Breaking News

ಕಾಂಕ್ರೀಟ್ ರಸ್ತೆಯಲ್ಲಿ ಏನಿದು ಮಾಯೆ?

Puttur_Advt_NewsUnder_1
Puttur_Advt_NewsUnder_1

9-1 9-2ಪುತ್ತೂರು: ಇಲ್ಲಿನ ಮುಖ್ಯ ರಸ್ತೆಯಿಂದ ಬಸ್ಸು ನಿಲ್ದಾಣಕ್ಕೆ ತೆರಳುವ ಶಿವರಾಮ ಕಾರಂತ ಪ್ರೌಢ ಶಾಲೆಯ ಬಳಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯಲ್ಲಿ ನೀರು ಕಾರಂಜಿಯಂತೆ ಹರಿಯುತ್ತಿದೆ. ಮೊದಲಿಗೆ ಶುದ್ದ ನೀರು ಹರಿಯುತ್ತಿತ್ತು, ಆದರೆ ಈಗ ಶುದ್ದ ನೀರಿನ ಬದಲು ಕಲುಷಿತ ನೀರು ಹರಿಯುತ್ತಿದೆ. ಇಲ್ಲಿ ಯಾವುದೇ ಚರಂಡಿಯಿಲ್ಲ, ಒಂದು ವೇಳೆ ಚರಂಡಿ ಇದ್ದರೂ ಕಲುಷಿತ ನೀರು ಹರಿಯುವುದಿಲ್ಲ ಆದರೆ ರಸ್ತೆ ಮಧ್ಯೆ ಕಲುಷಿತ ನೀರು ಎಲ್ಲಿಂದ ಬರುತ್ತಿದೆ ಎಂಬುದು ಯಾರಿಗೂ ಗೊತ್ತಾಗದೇ ಇರುವುದರಿಂದ ಜನರು ಏನಿದು ಮಾಯೆ ಎಂದು ಆಶ್ಚರ್ಯಪಡುವಂತಾಗಿದೆ.
ಕಾಂಕ್ರೀಟ್ ರಸ್ತೆಯ ಮಧ್ಯ ಭಾಗದಲ್ಲಿ ಇಂತಹದೊಂದು ಮಾಯೆ ಕಳೆದ ಒಂದು ತಿಂಗಳಿನಿಂದ ಇದೆ, ಈ ಬಗ್ಗೆ ಸಾರ್ವಜನಕರು ನಗರಸಭೆಗೆ ಮಾಹಿತಿ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಯಾರೂ ಈ ವರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಒಂದು ವೇಳೆ ಕುಡಿಯುವ ನೀರಿನ ಪೈಪ್ ಒಡೆದು ಅದರಿಂದ ಶುದ್ದ ನೀರು ಬರುತ್ತಿರುವುದಾದರೆ ಅಷ್ಟೇನು ಗಂಭೀರ ವಿಚಾರವಲ್ಲ ಆದರೆ ಕುಡಿಯುವ ನೀರಿನ ಪೈಪ್ ಒಡೆದು ಅದಕ್ಕೆ ಕಲುಷಿತ ನೀರು ಒಳಸೇರುವುದಾದರೆ ಆತಂಕದ ಸಂಗತಿಯೇ ಸರಿ. ನಗರಸಭೆ ಆರೋಗ್ಯ ಅಧಿಕಾರಿಗಳೊಮ್ಮೆ ಇಲ್ಲಿಗೆ ಭೇಟಿ ನೀಡಿ ನೀರಿನ ಮಾಯೆಯ ಮೂಲವನ್ನು ಪತ್ತೆ ಮಾಡಿದರೆ ಉತ್ತಮ ಎನ್ನುತ್ತಾರೆ ನಾಗರಿಕರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.