ಹಳ್ಳಿಯ ಸೊಗಡು, ಪಟ್ಟಣದ ಬೆಡಗಿನೊಂದಿಗೆ ಕುಂಬ್ರದಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿದೆ ಬಿ.ಕೆ.ರೆಸಿಡೆನ್ಸಿಯಲ್ ಅಪಾರ್ಟ್‌ಮೆಂಟ್

Puttur_Advt_NewsUnder_1
Puttur_Advt_NewsUnder_1

kumbra

* ಪ್ರಕೃತಿ ರಮಣೀಯ ಸುಂದರ ಪರಿಸರ

* ಪುತ್ತೂರು ಪಟ್ಟಣದಿಂದ 10 ಕಿ.ಮೀ ದೂರ

* 24 ಗಂಟೆ ನೀರು, ವಿದ್ಯುತ್ ಸೌಲಭ್ಯ

* 3 ಮಹಡಿಗಳ ವಸತಿ ಸಂಕೀರ್ಣ

* ಗ್ರಾಹಕರಿಗೆ, ಸಂದರ್ಶಕರಿಗೆ ವಾಹನ ಪಾರ್ಕಿಂಗ್

* ಸಿ.ಸಿ.ಕ್ಯಾಮರ ಸೌಲಭ್ಯ

ಪುತ್ತೂರು: ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿ ಪ್ರಶಾಂತ ಹಳ್ಳಿಯ ಸೊಗಡು ಮತ್ತು ಪಟ್ಟಣದ ಬೆಡಗಿನೊಂದಿಗೆ ನಿರ್ಮಾಣವಾಗಲಿರುವ 12 ವಾಸ್ತವ್ಯದ ಕೊಠಡಿಗಳನ್ನೊಳಗೊಂಡ ಆಧುನಿಕ, ಸುಸಜ್ಜಿತ, ನವೀನ ವಿನ್ಯಾಸದ ಹಾಗೂ ಅತೀ ಸುರಕ್ಷಿತವಾದ ಬಿ.ಕೆ.ರೆಸಿಡೆನ್ಸಿಯಲ್ ಅಪಾರ್ಟ್‌ಮೆಂಟ್ ಉದ್ಘಾಟನೆಗೆ ಸಿದ್ಧಗೊಂಡಿದೆ.

ಪ್ರಸ್ತುತ ದಿನಗಳಲ್ಲಿ ಪೇಟೆಯಲ್ಲಿ ಮನೆ ಕಟ್ಟಲು ಕಷ್ಟಕರ. ಜೊತೆಗೆ ಒತ್ತಡದ ಬದುಕು. ಇದನ್ನು ಸುಧಾರಿಸಿ ಮನಸ್ಸಿಗೆ ಶಾಂತಿ ಉಂಟು ಮಾಡಲು ಗ್ರಾಮೀಣ ಸೌಂದರ್ಯ ಅಗತ್ಯ. ಈ ನಿಟ್ಟಿನಲ್ಲಿ ಇಂದು ಜನರು ಪೇಟೆಯನ್ನು ಬಿಟ್ಟು ಗ್ರಾಮೀಣ ಭಾಗದ ಕಡೆ ಹೆಚ್ಚು ಒತ್ತು ನೀಡುವ ಸಂದರ್ಭದಲ್ಲೇ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ಪಟ್ಟಣದಿಂದ 10 ಕಿ.ಮೀ ದೂರದಲ್ಲಿರುವ ಕುಂಬ್ರದಲ್ಲಿರುವ ಸುಂದರ ಪ್ರಕೃತಿ ರಮಣೀಯವಾದ ಸ್ಥಳದಲ್ಲಿ ಅ.24ರಂದು ಈ ಅಪಾರ್ಟ್‌ಮೆಂಟ್ ಉದ್ಘಾಟನೆಗೊಳ್ಳಲಿರುವುದು ಒಂದು ಸಂತೋಷದ ವಿಚಾರವೇ ಸರಿ. 3 ಮಹಡಿಗಳನ್ನೊಳಗೊಂಡ ನೂತನ ವಾಸ್ತವ್ಯ ಸಂಕೀರ್ಣದಲ್ಲಿ 2 ಬಿ.ಹೆಚ್.ಕೆ, 3 ಬಿ.ಹೆಚ್.ಕೆ ವಸತಿ ಸೌಲಭ್ಯ, 24 ಗಂಟೆಯೂ ನಿರಂತರ ನೀರು ಮತ್ತು ವಿದ್ಯುತ್ ವ್ಯವಸ್ಥೆ, ವಾಸ್ತವ್ಯದ ಗ್ರಾಹಕರಿಗಾಗಿ ಮತ್ತು ಸಂದರ್ಶಕರಿಗೆ ವಾಹನ ಪಾರ್ಕಿಂಗ್, ಸಿ.ಸಿ ಕ್ಯಾಮರ ಸೌಲಭ್ಯ, ಅತ್ಯುತ್ತಮ ಗುಣಮಟ್ಟದ ಮರದ ಪಿಠೋಪಕರಣ ಮತ್ತು ವಿವಿಧ ಕಾಮಗಾರಿ, ವಾಸ್ತು ಆಧಾರಿತ ಮನ ಮೆಚ್ಚುವ ವಿನ್ಯಾಸ ಈ ವಾಣಿಜ್ಯ ಸಂಕೀರ್ಣದ ವೈಶಿಷ್ಠ್ಯವಾಗಿದೆ. ಮಾಣಿ, ಮೈಸೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಬೆಳ್ಳಾರೆ, ಸುಳ್ಯ, ಪುತ್ತೂರು ರಸ್ತೆಗ ಸಂಪರ್ಕ ರಸ್ತೆಯ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಊರಿಗೆ ಕೊಡುಗೆಯಾಗಿದೆ. ಜೊತೆಗೆ ವಸತಿ ಸಂಕೀರ್ಣದಲ್ಲಿ ಸ್ಪರ್ಧಾತ್ಮಕ ದರದಲ್ಲಿ ವಸತಿ ಸೌಲಭ್ಯ ನೀಡಲಾಗುವುದು ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಎಂ.ಬಶೀರ್ ಇಂದ್ರಾಜೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.