಲಿ ಜಪಾನ್‌ನ ಟೋಕಿಯೋದಲ್ಲಿ ನಡೆಯಲಿರುವ ಏಷ್ಯನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ 10 ಮಂದಿ ಈಜುಗಾರರಲ್ಲಿ ಇವರು ಅತೀ ಸಣ್ಣ ವಯಸ್ಸಿನವರೆಂದು ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. ಚಂಢೀಗಡದ ಪಂಜಾಬ್ ವಿ.ವಿಯ ಆಶ್ರಯದಲ್ಲಿ ಅ.24 ರಿಂದ 28ರವರೆಗೆ ಜರಗುವ ಅಖಿಲ ಭಾರತ ಅಂತರ್ ವಿ.ವಿ. ಸ್ಪರ್ಧೆಯಲ್ಲಿ ವೈಷ್ಣವ್‌ರವರು ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸುತ್ತಿದ್ದಾರೆ.

ಪರ್ಲಡ್ಕ ನಿವಾಸಿ ಡಾ.ಅಜಿತ್ ಹೆಗ್ಡೆ ಹಾಗೂ ಪ್ರತಿಮಾ ಹೆಗ್ಡೆರವರ ಪುತ್ರರಾಗಿರುವ ಇವರಿಗೆ ಪುತ್ತೂರು ಅಕ್ವೆಟಿಕ್ ಕ್ಲಬ್, ಬಾಲವನ ಈಜುಕೊಳದ ಪಾರ್ಥ ವಾರಣಾಸಿ, ನಿರೂಪ್ ಜಿ.ಆರ್. ಮತ್ತು ವಸಂತ್ ಕುಮಾರ್‌ರವರಿಂದ ಇವರು ತರಬೇತಿ ಪಡೆಯುತ್ತಿದ್ದಾರೆ. ಮುಳಿಯ ಫಿಟ್‌ನೆಸ್‌ನ ನವೀನ್ ಕೆ ಹಾಗೂ ಶೋನಾ ರವರಿಂದ ದೈಹಿಕ ತರಬೇತಿ ಪಡೆಯುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.