ಜನಪದ ಸಂಸ್ಕೃತಿಯ ಅನಾವರಣ ಸವಣೂರು ಪ.ಪೂ ಕಾಲೇಜು ಗೋಡೆ ತುಂಬಾ ವರ್ಲಿ ಚಿತ್ರ

Puttur_Advt_NewsUnder_1
Puttur_Advt_NewsUnder_1

5-1 5-2 5-3*ಪ್ರವೀಣ್ ಕುಮಾರ್

ಶೈಕ್ಷಣಿಕ ಪರಿಸರ ನಿರ್ಮಾಣಕ್ಕೆ ಸಹಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ವರ್ಲಿ ಚಿತ್ರ ಅನಾವರಣಗೊಂಡಿರುವುದು ಮಕ್ಕಳಲ್ಲಿ ಕಲಿಕೆಯ ವಾತಾವರಣ ನಿರ್ಮಾಣಕ್ಕೆ ಪೂರಕ, ಆಕರ್ಷಕವಾದ ಚಿತ್ರ, ವಿನ್ಯಾಸಗಳು ಮಕ್ಕಳಲ್ಲಿ ಒಂದು ರೀತಿಯ ಸೌಂದರ್ಯ ಪ್ರಜ್ಞೆ ಮೂಡಿಸುವುದಲ್ಲದೇ, ನಮ್ಮ ಕಲಾ ಶ್ರೀಮಂತಿಕೆ, ಕಲಾ ಸೊಬಗನ್ನು ಅರಿತುಕೊಳ್ಳಲು ಸಹಕಾರಿ, ಮಕ್ಕಳು ಮುಂದಿನ ದಿನಗಳಲ್ಲಿ ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಿದಂತಾಗಿದೆ, ಒಟ್ಟಿನಲ್ಲಿ ಶಿಕ್ಷಣ ಕೇಂದ್ರದಲ್ಲಿ ಆಕರ್ಷಣೀಯ ವಾತಾವರಣದ ಜತೆಗೆ ಶೈಕ್ಷಣಿಕ ಪರಿಸರ ನಿರ್ಮಾಣಕ್ಕೆ ಬಹಳ ಉಪಯುಕ್ತವಾಗಿದೆ -ಬಿ.ವಿ ಸೂರ್ಯನಾರಾಯಣ, ಪ್ರಾಂಶುಪಾಲರು, ಸ.ಪ.ಪೂ ಕಾಲೇಜ್ ಸವಣೂರು

