Breaking News

ಅ. 23: ಹೈದರಾಬಾದಿನಲ್ಲಿ ಕನ್ನಡ ಡಿಂಡಿಮವ-332

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸ್ನೇಹ ಯುವ ಸಾಂಸ್ಕೃತಿಕ ಸಂಘ ಬೆಂಗಳೂರು ಮತ್ತು ನೇತ್ರಾಂಜಲಿ ಮ್ಯೂಸಿಕ್ ಆಂಡ್ ಡ್ಯಾನ್ಸ್ ಅಕಾಡೆಮಿ ಹೈದರಾಬಾದ್ ಆಶ್ರಯದಲ್ಲಿ ಹೈದರಾಬಾದ್ ಲಿಂಗಮ್ ಪಲ್ಲಿ ಸುಂದರಾಯ ವಿಜ್ಞಾನ ಸಭಾಂಗಣದಲ್ಲಿ ಅ. 23ರಂದು ನಡೆಯುವ ದಕ್ಷಿಣ ಭಾರತ ನೃತ್ಯಹಬ್ಬದಲ್ಲಿ ಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರದ ಮಕ್ಕಳಿಂದ ಧ್ವನಿ ಮುದ್ರಿತ ವಾದ್ಯ ಸಂಗೀತದೊಂದಿಗೆ ಬಾರಿಸು ಕನ್ನಡ ಡಿಂಡಿಮವ ಕಾರ್ಯಕ್ರಮದ 332ನೇ ಪ್ರದರ್ಶನ ನಡೆಯಲಿದೆ.

ಕೃತಿಕಾ, ನೀಮಾ, ನಿರೀಕ್ಷಾ ಮತ್ತು ರೆಮೊನಾ, ವಿಷ್ಣುಪ್ರಿಯ ಇವರ ಸಮೂಹ ನೃತ್ಯಗಳನ್ನು ಹಸ್ತಾರವರಿಂದ ಸುಂದರ ಗೀತೆಗಳನ್ನು ಎಂದಿಗಿಂತ ವಿಭಿನ್ನವಾಗಿ ಜೋಡಿಸಲಾಗಿದೆ. 15 ಮಂದಿಯ ತಂಡದ ಉಸ್ತುವಾರಿಯನ್ನು ವಸಂತಿ ಆರ್. ಐತಾಳ್, ಉಷಾ ನಾರಾಯಣ ಕುಂಬ್ರ, ಜ್ಯೋತಿ ಜನಾರ್ದನ ವಹಿಸಲಿದ್ದು, ಪ್ರಯಾಣದ ಉಸ್ತುವಾರಿಯನ್ನು ರಮೇಶ್ ಕೆ.ವಿ. ದರ್ಬೆ ವಹಿಸಿರುತ್ತಾರೆಂದು ಕಲಾಕೇಂದ್ರ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.