ಸವಣೂರು: ಇಲ್ಲಿ ಶಾಲೆಯ ಗೋಡೆಯ ತುಂಬಾ ಜನಪದ ಸಂಸ್ಕೃತಿಯ ಅನಾವರಣ, ದಸರಾ ಉತ್ಸವದ ಅನುರಣನ. ಹೌದು ಇದು ಸವಣೂರು ಪ.ಪೂ.ಕಾಲೇಜಿನಲ್ಲಿ ದಾನಿಗಳ ನೆರವಿನಿಂದ ಸುಮಾರು 20ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕೊಠಡಿಯ ಗೋಡೆ ತುಂಬಾ ಕಾಣಿಸಿದ ವರ್ಲಿಕಲೆಯ ಸೊಬಗು.
ತುಳುನಾಡಿನ ವಿವಿಧ ಆಚರಣೆಗಳು ಈ ಗೋಡೆಯಲ್ಲಿ ವರ್ಲಿ ಚಿತ್ರದ ಮೂಲಕ ಕಾಣುತ್ತದೆ.ಬಹುಶಃ ಕಾಲೇಜಿನಲ್ಲಿ ಇದೊಂದು ವಿನೂತನ ಪ್ರಯತ್ನ..
ಸವಣೂರು ಹಲವಾರು ವರ್ಷಗಳಿಂದ ಸಾಂಸ್ಕೃತಿಕವಾಗಿ , ಸಾಹಿತ್ಯಿಕವಾಗಿ ಜಿಲ್ಲೆಯ ತುಂಬೆಲ್ಲಾ ಹೆಸರು ಮಾಡಿರುವ ಊರು. ಪುತ್ತೂರು ಕೊಂಬೆಟ್ಟು ಸ.ಪ.ಪೂ.ಕಾಲೇಜಿನ ಚಿತ್ರಕಲಾ ಶಿಕ್ಷಕ ಜಗನ್ನಾಥ ಅರಿಯಡ್ಕ ಅವರ ನೇತೃತ್ವದ ತಂಡ ಗೋಡೆಗಳ ತುಂಬಾ ವರ್ಲಿ ಚಿತ್ರದ ಮೂಲಕ ತಮ್ಮ ಕಲೆಗೆ ಜೀವ ತುಂಬಿದ್ದಾರೆ. ಶಾಲೆಗಳಲ್ಲಿ ವರ್ಲಿ ಚಿತ್ರ ಬಿಡಿಸುವುದು ಹಾಗೂ ಕಲೆಗೆ ಜೀವತುಂಬುವ ಕೆಲಸ ವಿವಿಧೆಡೆಯಾಗಿದೆ, ಆದರೆ ಇಲ್ಲಿ ಒಂದು ಕಾನ್ಸೆಪ್ಟ್ ಆಧಾರದಲ್ಲಿ ವರ್ಲಿ ಕಲೆಯನ್ನು ಜೀವತುಂಬಿರುವುದು ಇದೇ ಮೊದಲು.ಇಲ್ಲಿ ಜನಪದರ ಜೀವನ ಚರಿತ್ರೆಯನ್ನು ದಾಖಲಾಗುವಂತೆ ಮಾಡಿದ್ದಾರೆ, ಜೊತೆಗೆ ಇದಕ್ಕೆ ಪೂರಕವಾಗಿ ತುಳುನಾಡಿನ ಸಂಸ್ಕೃತಿಯನ್ನು ಚಿತ್ರದ ಮೂಲಕ ಅನಾವರಣ ಮಾಡಿದ್ದಾರೆ. ಹೀಗಾಗಿ ಇದು ಅಪರೂಪದ ಕೆಲಸ.
ಏನೆಲ್ಲಾ ಇದೆ?: ಇಲ್ಲಿ ಅನಾವರಣಗೊಂಡ ವರ್ಲಿ ಕಲೆಯಲ್ಲಿ ತುಳುನಾಡ ಜಾನಪದ ಸಂಸ್ಕೃತಿ ವೈಭವೀಕರಿಸಿದೆ. ಇದರಲ್ಲಿ ಜನಪದ ನೃತ್ಯ, ಹುಲಿವೇಷ,ಕಂಡ ಕೋರಿಯ ಸಂಭ್ರಮದ ಪೂಕರೆ ಉತ್ಸವದಿಂದ ಹಿಡಿದು ಪಿಲಿಪಂಜಿ ಕುಣಿತ,ದುಡಿಕುಣಿತ, ಕಂಬಳ, ನಾಗಾರಾಧನೆ, ಭೂತಾರಾಧನೆಯು ಕಲಾವಿದರ ಕೈಚಳಕದಲ್ಲಿ ಮೂಡಿಬಂದಿದೆ.
ಇದರೊಂದಿಗೆ ಕರಾವಳಿಯ ಮೀನುಗಾರಿಕೆ ,ಗ್ರಾಮ್ಯ ಜನರ ಬದುಕಿನ ರೂಪಕ , ಯಕ್ಷಗಾನ, ಸುಗ್ಗಿ ಕುಣಿತದ ಹೂರಣವನ್ನು ತೋರ್ಪಡಿಸಿದ್ದಾರೆ.
ಬಾಲ ಕಾರ್ಮಿಕ ವಿರೋಧಿ ಸಂದೇಶ: ಜನಪದ ಸಂಸ್ಕೃತಿಯ ಜತೆಗೆ ದೇಶದ ಸಮಸ್ಯೆಗಳಲ್ಲಿ ಒಂದಾದ ಬಾಲಕಾರ್ಮಿಕ ಪದ್ದತಿಯ ವಿರೋಧದ ಕಲೆಯೂ ವಿಶೇಷವಾಗಿ ಗಮನ ಸೆಳೆಯುತ್ತಿದೆ.ಇದರ ಜತೆಗೆ ಕಟ್ಟಡದ ಮೇಲ್ಛಾವಣಿಯ ಗೋಡೆಯಲ್ಲಿ ಮೈಸೂರು ದಸರಾ ಉತ್ಸವದ ಸಂಭ್ರಮವನ್ನು ಕಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ ಕಲಾವಿದರು.
ಇವರು ಕೈಜೋಡಿಸಿದವರು: ಜಗನ್ನಾಥ ಅರಿಯಡ್ಕ ಅವರ ಅವರ ಈ ವಿಭಿನ್ನ ಯೋಚನೆಗೆ ಕಾಲೇಜಿನ ಪ್ರಾಚಾರ್ಯ ಬಿ.ವಿ.ಸೂರ್ಯನಾರಾಯಣ ,ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಗಿರಿಶಂಕರ್ ಸುಲಾಯ, ಕಾಲೇಜ್ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ರೊ. ಪಿ.ಎಚ್.ಕರುಣಾಕರ ರೈ ಪಿ.ಡಿ., ಹಿರಿಯ ವಿದ್ಯಾರ್ಥಿ ಸಂಘದವರ ಸಂಪೂರ್ಣ ಸಹಕಾರ ಹಾಗೂ ಸಹಾಯ ಇದೆ. ಜಗನ್ನಾಥ ಅರಿಯಡ್ಕ ಅವರು ತನ್ನ ಯೋಚನೆಗೆ ಅವರ ಕಲಾವಿದ ಮಿತ್ರರಾದ ಕುಂಬ್ರ ಪ.ಪೂ,ಕಾಲೇಜಿನ ಕಲಾಶಿಕ್ಷಕ ಪ್ರಕಾಶ್ ವಿಟ್ಲ ,ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ಕಲಾ ಶಿಕ್ಷಕ ಸುಚೇತ್ ,ಮಂಗಳೂರು ಗಣಪತಿ ಹೈಸ್ಕೂಲ್‌ನ ಚಿತ್ರಕಲಾ ಶಿಕ್ಷಕ ಸುಂದರ ಬೆಳ್ಳಿಪ್ಪಾಡಿ ,ಕಲಾವಿದ ಮಧು ಐವರ್ನಾಡು ಅವರು ಚಿತ್ರ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಒಂದು ವಾರದ ಶ್ರಮ: ಅ.22ರಂದು ಉದ್ಘಾಟನೆಗೊಳ್ಳಲಿರುವ ನೂತನ ಕಟ್ಟಡದ ಗೋಡೆಯ ತುಂಬಾ ವರ್ಲಿಕಲೆಯನ್ನು ಮೂಡಿಸಲು ಈ ತಂಡ ಒಂದು ವಾರ ಶ್ರಮ ಪಟ್ಟಿದ್ದಾರೆ.ವಿದ್ಯಾರ್ಥಿಗಳಿಗೆ ಪಾಠದ ಜತೆಗೆ ನಮ್ಮ ಸಂಸ್ಕೃತಿಯನ್ನು ಅರಿಯಲು ಇದೊಂದು ಉತ್ತಮ ಪ್ರಯತ್ನ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.